ಬ್ರಿಟನ್ ರಾಜಕುಮಾರ ಚಾರ್ಲ್ಸ್​ ಅವರಲ್ಲಿ ಮಾರಕ ಕೊರೋನಾ ಸೋಂಕು ದೃಢ

ಚಾರ್ಲ್ಸ್ ಅವರ ಹೆಂಡತಿ ಕ್ಯಾಮಿಲ್ಲಾ ಅವರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರ ಪರೀಕ್ಷಾ ವರದಿ ನೆಗೆಟಿವ್ ಎಂದು ಬಂದಿದೆ. ಆದರೂ ಅವರು ಸ್ಕಾಟ್ಲೆಂಟ್​ನ ಕ್ಲಾರೆನ್ಸ್​ ಹೌಸ್​ನಲ್ಲಿ ಸ್ವಪ್ರೇರಣೆಯಿಂದ ಕ್ಯಾರಂಟೈನ್​ನಲ್ಲಿ ಇದ್ದಾರೆ.

ಬ್ರಿಟನ್ ರಾಜಕುಮಾರ ಚಾರ್ಲ್ಸ್

ಬ್ರಿಟನ್ ರಾಜಕುಮಾರ ಚಾರ್ಲ್ಸ್

 • Share this:
  ಲಂಡನ್: ಬ್ರಿಟನ್ ಮಹಾರಾಣಿ ಎಲಿಜೆಬೆತ್ ಅವರ ಮೊದಲ ಮಗ, ಬ್ರಿಟನ್ ರಾಜಕುಮಾರ ಹಾಗೂ ಬ್ರಿಟನ್ ಅರಸೋತ್ತಿಗೆಯ ಉತ್ತರಾಧಿಕಾರಿ ಚಾರ್ಲ್ಸ್ (71) ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅರಮನೆ ಮೂಲಗಳು ತಿಳಿಸಿವೆ.

  ಪ್ರಿನ್ಸ್ ಆಫ್ ವೇಲ್ಸ್ ಅವರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಕೋವಿಡ್-19 ರೋಗ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಉಳಿದಂತೆ ಅವರ ಆರೋಗ್ಯ ಉತ್ತಮವಾಗಿದೆ. ಕಳೆದ ಕೆಲವು ದಿನಗಳಿಂದ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು ಎಂದು ಬ್ರಿಟನ್ ಅರಮನೆಯ ಅಧಿಕಾರಿಗಳು ತಿಳಿಸಿದ್ದಾರೆ.

  ಚಾರ್ಲ್ಸ್ ಅವರ ಹೆಂಡತಿ ಕ್ಯಾಮಿಲ್ಲಾ ಅವರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರ ಪರೀಕ್ಷಾ ವರದಿ ನೆಗೆಟಿವ್ ಎಂದು ಬಂದಿದೆ. ಆದರೂ ಅವರು ಸ್ಕಾಟ್ಲೆಂಟ್​ನ ಕ್ಲಾರೆನ್ಸ್​ ಹೌಸ್​ನಲ್ಲಿ ಸ್ವಪ್ರೇರಣೆಯಿಂದ ಕ್ಯಾರಂಟೈನ್​ನಲ್ಲಿ ಇದ್ದಾರೆ. ರಾಜಕುಮಾರ ಚಾರ್ಲ್ಸ್​ ಅವರು ಸಹ ಸೆಲ್ಫ್​ ಐಸೋಲೆಷನ್​ನಲ್ಲಿ ಇದ್ದಾರೆ.

  ಇತ್ತೀಚಿನ ದಿನಗಳಲ್ಲಿ ರಾಜಕುಮಾರ ಪ್ರಿನ್ಸ್ ಸಾಕಷ್ಟು ಜನರನ್ನು ಭೇಟಿಯಾಗಿದ್ದರು. ಯಾರಿಂದ ಈ ಸೋಂಕು ತಗುಲಿರಬಹುದು ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ಅರಮನೆ ಮೂಲಗಳು ಹೇಳಿವೆ.

  ಇದನ್ನು ಓದಿ: 21 ದಿನಗಳ ಲಾಕ್‌ಡೌನ್‌ನಿಂದಾಗಿ ಭಾರತ 9 ಲಕ್ಷ ಕೋಟಿ ನಷ್ಟ ಅನುಭವಿಸಲಿದೆ; ಆತಂಕ ವ್ಯಕ್ತಪಡಿಸಿದ ಆರ್ಥಿಕ ತಜ್ಞರು

  First published: