• Home
 • »
 • News
 • »
 • coronavirus-latest-news
 • »
 • ಖಾಸಗಿ ಕ್ಲಿನಿಕ್ ಬಂದ್ ಮಾಡಿದರೆ ಲೈಸೆನ್ಸ್ ರದ್ದು; ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ

ಖಾಸಗಿ ಕ್ಲಿನಿಕ್ ಬಂದ್ ಮಾಡಿದರೆ ಲೈಸೆನ್ಸ್ ರದ್ದು; ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

ಕೊರೋನಾ ಭೀತಿಯಿಂದ ಇಡೀ ರಾಜ್ಯದಲ್ಲಿ ಖಾಸಗಿ ಕ್ಲಿನಿಕ್ ಗಳು ಬಂದ್ ಆಗಿವೆ. ಇಂತಹ ಪರಿಸ್ಥಿತಿಯಲ್ಲಿ ಬಂದ್ ಮಾಡಿದರೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗಲಿದೆ. ಆದ್ದರಿಂದ ಖಾಸಗಿ ವೈದ್ಯರು ಸರ್ಕಾರದ ಕೈಜೋಡಿಸಬೇಕು

 • Share this:

  ಚಾಮರಾಜನಗರ(ಏ.8):ಕೊರೋನಾ ಭೀತಿಯಿಂದ ಬಂದ್ ಮಾಡಿರುವ ಖಾಸಗಿ ಕ್ಲಿನಿಕ್ ಗಳನ್ಮು ಕೂಡಲೇ ತೆರೆಯಬೇಕು ಇಲ್ಲದಿದ್ದಲ್ಲಿ ದಂಡ ಹಾಕುವುದರ ಜೊತೆಗೆ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.


  ಕೊರೋನಾ ಭೀತಿಯಿಂದ ಇಡೀ ರಾಜ್ಯದಲ್ಲಿ ಖಾಸಗಿ ಕ್ಲಿನಿಕ್ ಗಳು ಬಂದ್ ಆಗಿವೆ. ಇಂತಹ ಪರಿಸ್ಥಿತಿಯಲ್ಲಿ ಬಂದ್ ಮಾಡಿದರೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗಲಿದೆ. ಆದ್ದರಿಂದ ಖಾಸಗಿ ವೈದ್ಯರು ಸರ್ಕಾರದ ಕೈಜೋಡಿಸಬೇಕು. ಅವರಿಗೆ ಅಗತ್ಯವಾದ ಮೆಡಿಕಲ್ ಕಿಟ್, ಮಾಸ್ಕ್ ಹಾಗೂ ಥರ್ಮಾಮೀಟರ್ ಗಳನ್ನು ಸರ್ಕಾರ ನೀಡಲು ಸಿದ್ದವಿದೆ ಎಂದರು.


  ಇಷ್ಟು ದಿನ ಖಾಸಗಿ ವೈದ್ಯರು ಕಮರ್ಷಿಯಲ್ ಆಗಿ ಕ್ಲಿನಿಕ್ ನಡೆಸಿಕೊಂಡು ಬಂದಿದ್ದಾರೆ, ಅವರು ಏನೇ ಮಾಡಿದರೂ ಕೇಳಿಲ್ಲ. ಆದರೆ, ಈಗ ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ಸಚಿವ ಶ್ರೀರಾಮುಲು ಮನವಿ ಮಾಡಿದರು


  ರಾಜ್ಯದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ


  ರಾಜ್ಯದಲ್ಲಿ ಇದುವರೆಗೆ 181 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 5 ಮಂದಿ ಮೃತಪಟ್ಟಿದ್ದು, 28 ಮಂದಿ ಗುಣಮುಖರಾಗಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.


  ನಿಜಾಮುದ್ದೀನ್ ಜಮಾತ್ ಗೆ ಹೋಗಿ ಬಂದವರು ಮರೆಮಾಚದೆ ಮುಂದೆ ಬರಬೇಕು ಸರ್ಕಾರ ನಿಮ್ಮ ಜೊತೆ ಇದೆ. ನಿಮ್ಮ ಪ್ರಾಣ ಉಳಿಸುವ ಕೆಲಸ ಮಾಡುತ್ತದೆ ನಾವು ಕೊರೋನಾಗೆ ಸಂಬಂಧಿಸಿದಂತೆ ಯಾವುದೇ ಜಾತಿಗೆ ಲೇಬಲ್ ಹಚ್ಚುವುದಿಲ್ಲ ಎಲ್ಲರ ಆರೋಗ್ಯದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು


  ಸಚಿವ ಸುಧಾಕರ್ ಜೊತೆ ಭಿನ್ನಾಭಿಪ್ರಾಯವಿಲ್ಲ


  ನಾನು ರಾಜ್ಯದ ವಿವಿದೆಡೆ ಪ್ರವಾಸ ಮಾಡುತ್ತಿದ್ದು, ಯಾವಾಗಲು ಬೆಂಗಳೂರಿನಲ್ಲಿರಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಕೊರೋನಾ ಸಂಬಂಧಿತ ಮಾಹಿತಿಗಳನ್ನು ತಕ್ಷಣ ನೀಡಲು ಹಿರಿಯ ಸಚಿವ ಸುರೇಶ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ. ಕೊರೋನಾದಂತಹ ಗಂಭೀರ ಸಮಸ್ಯೆಯನ್ನು ಒಬ್ಬರಿಂದ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಎಲ್ಲರು ಸೇರಿ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎಂದ ಅವರು ನನ್ನ ಹಾಗೂ ವೈದ್ಯಕೀಯ ಸಚಿವ ಸುಧಾಕರ್ ನಡುವೆ ಯಾವುದೇ ಭಿನ್ನಭಿಪ್ರಾಯ ಎಲ್ಲ ಎಂದು ಸ್ಪಷ್ಟಪಡಿಸಿದರು


  ಇದನ್ನೂ ಓದಿ : ಉತ್ತರ ಕನ್ನಡದಲ್ಲಿ ಗರ್ಭಿಣಿ ಮಹಿಳೆಗೆ ಕೊರೋನಾ – ಜಿಲ್ಲೆಯಲ್ಲಿ ಒಂಬತ್ತಕ್ಕೇರಿದ ಸೊಂಕಿತರ ಸಂಖ್ಯೆ

  Published by:G Hareeshkumar
  First published: