HOME » NEWS » Coronavirus-latest-news » BRING MEDICINE FROM ANY COUNTRY AND GIVE BLACK FUNGUS PATIENTS DELHI HIGH COURT NOTICE TO CENTER GOVERNMENT MAK

Black Fungus: ಯಾವ ದೇಶದಿಂದಾದರೂ ಔಷಧಿ ತಂದು ಬ್ಲಾಕ್ ಫಂಗಸ್ ರೋಗಿಗಳಿಗೆ ನೀಡಿ; ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಸೂಚನೆ

ಬ್ಲಾಕ್​ ಫಂಗಸ್​ ರೋಗಕ್ಕೆ ಅಗತ್ಯವಾದ ಆಂಫೊಟೆರಿಸಿನ್ ಬಿ ಔಷಧಿ ಜಗತ್ತಿನಲ್ಲಿ ಎಲ್ಲೆಲ್ಲಿ ಲಭ್ಯವಿದೆ.? ಈ ಬಗ್ಗೆ ಶೀಘ್ರದಲ್ಲಿ ಮಾಹಿತಿ ಸಂಗ್ರಹಿಸಿ, ಈ ಔಷಧ ಜಗತ್ತಿನಲ್ಲಿ ಎಲ್ಲೆ ಲಭ್ಯವಿರಲಿ ತಂದು ರೋಗಿಗಳಿಗೆ ನೀಡಬೇಕು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

news18-kannada
Updated:May 21, 2021, 3:04 PM IST
Black Fungus: ಯಾವ ದೇಶದಿಂದಾದರೂ ಔಷಧಿ ತಂದು ಬ್ಲಾಕ್ ಫಂಗಸ್ ರೋಗಿಗಳಿಗೆ ನೀಡಿ; ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಸೂಚನೆ
ಬ್ಲಾಕ್ ಫಂಗಸ್.
  • Share this:
ನವ ದೆಹಲಿ (ಮೇ 21); "ಜಗತ್ತಿನ ಯಾವ ದೇಶದಿಂದಾದಲಾದರೂ ಔಷಧಿ ತಂದು ಬ್ಲಾಕ್ ಫಂಗಸ್ ರೋಗಿಗಳಿಗೆ ನೀಡಿ" ಎಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಇಂದು ಸೂಚನೆ ನೀಡಿದೆ. ದೇಶದಲ್ಲಿ ಕೊರೋನಾ ಬೆನ್ನಿಗೆ ಈಗಾಗಲೇ ಬ್ಲಾಕ್​ ಫಂಗಸ್​ ಸೋಂಕಿನ ಆರ್ಭಟ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಹತ್ತಾರು ಸಾವಿನ ಪ್ರಕರಣಗಳೂ ಈಗಾಗಲೇ ಸುದ್ದಿಯಾಗಿದೆ. ರಾಜಸ್ಥಾನದಲ್ಲಿ 100ಕ್ಕಿಂತ ಅಧಿಕವಾಗಿ ಬ್ಲಾಕ್​ ಫಂಗಸ್​ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಉಲ್ಲೇಖಿಸಿ ರಾಜಸ್ಥಾನ ಸರ್ಕಾರ ಬುಧವಾರವೇ ಈ ಸೋಂಕನ್ನು ಸಾಂಕ್ರಾಮಿಕ ಸೋಂಕು ಎಂದು ಘೋಷಿಸಿತ್ತು. ಅದರ ಬೆನ್ನಿಗೆ ಗುರುವಾರ ಕೇಂದ್ರ ಸರ್ಕಾರ ಸಹ ಎಲ್ಲಾ ರಾಜ್ಯಗಳಿಗೆ ಅಧಿಸೂಚನೆ ಹೊರಡಿಸಿ ಬ್ಲಾಕ್ ಫಂಗಸ್​ ಸೋಂಕನ್ನು ಸಂಕ್ರಾಮಿಕ ಸೋಂಕು ಎಂದು ಘೋಷಿಸುವಂತೆ ಸೂಚಿಸಿತ್ತು. ಇಂದು ದೆಹಲಿ ಹೈಕೋರ್ಟ್​ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.

ಬ್ಲಾಕ್‌ ಫಂಗಸ್ ಗೆ ಸಂಬಂಧಿಸಿದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್​ ವಿಚಾರಣೆ ವೇಳೆ, "ಬ್ಲಾಕ್​ ಫಂಗಸ್​ ರೋಗಕ್ಕೆ ಅಗತ್ಯವಾದ ಆಂಫೊಟೆರಿಸಿನ್ ಬಿ ಔಷಧಿ ಜಗತ್ತಿನಲ್ಲಿ ಎಲ್ಲೆಲ್ಲಿ ಲಭ್ಯವಿದೆ.? ಈ ಬಗ್ಗೆ ಶೀಘ್ರದಲ್ಲಿ ಮಾಹಿತಿ ಸಂಗ್ರಹಿಸಿ, ಈ ಔಷಧ ಜಗತ್ತಿನಲ್ಲಿ ಎಲ್ಲೆ ಲಭ್ಯವಿರಲಿ ತಂದು ರೋಗಿಗಳಿಗೆ ನೀಡಬೇಕು" ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಬ್ಲ್ಯಾಕ್​ ಫಂಗಸ್​ ಬಂದಿದೆಯಾ ಎಂದು ಪರೀಕ್ಷಿಸುವುದು ಹೇಗೆ?

  • ಮೂಗಿನಲ್ಲಿ ಅಸಹಜ ಕಪ್ಪು ವಿಸರ್ಜನೆ, ರಕ್ತ ಬರುವುದು, ಮೂಗಿನಲ್ಲಿ ಕಿರಿಕಿರಿ

  • ತಲೆನೋವು, ಕಣ್ಣಿನ ನೋವು, ಕಣ್ಣಿನ ಸುತ್ತ ಊತ, ಕಣ್ಣು ಕೆಂಪಾಗುವುದು

  • ದೃಷ್ಟಿ ಮಂಜಾಗುವುದು, ರೆಪ್ಪೆ ತೆರೆಯಲು/ಮುಚ್ಚಲು ಕಷ್ಟವಾಗುವುದು, ಕಣ್ಣು ಕಾಣದಿರುವುದು
  • ಮುಖ ಮರಗಟ್ಟುವಿಕೆ, ಜುಮ್​​ ಎನಿಸುವ ಅನುಭವ

  • ಆಹಾರ ಸೇವಿಸುವ ವೇಳೆ ನೋವು, ಬಾಯಿ ತೆರೆಯಲು ಕಷ್ಟವಾಗುವುದು

  • ಮುಖದಲ್ಲಿ ಊತ, ಮುಖ ಕಪ್ಪುಗಟ್ಟುವಿಕೆ , ಮುಖದಲ್ಲಿ ನೋವು

  • ಹಲ್ಲು ಉದುರುವುದು, ಬಾಯಿಯಲ್ಲಿ ಕಪ್ಪು ಬಣ್ಣ, ಊತ ಕಾಣಿಸಿಕೊಳ್ಳುವುದು


ಮೇಲಿನ ಈ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಕಾಣಬೇಕು. ಹೈ ಶುಗರ್​ ಇರುವವರು, ಅನಾರೋಗ್ಯ ಪೀಡಿತರು ಈ ಲಕ್ಷಣಗಳ ಬಗ್ಗೆ ಗಮನ ಹರಿಸಬೇಕು. ಸ್ವಯಂ ನಿಗಾ ವಹಿಸಬೇಕು. ಸಣ್ಣ ನಿರ್ಲಕ್ಷ್ಯವೂ ಮುಂದೆ ದೊಡ್ಡ ಅಪಾಯ ತಂದೊಡ್ಡಬಹುದು.

ಇದನ್ನೂ ಓದಿ: CoronaVirus: ಹೋಮ್​ ಐಸೊಲೇಶನ್​ನಲ್ಲಿದ್ದ 778 ಜನರ ಸಾವಿಗೆ ಸರ್ಕಾರವೇ ಹೊಣೆ; ಎಎಪಿ ಗಂಭೀರ ಆರೋಪ

ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಂಡಾಗ ಏನು ಮಾಡಬೇಕು?

  • ಬ್ಲ್ಯಾಕ್​ ಫಂಗಸ್​​ ಲಕ್ಷಣಗಳು ಕಂಡು ಬಂದೊಡನೆ ENT ವೈದ್ಯರನ್ನು ಸಂಪರ್ಕಿಸಿ.

  • ENT ವೈದ್ಯರ ಬಳಿ ಪರೀಕ್ಷಿಸಿ, ಚಿಕಿತ್ಸೆ ಪಡೆಯಬೇಕು.

  • ರಕ್ತದಲ್ಲಿ ಮಧುಮೇಹ ಪ್ರಮಾಣವನ್ನು ಸದಾ ಪರೀಕ್ಷಿಸುತ್ತಿರಬೇಕು.

  • ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನಿಸಬೇಕು.

  • ಇತರೆ ಆರೋಗ್ಯ ಸಮಸ್ಯೆಗಳಿದ್ದರೆ ಕೂಡಲೇ ಚಿಕಿತ್ಸೆ ಪಡೆಯಬೇಕು, ನಿರ್ಲಕ್ಷ್ಯ ಮಾಡಬಾರದು.

  • ವೈದ್ಯರನ್ನು ಕೇಳದೆ ಸ್ಟಿರಾಯಿಡ್​​, ಆ್ಯಂಟಿ ವೈರಲ್​ ಔಷಧಗಳನ್ನು ತೆಗೆದುಕೊಳ್ಳಬಾರದು.

  • ವೈದ್ಯರ ಸಲಹೆ ಮೇರೆಗೆ ಸಿಟಿ ಸ್ಕ್ಯಾನ್​, ಎಂಆರ್​ಐ ಮಾಡಿಸಬೇಕು.


ಇದನ್ನೂ ಓದಿ: Explained: ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ, ರಕ್ಷಣೆ ಹೇಗೆ? ಕಾನೂನು ಏನು ಹೇಳುತ್ತದೆ?

ಅನಗತ್ಯವಾಗಿ ವೈದ್ಯರನ್ನು ಕೇಳದೆ ಔಷಧಗಳನ್ನು ತೆಗೆದುಕೊಳ್ಳುವುದು ಪ್ರಾಣಕ್ಕೆ ಕುತ್ತು ತರಬಹುದು. ಅತಿಯಾದ ಹೆದರಿಕೆಯಿಂದ ಅಗತ್ಯವಿಲ್ಲದಿದ್ದರೂ ಸಿಟಿ ಸ್ಕ್ಯಾನ್​, ಎಂಆರ್​ಐ ಮಾಡಿಸಬಾರದು. ಭಯಕ್ಕಿಂತ ಹೆಚ್ಚಾಗಿ ಎಚ್ಚರಿಕೆಯಿಂದ ಇದ್ದರೆ ಬ್ಲ್ಯಾಕ್​ ಫಂಗಸ್​ನಿಂದ ಬಚಾವ್​ ಆಗಬಹುದು.
Youtube Video

ಇದಲ್ಲದೆ, ಬ್ಲ್ಯಾಕ್​​ ಫಂಗಸ್​ ಭೀತಿಯಲ್ಲಿರುವಾಗಲೇ ಇದಕ್ಕಿಂತ ಭಯಾನಕವಾದ ವೈಟ್​ ಫಂಗಸ್​​ ಕಾಯಿಲೆ ಸಹ ಕಾಣಿಸಿಕೊಂಡಿದೆ. ಬಿಹಾರ ರಾಜಧಾನಿ ಪಟ್ನಾದ ನಾಲ್ವರಲ್ಲಿ ವೈಟ್​​ ಫಂಗಸ್​ (ಶ್ವೇತ ಬಣ್ಣದ ಶಿಲೀಂದ್ರಿ) ಕಾಣಿಸಿಕೊಂಡಿದೆ. ಭಾರತದಲ್ಲಿ ಕಾಣಿಸಿಕೊಂಡಿರುವ ಈ ವೈಟ್​ ಫಂಗಸ್​ ಅತ್ಯಂತ ಅಪಾಯಕಾರಿ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ವೈಟ್​ ಫಂಗಸ್​ ಶ್ವಾಸಕೋಶ ಸೇರಿದಂತೆ ಹೊಟ್ಟೆ, ಕಿಡ್ನಿ, ಜನನಾಂಗಗಳು, ಬಾಯಿ, ಚರ್ಮ ಹಾಗೂ ಉಗುರಿಗೆ ಹಾನಿ ಮಾಡುತ್ತದೆ.
Published by: MAshok Kumar
First published: May 21, 2021, 3:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories