ವಲಸಿಗರಿಗೆ ಆಹಾರ ಧಾನ್ಯ ಹಂಚಿಕೆ ಮಾಡುವ ಆತ್ಮ ನಿರ್ಭಾರ ಭಾರತ್ ಪ್ಯಾಕೇಜ್​ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಕೋವಿಡ್-19 ನಿಂದಾಗಿ ವಲಸೆ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಸರ್ಕಾರದ ಆರ್ಥಿಕ ಪ್ಯಾಕೇಜ್​ ಸಾಕಷ್ಟು ಅನುಕೂಲ ಮಾಡಿಕೊಡಲಿದೆ. 

news18-kannada
Updated:May 20, 2020, 3:39 PM IST
ವಲಸಿಗರಿಗೆ ಆಹಾರ ಧಾನ್ಯ ಹಂಚಿಕೆ ಮಾಡುವ ಆತ್ಮ ನಿರ್ಭಾರ ಭಾರತ್ ಪ್ಯಾಕೇಜ್​ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ವಲಸಿಗರು (ಸಾಂದರ್ಭಿಕ ಚಿತ್ರ)
  • Share this:
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಸುಮಾರು 8 ಕೋಟಿ ವಲಸಿಗರು ಮತ್ತು ಸಿಲುಕಿಕೊಂಡಿರುವ ವಲಸಿಗರಿಗೆ ತಿಂಗಳಿಗೆ 5 ಕೆಜಿ (ಮೇ ಮತ್ತು ಜೂನ್) ಆಹಾರ ಧಾನ್ಯಗಳನ್ನು ಹಂಚಿಕೆ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಎರಡು ತಿಂಗಳುಗಳ ಕಾಲ ಉಚಿತವಾಗಿ  ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ಹಂಚಿಕೆ ಮಾಡಲಾಗುವುದು.

ಇದು ಅಂದಾಜು 2,982.27 ಕೋಟಿ ರೂ.ಗಳ ಆಹಾರ ಸಹಾಯಧನ ನೀಡಲಿದೆ. ಅಂತರ-ರಾಜ್ಯ ಸಾರಿಗೆ ಮತ್ತು ನಿರ್ವಹಣಾ ವೆಚ್ಚ ಹಾಗೂ ಡೀಲರ್ ಮಾರ್ಜಿನ್/  ಹೆಚ್ಚುವರಿ ಡೀಲರ್ ಮಾರ್ಜಿನ್ ಖರ್ಚು ಸುಮಾರು 127.25 ಕೋಟಿಗಳಾಗಲಿದ್ದು, ಇದನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರ ಭರಿಸಲಿದೆ. ಅದರಂತೆ ಭಾರತ ಸರ್ಕಾರ ಸಬ್ಸಿಡಿ ರೂಪದಲ್ಲಿ ಒಟ್ಟು ಸುಮಾರು 3,109.52 ಕೋಟಿ ರೂ. ಆಗಲಿದೆ.

ಕೋವಿಡ್-19 ನಿಂದಾಗಿ ವಲಸೆ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಸರ್ಕಾರದ ಆರ್ಥಿಕ ಪ್ಯಾಕೇಜ್​ ಸಾಕಷ್ಟು ಅನುಕೂಲ ಮಾಡಿಕೊಡಲಿದೆ.

ಇದನ್ನು ಓದಿ: ಕರ್ನಾಟಕ ರಾಜ್ಯಾದ್ಯಂತ ಅರ್ಧ ದಿನದಲ್ಲಿ 63 ಹೊಸ ಕೇಸ್; ಹಾಸನದಲ್ಲಿ ಅತ್ಯಧಿಕ; ಒಟ್ಟು ಪ್ರಕರಣ 1,458ಕ್ಕೇರಿಕೆ
First published: May 20, 2020, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading