Mobile ಮೂಲಕ ಕೂಡ ಕೊರೊನಾ ಬರುತ್ತಂತೆ- ಹಾಗಾದ್ರೆ ಮೊಬೈಲ್ ಸ್ಯಾನಿಟೈಸ್​ ಮಾಡೋದು ಹೇಗೆ ಇಲ್ಲಿದೆ ನೋಡಿ

ಮೊಬೈಲ್ ಬಳಕೆ ಹಲವು ಅನಾರೋಗ್ಯವನ್ನು ಸಹ ತರುತ್ತವೆ. ತಲೆನೋವು, ಕಣ್ಣು ಉರಿಯಂತಹ ಸಮಸ್ಯೆ ಉಂಟಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ಮಾರ್ಟ್‌ಫೋನ್(Smartphone) ಬಳಸದ ಜನರು ಯಾರು ಇಲ್ಲ ಹೇಳಿ, ಮೊಬೈಲ್ ಬಳಕೆಯ ಹುಚ್ಚು(Madness) ಎಷ್ಟಿದೆ ಎಂದರೆ ಒಂದು ಹೊತ್ತಿನ ಊಟವಿಲ್ಲದೇ ಇರುತ್ತಾರೆ. ಆದರೆ ಖಂಡಿತವಾಗಿ ಕೈಯಲ್ಲಿ ಮೊಬೈಲ್ ಇಲ್ಲದೇ ಇರುವುದಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಮೊಬೈಲ್ ಗೀಳು (Mobile Addiction) ಹೆಚ್ಚಾಗಿದೆ.ಅತಿಯಾದ ಮೊಬೈಲ್ ವೀಕ್ಷಣೆ ನಮ್ಮ ಕಣ್ಣು, ಮೆದುಳು, ನರ, ಕೈಗಳ ಜೀವಕೋಶಗಳಿಗೆ ಹಾನಿಕಾರವಾಗಿವೆ. ದಿನ ಪೂರ್ತಿ ಫೋನ್ ನೋಡುವುದರಿಂದ ಕ್ರಮೇಣ (Gradually Disturb) ನಮ್ಮ ದೃಷ್ಠಿಗೆ ತೊಂದರೆಯಾಗಬಹುದು.

ಸೋಂಕು ತಗಲುವ ಸಾಧ್ಯತೆ
ಮೊಬೈಲ್ ಫೋನ್‌ಗಳನ್ನ ಹೆಚ್ಚಾಗಿ ಬಳಕೆ ಮಾಡುವುದರಿಂದ ಮನುಷ್ಯನ ಮಾನಸಿಕ ಒತ್ತಡ ಜಾಸ್ತಿ ಆಗುತ್ತದೆ ಮತ್ತು ಯಾವುದೇ ಕೆಲಸವನ್ನ ಪೂರ್ತಿ ಮಾಡಲು ನಿಮಗೆ ಬಹಳ ಹೆಚ್ಚಿನ ಸಮಯ ಬೇಕಾಗುತ್ತದೆ. ಇನ್ನು ಮೊಬೈಲ್ ಫೋನ್‌ಗಳನ್ನು ಜಾಸ್ತಿ ಬಳಕೆ ಮಾಡಿದರೆ ನಿಮ್ಮ ಕೆಲಸಕ್ಕಿಂತ ಜಾಸ್ತಿ ಬೇರೆ ಕಡೆ ನಮ್ಮ ಗಮನ ಹೆಚ್ಚಾಗಿ ಹೋಗುತ್ತದೆ.

ಮೊಬೈಲ್ ಬಳಕೆ ಹಲವು ಅನಾರೋಗ್ಯವನ್ನು ಸಹ ತರುತ್ತವೆ. ತಲೆನೋವು, ಕಣ್ಣು ಉರಿಯಂತಹ ಸಮಸ್ಯೆ ಉಂಟಾಗುತ್ತದೆ. ಇದೆಲ್ಲಾ ಹೊರತಾಗಿ ಮೊಬೈಲ್ ನಮಗೆ ಕೊರೋನಾ ಸೋಂಕು ಕೂಡ ತರಬಹುದಂತೆ. ಹೌದು ಮೊಬೈಲ್ ಬಳಕೆಯಿಂದ ಕೊರೋನಾ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನಗಳು ಹೇಳಿವೆ. ಇದರಿಂದ ತಪ್ಪಿಸಿಕೊಳ್ಳಲು ಆಗಾಗ ಮೊಬೈಲನ್ನು ಕ್ಲೀನ್ ಮಾಡುತ್ತಿರಬೇಕು.

ಇದನ್ನೂ ಓದಿ: Corona Vaccine: 12-14 ವರ್ಷದೊಳಗಿನ ಮಕ್ಕಳಿಗೂ ಕೊರೋನಾ ಲಸಿಕೆ, ಯಾವಾಗಿಂದ ಹಂಚಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಮೊಬೈಲ್ ಸ್ಪರ್ಶ
ಹೊರಗೆ ಹೋದಾಗ ಅಲ್ಲಿ-ಇಲ್ಲಿ ಏನನ್ನೋ ಮುಟ್ಟಿರುತ್ತೇವೆ. ಅದೇ ಕೈಯಲ್ಲಿ ನಮ್ಮ ಮೊಬೈಲ್ ಸ್ಪರ್ಶಿಸಿರುತ್ತೇವೆ. ಇದರಿಂದ ಅನೇಕ ಬ್ಯಾಕ್ಟೀರಿಯ, ವೈರಸ್‌ಗಳು ನಮ್ಮ ದೇಹವನ್ನು ಸೇರಿ ಆರೋಗ್ಯ ಹದಗೆಡಿಸುತ್ತದೆ. ಸಾಂಕ್ರಾಮಿಕ ರೋಗ ಹರಡುವ ಸಮಯದಲ್ಲಿ ನಿಮ್ಮ ಫೋನ್ ಅನ್ನು ಸ್ವಚ್ಛಗೊಳಿಸುವುದು ತುಂಬಾ ಮುಖ್ಯ.ಕೋವಿಡ್ -19 ಹೊಸ ರೂಪಾಂತರಿ ಓಮೈಕ್ರಾನ್ ಪ್ರಕರಣಗಳು ಅತ್ಯಂತ ವೇಗವಾಗಿ ಏರುತ್ತಿದೆ. ಹೀಗಾಗಿ ಕೋವಿಡ್-19 ವಿರುದ್ಧ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲೇ ಬೇಕು. ನಮ್ಮ ಕೈ, ಬಾಯಿ ಜೊತೆ ಮೊಬೈಲನ್ನು ಕ್ಲೀನ್ ಮಾಡುತ್ತಿರಬೇಕು. ಜರ್ನಲ್ ಆಫ್ ಹಾಸ್ಪಿಟಲ್ ಪ್ರಕಾರ Covid-19 ವೈರಸ್ 9 ದಿನದವರೆಗೆ ಬದುಕಬಹುದು. ಹೀಗಾಗಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಸೂಕ್ತ.

ಸ್ಮಾರ್ಟ್‌ಫೋನ್ ಕೋವಿಡ್-19 ಅನ್ನು ಹರಡಬಹುದೇ? ಹಾಗಾದರೆ ಇದರ ಬಗ್ಗೆ ಸುರಕ್ಷಿತ ಕ್ರಮಗಳೇನು? ಮೊಬೈಲ್ ಅನ್ನು ಹೇಗೆ ಶುಚಿಗೊಳಿಸಬಹುದು, ಸರಿಯಾದ ರೀತಿಯಲ್ಲಿ ಸ್ಯಾನಿಟೈಜ್ ಮಾಡುವುದು ಹೇಗೆ? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಮೊಬೈಲ್ ಫೋನ್ ಶುಚಿಗೊಳಿಸುವಾಗ ಬೇಕಾದ ಎಚ್ಚರಿಕೆ ಕ್ರಮಗಳು
ಫೋನ್‌ನ ಸ್ಕ್ರೀನ್ ತುಂಬಾ ಸೂಕ್ಷ್ಮವಾಗಿದ್ದು, ನೀರಿನ ಅಥವಾ ಆಲ್ಕೊಹಾಲ್ ಅಂಶ ಫೋನ್ ಒಳಗೆ ಇಳಿಯದಂತೆ ಎಚ್ಚರವಹಿಸಬೇಕು.
*ಗಾಜು, ಕಿಟಕಿಗಳನ್ನು ಕ್ಲೀನ್ ಮಾಡುವ ಸ್ಪೈಗಳನ್ನು ಬಳಸಬಾರದು
*ಸ್ಯಾನಿಟೈಸ್ ಮಾಡುವ ಮೊದಲು ಫೋನ್ ಸ್ಕ್ರೀನ್ ಗಾರ್ಡ್ ಹೊಂದಿದೆಯೇ ನೋಡಿಕೊಳ್ಳಿ
*ಸರಿಯಾದ ರೀತಿಯಲ್ಲಿ ಸ್ಯಾನಿಟೈಸ್ ಮಾಡುವುದು ಹೇಗೆ

ಇದನ್ನೂ ಓದಿ: Booster Dose: ನೀವು ಬೂಸ್ಟರ್ ಡೋಸ್ ಪಡೆಯಲು ಅರ್ಹರೆ? ಎಲ್ಲಾ ಅನುಮಾನಗಳಿಗೆ ವೈದ್ಯರ ಉತ್ತರ ಇಲ್ಲಿದೆ

*ಸ್ಯಾನಿಟೈಸ್ ಮಾಡುವ ಮೊದಲು ಫೋನ್ ಸ್ವಿಚ್ಡ್ ಆಫ್ ಮಾಡಿ.
*ಆಲ್ಕೋಹಾಲ್ ಅಂಶವಿರುವ ಸ್ಯಾನಿಟೈಸ್‌ಗಳನ್ನು ಮೊಬೈಲ್ ಕ್ಲೀನ್ ಮಾಡಲು ಬಳಸಬೇಕು
*ಶುಚಿಗೊಳಿಸುವಾಗ ಫೋನ್ ಚಾರ್ಜ್‌ನಿಂದ ತೆಗೆದ ಬಳಿಕ ಸ್ಯಾನಿಟೈಸ್ ಮಾಡುವುದು ಸೂಕ್ತ
*ಚಾರ್ಜಿಂಗ್ ಕೇಬಲ್, ಇಯರ್‌ ಫೋನ್‌ ಯಾವುದನ್ನೂ ಫೋನ್‌ಗೆ ಸಂಪರ್ಕಿಸ ಬೇಡಿ.
*ಐಸೊಪ್ರೊಪೈಲ್ ಆಲ್ಕೊಹಾಲ್ (isopropyl alcohol) ಹೊಂದಿರುವ ವೈಪ್ಸ್ (ಒರೆಸುವ ಕಾಗದ) ದೊರೆಯುತ್ತವೆ. ಅದನ್ನು ಬಳಸಿ ಫೋನ್ ಒರೆಸಬಹುದು
*ಮೈಕ್ರೋ ಫೈಬರ್ ಬಟ್ಟೆ ಇಲ್ಲವೇ ಟಿಶ್ಯೂ ರೀತಿಯಲ್ಲಿರುವ ನಯವಾದ ಬಟ್ಟೆ ಅಥವಾ ತೆಳುವಾದ ಕಾಗದವನ್ನು ಫೋನ್ ಒರಸಲು ಬಳಸಬೇಕು.
ಮೊಬೈಲ್‌ನಲ್ಲಿರುವ ಧೂಳಿನ ಕಣಗಳನ್ನು ತೆಗೆಯಿರಿ
*ಸ್ಯಾನಿಟೈಸ್ ಮಾಡಿ ಬಳಿಕ ಫೋನ್‌ಗೆ ಕವರ್ ಹಾಕಿದರೆ ಸೂಕ್ತ
*ಹೀಗೆ ನಿಮ್ಮ ಫೋನನ್ನು ಆಗಾಗ್ಗೆ ಸ್ಯಾನಿಟೈಸ್, ಕ್ಲೀನ್ ಮಾಡಿದರೆ ಅಪಾಯಗಳ ಸಂಖ್ಯೆ ಕಡಿಮೆಯಾಗುತ್ತದೆ.
Published by:vanithasanjevani vanithasanjevani
First published: