HOME » NEWS » Coronavirus-latest-news » BUSY WITH PEACOCKS SAYS RAHUL GANDHI IN DIG AT PM MODI OVER RISE IN COVID 19 CASES GNR

‘ನವಿಲು ಜತೆ ಬ್ಯುಸಿಯಾದ ಮೋದಿ; ಕೊರೋನಾ ಟೈಮಲ್ಲಿ ನಿಮ್ಮ ಜೀವನ ನೀವೇ ನೋಡಿಕೊಳ್ಳಬೇಕು‘ - ರಾಹುಲ್​ ಗಾಂಧಿ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಚೇರಿ ಇನ್ಸ್ಟಾಗ್ರಾಂ ಖಾತೆಯಲ್ಲಿ ನವಿಲು ಜತೆಗೆ ಕಾಲ ಕಳೆಯುತ್ತಿದ್ದ ವಿಡಿಯೋ ಹಂಚಿಕೊಂಡಿದ್ದರು. ಇದನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ ಹೀಗೆ ವ್ಯಂಗ್ಯವಾಡಿದ್ದಾರೆ.

news18-kannada
Updated:September 14, 2020, 3:02 PM IST
‘ನವಿಲು ಜತೆ ಬ್ಯುಸಿಯಾದ ಮೋದಿ; ಕೊರೋನಾ ಟೈಮಲ್ಲಿ ನಿಮ್ಮ ಜೀವನ ನೀವೇ ನೋಡಿಕೊಳ್ಳಬೇಕು‘ - ರಾಹುಲ್​ ಗಾಂಧಿ
ರಾಹುಲ್ ಗಾಂಧಿ
  • Share this:
ನವದೆಹಲಿ(ಸೆ.14): ಮಾರಕ ಕೊರೋನಾ ವೈರಸ್​ಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ದಿನನಿತ್ಯ ಸಾವಿರಾರು ಮಂದಿ ಕೊರೋನಾ ಸೋಂಕಿನಿಂದ ಸಾಯುತ್ತಿದ್ದಾರೆ. ಚೀನಾದಲ್ಲಿ ಕಾಣಿಸಿಕೊಂಡ ಈ ಒಂದೇ ಒಂದು ವೈರಸ್‌ ಜನಜೀವನದ ಎಲ್ಲ ಕ್ಷೇತ್ರ ದಲ್ಲೂ ಅನಿಶ್ಚಿತ ಸನ್ನಿವೇಶ ಸೃಷ್ಟಿಸಿದೆ. ಇದರಿಂದ ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವದ ಆರ್ಥಿಕ ಮತ್ತು ಸಾಮಾಜಿಕ ಚಿತ್ರಣವೇ ಬದಲಾಗಲಿದೆ. ದೇಶದ ಬಹುತೇಕ ಉದ್ಯಮಗಳು ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿ ನಶಿಸಿವೆ. ಹೀಗಿರುವಾಗಲೇ ಕೋವಿಡ್-19 ನಿರ್ವಹಣೆ ಮತ್ತು ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನಿರಂತರವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಈಗ ಮತ್ತೆ ರಾಹುಲ್​​ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ್ದಾರೆ.

ಈ ಸಂಬಂಧ ಟ್ವೀಟ್​​​ ಮಾಡಿರುವ ರಾಹುಲ್​ ಗಾಂಧಿ, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ನವಿಲುಗಳ ಜೊತೆ ಬ್ಯುಸಿಯಾಗಿದ್ದಾರೆ. ಹೀಗಾಗಿ ದೇಶದಲ್ಲಿ ಕೊರೋನಾ ಹೆಚ್ಚುತ್ತಿರುವ ಹೊತ್ತಲ್ಲಿ ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳಬೇಕು. ಆದ್ದರಿಂದ ನಿಮ್ಮ ಜಾಗ್ರತೆಯಲ್ಲಿ ನೀವಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಕಾಲೆಳೆದಿದ್ದಾರೆ.

ಮಾರಕ ಕೊರೋನಾ ಪಾಸಿಟಿವ್​​ ಕೇಸುಗಳ ಸಂಖ್ಯೆಯೂ ಈ ವಾರ 50 ಲಕ್ಷ ಗಡಿ ದಾಟಬಹುದು. ಆ್ಯಕ್ಟೀವ್​ ಕೇಸುಗಳೇ ಹತ್ತು ಲಕ್ಷ ಆಗುವ ಸಾಧ್ಯತೆ ಇದೆ. ಓರ್ವ ಮನುಷ್ಯ ಸರಿಯಾದ ಪ್ಲಾನ್​ ಇಲ್ಲದೆ ಅಹಂಕಾರದಿಂದ ಲಾಕ್​ಡೌನ್​​ ಹೇರಿಕೆ ಮಾಡಿದರ ಕೊಡುಗೆ ಇಂದು ಭಾರತದಲ್ಲಿ ಕೊರೋನಾ ಕೇಸುಗಳು ಜಾಸ್ತಿಯಾಗಲು ಕಾರಣವಾಗಿದೆ. ಎಲ್ಲರೂ ಸ್ವಾವಲಂಬಿಗಳಾಗಿ ಆತ್ಮ ನಿರ್ಭರರಾಗಿ ಎಂದು ಹೇಳುತ್ತಿರುವ ಮೋದಿ ನವಿಲುಗಳ ಜತೆ ಬ್ಯುಸಿಯಾಗಿದ್ಧಾರೆ. ಹೀಗಾಗಿ ನಿಮ್ಮ ಜೀವನ ನೀವೇ ನೋಡಿಕೊಳ್ಳಿ ಎಂದು ರಾಹುಲ್​​ ಟ್ವೀಟ್​​ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ; ಮಾಜಿ ಜೆಎನ್‌ಯು ವಿದ್ಯಾರ್ಥಿ ಮುಖಂಡ ಉಮರ್‌ ಖಾಲಿದ್‌ ಬಂಧನ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಚೇರಿ ಇನ್ಸ್ಟಾಗ್ರಾಂ ಖಾತೆಯಲ್ಲಿ ನವಿಲು ಜತೆಗೆ ಕಾಲ ಕಳೆಯುತ್ತಿದ್ದ ವಿಡಿಯೋ ಹಂಚಿಕೊಂಡಿದ್ದರು. ಇದನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ ಹೀಗೆ ವ್ಯಂಗ್ಯವಾಡಿದ್ದಾರೆ.
Published by: Ganesh Nachikethu
First published: September 14, 2020, 2:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading