HOME » NEWS » Coronavirus-latest-news » BRITISH PM BORIS JOHNSON TESTS POSITIVE FOR CORONAVIRUS IN SELF ISOLATION AFTER DEVELOPING MILD SYMPTOMS RH

ಇಂಗ್ಲೆಂಡ್ ಯುವರಾಜ ಚಾರ್ಲ್ಸ್ ನಂತರ ಪ್ರಧಾನಮಂತ್ರಿ ಬೋರೀಸ್ ಜಾನ್ಸನ್​ಗೆ ತಗುಲಿದ ಕೊರೋನಾ ಸೋಂಕು!

news18-kannada
Updated:March 27, 2020, 5:19 PM IST
ಇಂಗ್ಲೆಂಡ್ ಯುವರಾಜ ಚಾರ್ಲ್ಸ್ ನಂತರ ಪ್ರಧಾನಮಂತ್ರಿ ಬೋರೀಸ್ ಜಾನ್ಸನ್​ಗೆ ತಗುಲಿದ ಕೊರೋನಾ ಸೋಂಕು!
ಬೋರಿಸ್ ಜಾನ್ಸನ್
  • Share this:
ಲಂಡನ್​: ಇಂಗ್ಲೆಂಡ್ ಯುವರಾಜ ಚಾರ್ಲ್ಸ್ ಅವರಲ್ಲಿ ಮಾರಕ ಕೊರೋನಾ ಸೋಂಕು ಕಾಣಿಸಿಕೊಂಡ ಬಳಿಕ ಇದೀಗ ಪ್ರಧಾನಿ ಬೋರೀಸ್ ಜಾನ್ಸನ್​ ಅವರಲ್ಲೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕಳೆದ 24 ಗಂಟೆಗಳಿಂದ ನನಗೆ ಸಣ್ಣದಾಗಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಟೆಸ್ಟ್​ನಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈಗ ನಾನು ಸ್ವಯಂ ಐಸೋಲೆಷನ್​ನಲ್ಲಿದ್ದೇನೆ. ಆದರೆ, ನನ್ನ ನೇತೃತ್ವದಲ್ಲಿ ಸರ್ಕಾರ ಮುಂದುವರೆಯಲಿದೆ. ಮತ್ತು  ವಿಡಿಯೋ ಕಾನ್ಫರೆನ್ಸ್​ ಮೂಲಕ ಕೊರೋನಾ ವೈರಸ್​ ವಿರುದ್ಧ ಹೋರಾಡಲು ಸಿದ್ಧನಾಗಿದ್ದೇನೆ ಎಂದು ಸ್ವತಃ ಪ್ರಧಾನಿ ಬೋರೀಸ್ ಜಾನ್ಸನ್​ ಅವರು ಟ್ವೀಟ್ ಮಾಡಿದ್ದಾರೆ.

ಬ್ರಿಟನ್ ಮಹಾರಾಣಿ ಎಲಿಜೆಬೆತ್ ಅವರ ಮೊದಲ ಮಗ, ಬ್ರಿಟನ್ ರಾಜಕುಮಾರ ಹಾಗೂ ಬ್ರಿಟನ್ ಅರಸೋತ್ತಿಗೆಯ ಉತ್ತರಾಧಿಕಾರಿ ಚಾರ್ಲ್ಸ್ (71) ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದನ್ನು ಅರಮನೆ ಮೂಲಗಳು ಗುರುವಾರ ದೃಢಪಡಿಸಿದ್ದವು. ಇದೀಗ ಬ್ರಿಟನ್ ಪ್ರಧಾನಿ ಬೋರೀಸ್ ಜಾನ್ಸನ್ ಅವರಲ್ಲೂ ಮಾರಕ ಸೋಂಕು ಕಾಣಿಸಿಕೊಂಡಿದೆ.

ಇದನ್ನು ಓದಿ: ಬ್ರಿಟನ್ ರಾಜಕುಮಾರ ಚಾರ್ಲ್ಸ್​ ಅವರಲ್ಲಿ ಮಾರಕ ಕೊರೋನಾ ಸೋಂಕು ದೃಢ
First published: March 27, 2020, 5:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories