Coronavirus: ಭಾರತದಿಂದ ವಾಣಿಜ್ಯ, ಖಾಸಗಿ ಪ್ರಯಾಣಿಕ ವಿಮಾನಗಳ ಮೇಲಿನ ನಿಷೇಧ ವಿಸ್ತರಿಸಿದ ಕೆನಡಾ!

ಡೈರೆಕ್ಟ್ ಫ್ಲೈಟ್‌ಗಳ ಪುನಾರಂಭದ ನಂತರ ಪರೋಕ್ಷ ಮಾರ್ಗದ ಮೂಲಕ ಕೆನಡಾ ಪ್ರವೇಶಿಸಲು ನಿರ್ಗಮನದ 72 ಗಂಟೆಗಳ ಒಳಗೆ ಪ್ರಯಾಣಿಕರು ಭಾರತವಲ್ಲದೆ ಇತರ ದೇಶದಿಂದ ಮಾನ್ಯ ಕೋವಿಡ್-19 ನೆಗೆಟಿವ್ ಪರೀಕ್ಷೆಗೆ ಒಳಪಡುವುದು ಅನಿವಾರ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತದಿಂದ (India) ಕೆನಡಾಕ್ಕೆ (Canada) ಆಗಮಿಸುವ ವಿಮಾನ ಸಂಚಾರ ನಿಷೇಧವನ್ನು ಕೆನಡಾ ವಿಸ್ತರಿಸಿದ್ದು ಎಲ್ಲಾ ನೇರ ವಾಣಿಜ್ಯ ಹಾಗೂ ಖಾಸಗಿ ಪ್ರಯಾಣಿಕರ ವಿಮಾನಗಳ ಮೇಲಿನ ನಿರ್ಬಂಧಗಳು ಸಪ್ಟೆಂಬರ್ 26ರವರೆಗೆ ಜಾರಿಯಲ್ಲಿ ಇರುತ್ತವೆ. ಭಾರತದಿಂದ ಕೆನಡಾಕ್ಕೆ ನೇರ ವಿಮಾನಗಳ ಹಿಂತಿರುಗುವಿಕೆಗೆ ಕೆನಡಾ ಸಿದ್ಧತೆಗಳನ್ನು ನಡೆಸುತ್ತಿರುವ ಸಮಯದಲ್ಲಿಯೇ ಟ್ರಾನ್ಸ್‌ಪೋರ್ಟ್ ಕೆನಡಾವು ಭಾರತದಿಂದ ಕೆನಡಾಕ್ಕೆ ಎಲ್ಲಾ ನೇರ ವಾಣಿಜ್ಯ ಮತ್ತು ಖಾಸಗಿ ಪ್ರಯಾಣಿಕರ ವಿಮಾನಗಳನ್ನು ಸೆಪ್ಟೆಂಬರ್ 26, 2021ರವರೆಗೆ ನಿರ್ಬಂಧಿಸುವ ಸೂಚನೆ ನೀಡಿದೆ.

    ಟ್ರಾನ್ಸ್‌ಪೋರ್ಟ್ ಕೆನಡಾ ಹೇಳಿರುವಂತೆ ನೇರ ವಿಮಾನಗಳ ಮೇಲೆ ವಿಧಿಸಿರುವ ನಿರ್ಬಂಧಗಳ ಅವಧಿ ಪೂರ್ಣಗೊಂಡ ನಂತರ ಭಾರತದಿಂದ ಕೆನಡಾಕ್ಕೆ ಪ್ರವೇಶಿಸಲು ಅರ್ಹ ಪ್ರಯಾಣಿಕರು ನೇರ ವಿಮಾನದಲ್ಲಿ ಪ್ರಯಾಣಿಸಬಹುದು ಎಂದು ತಿಳಿಸಿದೆ. ಪ್ರಯಾಣಕ್ಕೂ ಮುನ್ನ ಭಾರತೀಯ ಪ್ರಯಾಣಿಕರು ದೆಹಲಿಯ ವಿಮಾನ ನಿಲ್ದಾಣದ ಅನುಮೋದಿತ ಪ್ರಯೋಗಾಲಯದಿಂದ ಕೋವಿಡ್-19 ನೆಗೆಟಿವ್ ಪರೀಕ್ಷೆಯನ್ನು ಮಾಡಿಸಿರಬೇಕು. ಹಾಗೂ ನಿರ್ಗಮನಕ್ಕೆ 18 ಗಂಟೆಗಳಿಗಿಂತ ಮುಂಚಿತವಾಗಿ ವರದಿ ಪಡೆದುಕೊಂಡಿರಬೇಕು ಎಂದು ಟ್ರಾನ್ಸ್‌ಪೋರ್ಟ್ ಕೆನಡಾ ತಿಳಿಸಿದೆ.

    ಬೋರ್ಡಿಂಗ್‌ಗೂ ಮುಂಚಿತವಾಗಿ ಪ್ರಯಾಣಿಕರು ಕೆನಡಾಕ್ಕೆ ಪ್ರವೇಶಿಸಲು ಅರ್ಹರಾಗಿದ್ದಾರೆ ಎಂಬುದನ್ನು ಖಚಿತಪಡಿಸಲು ಸಿಬ್ಬಂದಿ ಪ್ರಯಾಣಿಕರ ಪರೀಕ್ಷಾ ಫಲಿತಾಂಶಗಳನ್ನು ಪರಿಶೀಲಿಸುತ್ತಾರೆ ಎಂದು ಟ್ರಾನ್ಸ್‌ಪೋರ್ಟ್ ಕೆನಡಾ ತಿಳಿಸಿದೆ. ಸಂಪೂರ್ಣವಾಗಿ ಲಸಿಕೆ ಪಡೆದ ಪ್ರಯಾಣಿಕರು ತಮ್ಮ ಮಾಹಿತಿಯನ್ನು ArriveCAN ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಈ ಅವಶ್ಯಕತೆಗಳನ್ನು ಪೂರೈಸದ ಪ್ರಯಾಣಿಕರ ಬೋರ್ಡಿಂಗ್ ನಿರಾಕರಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಇದೇ ಸಮಯದಲ್ಲಿ ಮೂರು ನೇರ ವಿಮಾನಗಳು ಭಾರತದಿಂದ ಕೆನಡಾಕ್ಕೆ ಬಂದಿಳಿಯಲಿವೆ. ಈ ಮೂಲಕ ಸುಮಾರು ಐದು ತಿಂಗಳ ನಂತರ ಎರಡು ದೇಶಗಳ ನಡುವೆ ನೇರ ಸಂಪರ್ಕವನ್ನು ಪುನಾರಂಭಿಸಲಾಗುತ್ತಿದೆ.

    ದೇಶವು ಕೈಗೊಂಡಿರುವ ಸುರಕ್ಷತಾ ಕ್ರಮಗಳು ಕಾರ್ಯನಿರ್ವಹಿಸುತ್ತವೆಯೇ ಎಂಬುದನ್ನು ಪರಿಶೀಲಿಸಲು ವಿಮಾನಗಳಲ್ಲಿರುವ ಎಲ್ಲಾ ಪ್ರಯಾಣಿಕರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಟ್ರಾನ್ಸ್‌ಪೋರ್ಟ್ ಕೆನಡಾ ತಿಳಿಸಿದೆ. ಏರ್ ಕೆನಡಾ ಹೊಸ ಕೋವಿಡ್ -19 ನಿಯಮಗಳೊಂದಿಗೆ ದೆಹಲಿ-ಟೊರೊಂಟೊ ನಾನ್‌ಸ್ಟಾಪ್ ವಿಮಾನಯಾನಗಳನ್ನು ಆರಂಭಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದಿಸಲಾದ ಲಸಿಕೆಗಳನ್ನು ಪಡೆದ ಪ್ರಯಾಣಿಕರು ಕೋವಿಡ್ ಟೆಸ್ಟಿಂಗ್ ಸೆಂಟರ್ ಹಾಗೂ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ನಲ್ಲಿ ವಿಮಾನ ಹತ್ತಿದ 18 ಗಂಟೆಗಳಲ್ಲಿ RTPCR ಪರೀಕ್ಷೆಗೆ ಒಳಪಡಬೇಕು. ಈ ಎರಡೂ ಪರೀಕ್ಷೆಗಳಲ್ಲೊಂದಕ್ಕೆ ಪ್ರಯಾಣಿಕರು ಒಳಪಡುವುದು ಕಡ್ಡಾಯವಾಗಿದೆ. ಬೇರೆ ನಗರದಿಂದ ಯಾರಾದರೂ ಕನೆಕ್ಟ್ ಆಗುತ್ತಿದ್ದರೂ ಭಾರತದಲ್ಲಿ ಬೇರೆ ಯಾವುದೇ ಕ್ಲಿನಿಕ್‌ನಿಂದ ಪಡೆದ ವರದಿ ಸ್ವೀಕರಿಸಲಾಗುವುದಿಲ್ಲ ಎಂದು ಏರ್‌ಲೈನ್ ಖಚಿತಪಡಿಸಿದೆ.

    ಡೈರೆಕ್ಟ್ ಫ್ಲೈಟ್‌ಗಳ ಪುನಾರಂಭದ ನಂತರ ಪರೋಕ್ಷ ಮಾರ್ಗದ ಮೂಲಕ ಕೆನಡಾ ಪ್ರವೇಶಿಸಲು ನಿರ್ಗಮನದ 72 ಗಂಟೆಗಳ ಒಳಗೆ ಪ್ರಯಾಣಿಕರು ಭಾರತವಲ್ಲದೆ ಇತರ ದೇಶದಿಂದ ಮಾನ್ಯ ಕೋವಿಡ್-19 ನೆಗೆಟಿವ್ ಪರೀಕ್ಷೆಗೆ ಒಳಪಡುವುದು ಅನಿವಾರ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.

    ಇದನ್ನು ಓದಿ: Viral Video: ಅಲೆಕ್ಸಾಗೆ ಗಣಪತಿ ಭಜನೆ ಹೇಳಲು ಹೇಳಿದ ಅಜ್ಜಿ; ಇನ್‍ಸ್ಟಾಗ್ರಾಂನಲ್ಲಿ ವೈರಲ್ ಆದ ವಿಡಿಯೋ!

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
    First published: