ಬೆಂಗಳೂರು (ಮೇ 11); ಹಳೆಯ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳನ್ನು ಕ್ವಾರಂಟೈನ್ಗೆ ಬಳಸಿಕೊಳ್ಳುವ ಮೊಬೈಲ್ ಫಿವರ್ ಕ್ಲಿನಿಕ್ ಬಸ್ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಚಾಲನೆ ನೀಡಿದ್ದಾರೆ. ಕೊರೋನಾ ರೋಗ ಲಕ್ಷಣ ಇರುವವರನ್ನು ಆ ಸ್ಥಳಕ್ಕೆ ಆಗಮಿಸಿ ಪರೀಕ್ಷೆ ನಡೆಸುವ ಸಲುವಾಗಿ ಮತ್ತು ಈ ಬಸ್ನಲ್ಲೇ ಕ್ವಾರಂಟೈನ್ಗೆ ಒಳಪಡಿಸುವ ಸಲುವಾಗಿ ಹೌಸ್ ಜಾಯ್ ಕೇರ್ ಸಂಸ್ಥೆ ಸಹಯೋಗದಲ್ಲಿ ಈ ಬಸ್ ಅನ್ನು ಸಿದ್ದಪಡಿಸಲಾಗಿದೆ.ಈ ಮೊಬೈಲ್ ಕ್ಲಿನಿಕ್ ಗೆ ಸಿಎಂ ಬಿಎಸ್ವೈ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದ್ದಾರೆ.
ಬಸ್ ಕ್ಲಿನಿಕ್ಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಬಿಎಸ್ವೈ, “ಮೊಬೈಲ್ ಫೀವರ್ ಕ್ಲಿನಿಕ್ ಅನ್ನು ನಾಲ್ಕು ವಿಭಾಗಗಳಲ್ಲಿ ತೆರೆಯಲಾಗಿದೆ. ಬೆಂಗಳೂರಿನಲ್ಲಿ ನಾಲ್ಕು ಬಸ್ ವ್ಯವಸ್ಥೆ ಮಾಡಲಾಗಿದೆ. ಮೈಸೂರು, ಮಂಡ್ಯ, ರಾಯಚೂರು, ಮಂಗಳೂರು, ಹುಬ್ಬಳ್ಳಿ, ಬಾಗಲಕೋಟೆಯಲ್ಲೂ ಮೊಬೈಲ್ ಫೀವರ್ ಕ್ಲಿನಿಕ್ ಇದೆ. ರೋಗ ಲಕ್ಷಣಗಳು ಇರುವವರು ಬಂದು ಈ ಬಸ್ನಲ್ಲಿ ತಪಾಸಣೆ ನಡೆಸಿಕೊಳ್ಳಬಹುದು. ಬೆಂಗಳೂರು ನಗರದ್ಯಾಂತ ಈ ಬಸ್ ಗಳು ಸಂಚಾರ ನಡೆಸಲಿವೆ” ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : Indian Railways: ಇಂದಿನಿಂದ 15 ಪ್ಯಾಸೆಂಜರ್ ರೈಲಿನ ಬುಕ್ಕಿಂಗ್ ಆರಂಭ; ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ಪ್ರಮುಖ ಅಂಶಗಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ