ಬ್ರಿಟನ್ ರಾಜಕುಮಾರ ವಿಲಿಯಂ ಇತ್ತೀಚೆಗೆ ತನ್ನ ಮೊದಲ ಕೋವಿಡ್ -19 ಲಸಿಕೆ ಪಡೆದರು. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಅಭಿಮಾನಿಗಳು ಮತ್ತು ನೋಡುಗರನ್ನು ಮೆಚ್ಚಿಸಿದೆ. ಆದರೆ, ಅವರು ಮೆಚ್ಚುಗೆ ವ್ಯಕ್ತಪಡಿಸಿರುವುದು ಕೊರೊನಾ ಮಹಾಮಾರಿ ವಿರುದ್ಧ ಲಸಿಕೆ ಪಡೆದಿರುವುದನ್ನಲ್ಲ. ಬದಲಾಗಿ ಪ್ರಿನ್ಸ್ ವಿಲಿಯಂ ಲಸಿಕೆ ಪಡೆಯುವಾಗ ತೋರಿಸಿದ ಬೈಸೆಪ್ಸ್, ಅವರ ಕಟ್ಟುಮಸ್ತಾದ ದೇಹ ನೋಡುಗರನ್ನು ಆಶ್ಚರ್ಯಚಕಿತಗೊಳಿಸಿದೆ. ಕಳೆದ ವರ್ಷ ಕೋವಿಡ್ -19ಗೆ ತುತ್ತಾಗಿದ್ದ ಪ್ರಿನ್ಸ್ ವಿಲಿಯಂ ಅವರು ತಮ್ಮ ಮೊದಲ ಕೊರೊನಾ ವೈರಸ್ ಲಸಿಕೆಯನ್ನು ಪಡೆದಿರುವುದನ್ನು ಬಹಿರಂಗಪಡಿಸಿದರು. ರಾಣಿ ಎಲಿಜಬೆತ್ ಅವರ ಮೊಮ್ಮಗ ಮತ್ತು ಬ್ರಿಟಿಷ್ ಸಿಂಹಾಸನವೇರಲು ಎರಡನೇ ಸಾಲಿನಲ್ಲಿರುವ 38 ವರ್ಷದ ವಿಲಿಯಂ ಈ ವಾರದ ಆರಂಭದಲ್ಲಿ ತಾನು ಲಂಡನ್ ಸೈನ್ಸ್ ಮ್ಯೂಸಿಯಂನಲ್ಲಿ ಚುಚ್ಚುಮದ್ದನ್ನು ಪಡೆದ ಕ್ಷಣದ ಫೋಟೋವನ್ನು ಟ್ವಿಟ್ಟರ್ನಲ್ಲಿ ಬಹಿರಂಗಪಡಿಸಿದ್ದಾರೆ.
"ಮಂಗಳವಾರ ನಾನು ಕೋವಿಡ್ - 19 ಲಸಿಕೆಯ ಮೊದಲ ಡೋಸ್ ಅನ್ನು ಸ್ವೀಕರಿಸಿದ್ದೇನೆ" ಎಂದು ಪ್ರಿನ್ಸ್ ವಿಲಿಯಂ ಹೇಳಿದರು. ಲಸಿಕೆಯ ಬಿಡುಗಡೆಯ ಹಿಂದೆ ಕೆಲಸ ಮಾಡುವ ಎಲ್ಲರಿಗೂ - ನೀವು ಮಾಡಿದ ಎಲ್ಲದಕ್ಕೂ
ಮತ್ತು ಮಾಡುತ್ತಿರುವುದನ್ನು ಮುಂದುವರಿಸಿದ್ದಕ್ಕೂ ಅವರು ಧನ್ಯವಾದಗಳನ್ನು ಹೇಳಿದರು.
On Tuesday I received my first dose of the COVID-19 vaccine.
To all those working on the vaccine rollout - thank you for everything you’ve done and continue to do. pic.twitter.com/8QP6ao5fEb
— The Duke and Duchess of Cambridge (@KensingtonRoyal) May 20, 2021
ಲಸಿಕೆಯ ಡೋಸ್ ಪಡೆದಿದ್ದಕ್ಕಾಗಿ ಅನೇಕರು ಪ್ರಿನ್ಸ್ ವಿಲಿಯಂ ಅನ್ನು ಅಭಿನಂದಿಸಿದರೆ, ಇನ್ನೂ ಹಲವರು ರಾಜಕುಮಾರನ ಕಟ್ಟುಮಸ್ತಾದ ತೋಳು ಹಾಗೂ ಬೈಸೆಪ್ ಅನ್ನು ಗಮನಿಸಿದರು. ರಾಜಕುಮಾರ ರಹಸ್ಯ ಫಿಟ್ನೆಸ್ ಉತ್ಸಾಹಿಯೇ ಎಂದು ಹಲವರು ಆಶ್ಚರ್ಯಪಟ್ಟರು.
Proud of Prince William but can we… talk about his toned arm?🙈 👀👀👀 pic.twitter.com/OvDvgvyECA
— Isa (@isaguor) May 20, 2021
ಇದನ್ನೂ ಓದಿ: Viral Video: ನಿರ್ಗತಿಕ ಮಕ್ಕಳ ಹಸಿವು ನೀಗಿಸಿದ ಹೈದರಾಬಾದ್ ಪೊಲೀಸ್; ವಿಡಿಯೋ ವೈರಲ್
ಕಳೆದ ವರ್ಷ ಏಪ್ರಿಲ್ನಲ್ಲಿ ವಿಲಿಯಂ ಕೊರೊನಾ ವೈರಸ್ಗೆ ತುತ್ತಾಗಿದ್ದರು. ಅವರ ತಂದೆ, ಪ್ರಿನ್ಸ್ ಚಾರ್ಲ್ಸ್ ಸಹ ಅದೇ ಸಮಯದಲ್ಲಿ ಸೋಂಕಿಗೆ ತುತ್ತಾಗಿದ್ದರು. ಅವರು ನವೆಂಬರ್ ವರೆಗೆ ಈ ಸುದ್ದಿಯನ್ನು ರಹಸ್ಯವಾಗಿರಿಸಿದ್ದರು.
95 ವರ್ಷದ ಎಲಿಜಬೆತ್ ರಾಣಿ ಮತ್ತು ಚಾರ್ಲ್ಸ್ ಸೇರಿದಂತೆ ರಾಜಮನೆತನದ ಇತರ ಸದಸ್ಯರು ಸಹ ತಮ್ಮ ಲಸಿಕೆ ಡೋಸ್ ಅನ್ನು ಸ್ವೀಕರಿಸಿದ್ದಾರೆ ಎಂದು ಬಹಿರಂಗಪಡಿಸಲಾಗಿದೆ.
ಇದನ್ನೂ ಓದಿ: Air India Server Hack: ಏರ್ ಇಂಡಿಯಾ ಡೇಟಾ ಹ್ಯಾಕ್; 45 ಲಕ್ಷ ಪ್ರಯಾಣಿಕರ ಖಾಸಗಿ ಮಾಹಿತಿ ಸೋರಿಕೆ
ಚುಚ್ಚುಮದ್ದು ಪಡೆದಿದ್ದು, ತುಂಬಾ ತ್ವರಿತವಾಗಿತ್ತು. ಲಸಿಕೆ ಪಡೆಯುವಾಗ ನೋವು ಕೊಡಲಿಲ್ಲ ಎಂದು ರಾಣಿ ಹೇಳಿದರು, ಮತ್ತು ಸಾರ್ವಜನಿಕರಿಗೂ ಲಸಿಕೆ ಹಾಕಿಸುವಂತೆ ಸಲಹೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ