ಕೊರೋನಾ ಸಂಕಷ್ಟ: ಸಲಹೆಗೆ ದೇವೇಗೌಡರಿಗೆ ಯಡಿಯೂರಪ್ಪ ವಂದನೆ; ವಿರೋಧ ಪಕ್ಷ ಕೇಳಿಯೇ ನಿರ್ಧಾರ

ಕೊರೋನಾ ವೈರಸ್​ ನಿಯಂತ್ರಣ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಸಾಕಷ್ಟು ಸಲಹೆ ಸೂಚನೆ ನೀಡಿದ್ದರು. ಇದಕ್ಕೆ ಬಿಎಸ್​ವೈ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಧನ್ಯವಾದ ಹೇಳಿ ಎಚ್​ಡಿಡಿಗೆ ಪತ್ರ ಬರೆದಿದ್ದಾರೆ.

ದೇವೇಗೌಡ-ಬಿಎಸ್​ ಯಡಿಯೂರಪ್ಪ

ದೇವೇಗೌಡ-ಬಿಎಸ್​ ಯಡಿಯೂರಪ್ಪ

 • Share this:
  ಬೆಂಗಳೂರು  (ಏ.12): ಕೊರೋನಾ ವೈರಸ್​ ನಿಯಂತ್ರಣಕ್ಕೆ ಬಿಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಕೊರೋನಾ ವೈರಸ್​ ವಿಚಾರದಲ್ಲಿ ವಿರೋಧ ಪಕ್ಷದ ನಾಯಕರು ರಾಜಕೀಯ ಬದಿಗಿಟ್ಟು, ಸರ್ಕಾರಕ್ಕೆ ಸಲಹೆ ಸೂಚನೆ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇದನ್ನು ಸ್ವಾಗತಿಸಿದ್ದಾರೆ.

  ಕೊರೋನಾ ವೈರಸ್​ ನಿಯಂತ್ರಣ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಸಾಕಷ್ಟು ಸಲಹೆ ಸೂಚನೆ ನೀಡಿದ್ದರು. ಇದಕ್ಕೆ ಬಿಎಸ್​ವೈ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಧನ್ಯವಾದ ಹೇಳಿ ಎಚ್​ಡಿಡಿಗೆ ಪತ್ರ ಬರೆದಿದ್ದಾರೆ.

  “ಲಾಕ್​ಡೌನ್​ನಿಂದ ದಿನಗೂಲಿಗಳು ಹಾಗೂ ರೈತರಿಗೆ ಸಂಕಷ್ಟ ಎದುರಾಗಿದೆ. ಅದಕ್ಕೆ ಸಂಬಂಧಿಸಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನೀವು ಸಲಹೆ ಸೂಚನೆಗಳನ್ನು ನೀಡಿದ್ದೀರಿ. ಇವುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ,” ಎಂದು ದೇವೇಗೌಡರಿಗೆ ಬರೆದ ಪತ್ರದಲ್ಲಿ ಬಿಎಸ್​ವೈ ತಿಳಿಸಿದ್ದಾರೆ.

  ಬಿಎಸ್​ವೈ ಪತ್ರ


  ಇನ್ನು, ತಮ್ಮ ನಿರ್ಧಾರಗಳು ಎಕಪಕ್ಷೀಯವಾಗಿರುವುದಿಲ್ಲ ಎಂದಿರುವ ಅವರು, “ನನ್ನ ನಿರ್ಧಾರ ಯಾವಾಗಲೂ ಏಕ ಪಕ್ಷೀಯವಾಗಿರುವುದಿಲ್ಲ. ನಾನು, ವಿರೋಧ ಪಕ್ಷದವರು, ವೈದ್ಯರು, ಚಿಂತಕರು ಸೇರಿ ಎಲ್ಲರ ಸಲಹೆ ಸೂಚನೆಗಳನ್ನೂ ತೆಗೆದುಕೊಂಡು ನಿರ್ಧಾರ ಕೈಗೊಳ್ಳುತ್ತೇನೆ,” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
  First published: