ಕೊರೋನಾ ಹೋರಾಟಕ್ಕೆ ಬ್ರಿಟನ್ ವಿಜ್ಞಾನಿಗಳಿಂದ 50:30 ಸೂತ್ರ – ಏನಿದು ಈ ಐವತ್ತು ಮೂವತ್ತು ಫಾರ್ಮುಲಾ?

ಈ 50-30 ಸೂತ್ರವನ್ನು ಸರಿಯಾಗಿ ಪಾಲಿಸಿದರೆ ಕೊರೋನಾ ಸೋಂಕು ಹರಡುವುದನ್ನು ತಡೆಯಬಹುದಷ್ಟೇ ಅಲ್ಲದೆ, ಹಣಕಾಸು ಬಿಕ್ಕಟ್ಟನ್ನೂ ಸ್ವಲ್ಪ ತಗ್ಗಿಸಬಹುದು ಎಂದಿದ್ದಾರೆ ಸಂಶೋಧಕರು.

Vijayasarthy SN | news18
Updated:May 23, 2020, 3:24 PM IST
ಕೊರೋನಾ ಹೋರಾಟಕ್ಕೆ ಬ್ರಿಟನ್ ವಿಜ್ಞಾನಿಗಳಿಂದ 50:30 ಸೂತ್ರ – ಏನಿದು ಈ ಐವತ್ತು ಮೂವತ್ತು ಫಾರ್ಮುಲಾ?
ಪ್ರಾತಿನಿಧಿಕ ಚಿತ್ರ
  • News18
  • Last Updated: May 23, 2020, 3:24 PM IST
  • Share this:
ಲಂಡನ್: ಕೊರೋನಾ ವೈರಸ್ ಸೋಂಕು ಎಗ್ಗಿಲ್ಲದೆ ಹರಡುತ್ತಿರುವುದು ನಿಜ. ಅಮೆರಿಕದಲ್ಲಂತೂ ಇದು ಮಾರಣಹೋಮವನ್ನೇ ನಡಸುತ್ತಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಗರಿಷ್ಠಕ್ಕೇರುತ್ತಲೇ ಇದೆ. ಜಗತ್ತಿನ ಬಹುತೇಕ ದೇಶಗಳು ಲಾಕ್​ಡೌನ್ ಮೊರೆ ಹೋಗಿವೆ. ಆದರೆ, ಎಷ್ಟು ದಿನ ಲಾಕ್ ಡೌನ್ ಮಾಡಬೇಕೆಂಬುದೇ ಎಲ್ಲರಿಗೂ ತಲೆಕೆಟ್ಟಿರುವ ಅಂಶ. ಬ್ರಿಟನ್ ವಿಜ್ಞಾನಿಗಳು ಇದಕ್ಕೊಂದು ಸ್ಪಷ್ಟತೆ ಕೊಟ್ಟಿದ್ಧಾರೆ. ಲಾಕ್​ಡೌನ್​ಗಾಗಿ 50-30 ಸೂತ್ರ ಮುಂದಿಟ್ಟಿದ್ದಾರೆ. ಈ ಫಾರ್ಮುಲಾದಿಂದ ಕೊರೋನಾ ವೈರಸ್ ಹರಡಂತೆ ನಿಗ್ರಹಿಸಬಹುದು ಎಂದಿದ್ದಾರೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರ ಒಂದು ತಂಡ. ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಡಾ. ರಾಜೀವ್ ಚೌಧರಿ ಹೇಳುವ ಪ್ರಕಾರ, ಈ 50-30 ಸೂತ್ರವನ್ನು ಸರಿಯಾಗಿ ಪಾಲಿಸಿದರೆ ಕೊರೋನಾ ಸೋಂಕು ಹರಡುವುದನ್ನು ತಡೆಯಬಹುದಷ್ಟೇ ಅಲ್ಲದೆ, ಹಣಕಾಸು ಬಿಕ್ಕಟ್ಟನ್ನೂ ಸ್ವಲ್ಪ ತಗ್ಗಿಸಬಹುದು.

ಏನಿದು 50:30 ಸೂತ್ರ?

ಲಾಕ್ ಡೌನ್ ಅವಧಿ 50 ದಿನ ಇರಬೇಕು. ಕಟ್ಟುನಿಟ್ಟಾಗಿ ನಿಯಮ ಪಾಲನೆ ಆಗಬೇಕು. ಯಾವುದೇ ಸಡಿಲಿಕೆ ಇರಬಾರದು. ಆ ನಂತರ 30 ದಿನ ಕೆಲಸಗಳಿಗೆ ಅವಕಾಶ ಕೊಡಬೇಕು. ಅದಾದ ಬಳಿಕ ಮತ್ತೆ ಲಾಕ್ ಡೌನ್, ನಂತರ ಕೆಲಸ. ಹೀಗೆ ಈ ಸರಣಿ ಇದೇ ರೀತಿಯಲ್ಲಿ ಮುಂದುವರಿಯಬೇಕು. ಈ ಸಂಶೋಧಕರ ಪ್ರಕಾರ 2022ರವರೆಗೂ ಈ ಚೈನ್ ನಿರಂತರವಾಗಿರಬೇಕಂತೆ. ಇವರ ಒಂದೇ ಷರತ್ತು ಎಂದರೆ, ಲಾಕ್ ಡೌನ್ ಅವಧಿಯಲ್ಲಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಇಲ್ಲವಾದರೆ ಸೋಂಕು ನಿಗ್ರಹಿಸುವ ಕೆಲಸ ವಿಳಂಬವಾಗಬಹುದು.

ಇದನ್ನೂ ಓದಿ: ಹೆದರದಿರಿ..! ಜ್ವರ ಇಲ್ಲದವರು, ಗುಣಮುಖರಾದವರಿಂದ ಕೊರೋನಾ ಸೋಂಕು ಹರಡೋದಿಲ್ಲ

ಬ್ರಿಟನ್ ದೇಶದ ಈ ವಿಜ್ಞಾನಿಗಳು 16 ದೇಶಗಳಲ್ಲಿ ದತ್ತಾಂಶಗಳನ್ನ ಕಲೆಹಾಕಿ ಅಧ್ಯಯನ ನಡೆಸಿದ್ದಾರಂತೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.

First published: May 23, 2020, 3:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading