ನವ ದೆಹಲಿ; ಇನ್ಫ್ಲುಯೆನ್ಸಾನಂತೆ ಕೋವಿಡ್ -19 ವೈರಸ್ ಎಂಡೆಮಿಕ್ ಹಂತಕ್ಕೆ ಪ್ರವೇಶಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ, ಅಂದರೆ, ಇದು ಯಾವಾಗಲೂ ಒಂದು ನಿರ್ದಿಷ್ಟ ಜನಸಂಖ್ಯೆ ಅಥವಾ ಪ್ರದೇಶದಲ್ಲಿ ಇರುತ್ತದೆ. ರೂಪಾಂತರಗಳು ಸಾಮಾನ್ಯವಾಗಿದೆ. ಭಯ ಬೇಡ ಎಂದು ತಜ್ಞರು ತಿಳಿಸಿದ್ದಾರೆ. “ಕೋವಿಡ್-19 ವೈರಸ್ ಸ್ವಲ್ಪ ಸಮಯದ ನಂತರ ಇನ್ಫ್ಲುಯೆನ್ಸಾ ತರಹದ ಎಂಡೆಮಿಕ್ ಹಂತವನ್ನು ತಲುಪುತ್ತದೆ, ಮತ್ತು ದುರ್ಬಲ ಜನರಿಗೆ ಪ್ರತಿ ವರ್ಷ ಲಸಿಕೆ ಹಾಕಬೇಕಾಗಬಹುದು. ಎಂದು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ನಿರ್ದೇಶಕ ಡಾ. ಸಮೀರನ್ ಪಾಂಡಾ ಹೇಳಿದ್ದಾರೆ.
ಸಾಮಾನ್ಯವಾಗಿ ಫ್ಲೂ (ಜ್ವರ) ಎಂದು ಕರೆಯಲ್ಪಡುವ ಇನ್ಫ್ಲುಯೆನ್ಸಾ 100 ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗವಾಗಿತ್ತು, ಆದರೆ ಇಂದು ಅದು ಸ್ಥಳೀಯವಾಗಿದೆ. ಅದೇ ರೀತಿ, ಕೋವಿಡ್ -19, ಕ್ರಮೇಣ ಪ್ರಸ್ತುತ ಸಾಂಕ್ರಾಮಿಕ ಸ್ಥಿತಿಯಿಂದ ಸ್ಥಳೀಯವಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ವಯಸ್ಸಾದವರಿಗೆ ಪ್ರತಿವರ್ಷ ಫ್ಲೂ ಲಸಿಕೆ ಪಡೆಯುವಂತೆ ಶಿಫಾರಸು ಮಾಡುತ್ತೇವೆ. ಫ್ಲೂ ವೈರಸ್ ರೂಪಾಂತರಗೊಳ್ಳುತ್ತಿರುವುದರಿಂದ, ನಾವು ಏಕಕಾಲದಲ್ಲಿ ಲಸಿಕೆಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿದ್ದೇವೆ. ಆದ್ದರಿಂದ, ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಹಾಲುಣಿಸುವ ತಾಯಂದಿರು ಕೋವಿಡ್-19 ಲಸಿಕೆಯನ್ನು ಪಡೆಯಬಹುದೇ ಎಂಬ ಪ್ರಶ್ನೆಗಳ ಸುತ್ತ ಇರುವ ಮೂಡುನಂಭಿಗಳನ್ನು ಕುರಿತು: “ಹಾಲುಣಿಸುವ ತಾಯಂದಿರು ಕೋವಿಡ್ -19 ಲಸಿಕೆ ಪಡೆಯಲು ಹಿಂಜರಿಯಬಾರದು. ಲಸಿಕೆಯನ್ನು ಪಡೆಯಬೇಕು. ತಾಯಿಯ ದೇಹವು ಪ್ರತಿಕಾಯಗಳ ವಿರುದ್ಧ ಲಸಿಕೆಯನ್ನು ಉತ್ಪಾದಿಸುತ್ತದೆ ಹಾಗೂ ತಾಯಿ ಮೂಲಕ ಮಗುವಿನ ದೇಹಕ್ಕೆ ಲಸಿಕೆ ಸೇರಿಕೊಳ್ಳುತ್ತದೆ. ಇದರಿಂದ ಮಗುವಿಗೆ ರೋಗದ ವಿರುದ್ದ ಹೋರಾಡಲು ಸಹಾಯಕವಾಗಬಹುದು ಎಂದು ಡಾ. ಪಾಂಡಾ ಹೇಳಿದರು.
ಆಸ್ತಮಾ, ಧೂಳಿನ ಅಲರ್ಜಿ ಮತ್ತು ಪರಾಗ ಅಲರ್ಜಿಗಳಂತಹ ಸಾಮಾನ್ಯ ಅಲರ್ಜಿ ಹೊಂದಿರುವ ಜನರು ಸೇರಿದಂತೆ ಲಸಿಕೆ ಎಲ್ಲರಿಗೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಮೂರು ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾಗಿದೆ ಎಂದು ಅವರು ಹೇಳಿದರು. "ಆರೋಗ್ಯವು ಸ್ಥಿರವಾಗಿದ್ದರೆ, ಕೋಮೊರ್ಬಿಡಿಟಿ ಹೊಂದಿರುವ ರೋಗಿಗಳು ಲಸಿಕೆಯನ್ನು ಪಡೆಯಬಹುದು. ಮಧುಮೇಹ ಮತ್ತು ಇತರ ರೋಗನಿರೋಧಕ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವ ರೋಗಗಳಿಗೂ ಕೂಡ ಲಸಿಕೆ ಹಾಕಲು ಸೂಚಿಸಲಾ ಗುತ್ತದೆ. ಏಕೆಂದರೆ ಅವರು ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ ಎಂದು ಅವರು ಹೇಳಿದರು.
ಈಗ ಲಭ್ಯವಿರುವ ಲಸಿಕೆಗಳು ಹೊಸ ರೂಪಾಂತರಗಳ ವಿರುದ್ಧ ಹೆಚ್ಚಾಗಿ ಪರಿಣಾಮಕಾರಿಯಾಗಿವೆ. ಲಸಿಕೆಗಳು ಸೋಂಕನ್ನು ತಡೆಗಟ್ಟುವುದಿಲ್ಲ, ಆದರೆ ರೋಗವನ್ನು ಸುಧಾರಿಸುತ್ತದೆ. ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಲಸಿಕೆಗಳು ಸಹ ಹೊಸ ರೂಪಾಂತರಗಳ ವಿರುದ್ಧ ಪರಿಣಾಮಕಾರಿ ಎಂದು ಐಸಿಎಂಆರ್ ಸಾಬೀತುಪಡಿಸಿದೆ. ಆದರೆ, ವಿಭಿನ್ನ ತಳಿಗಳ ಪರಿಣಾಮಕಾರಿತ್ವವು ವಿಭಿನ್ನವಾಗಿರಬಹುದು.
SARS-CoV-2 ವೈರಸ್‌ನ ಹೊಸ ತಳಿಗಳ ವಿರುದ್ಧ ಭಾರತೀಯ ಲಸಿಕೆ ಪರಿಣಾಮಕಾರಿಯಾಗಿದೆಯೇ ಎಂಬ ಕಳವಳವನ್ನು ಕುರಿತು ಡಾ. ಪಾಂಡಾ, ಮಾರುಕಟ್ಟೆಯಲ್ಲಿ ಲಭ್ಯವಿರುವ ವಾಣಿಜ್ಯ ಕಿಟ್‌ಗಳೊಂದಿಗೆ ಕಂಡುಬರುವ ಪ್ರತಿಕಾಯಗಳು COVID ರೋಗವನ್ನು ತಡೆಗಟ್ಟುವ ಪ್ರತಿಕಾಯಗಳಲ್ಲ. ಒಬ್ಬ ವ್ಯಕ್ತಿಗೆ ಲಸಿಕೆ ಹಾಕಿದಾಗ, ಎರಡು ರೀತಿಯ ರೋಗನಿರೋಧಕ ಶಕ್ತಿ ಕಾಣಿಸಿಕೊಳ್ಳುತ್ತದೆ.
ಒಂದನ್ನು ತಟಸ್ಥಗೊಳಿಸುವ ಪ್ರತಿಕಾಯ ಅಥವಾ ಪ್ರತಿಕಾಯ-ಮಧ್ಯಸ್ಥಿಕೆಯ ಪ್ರತಿರಕ್ಷೆ ಎಂದು ಕರೆಯಲಾಗುತ್ತದೆ. ಎರಡನೆಯದು ಸೆಲ್ - ಮೀಡಿಯೇಟೆಡ್ ಇಮ್ಯುನಿಟಿ. ಮೂರನೆಯ ಮತ್ತು ಪ್ರಮುಖವಾದದ್ದು ರೋಗನಿರೋಧಕ ಸ್ಮರಣೆ. ವ್ಯಾಕ್ಸಿನೇಷನ್ ನಂತರ ರೋಗನಿರೋಧಕ ಸ್ಮರಣೆಯು ಉತ್ಪತ್ತಿಯಾಗುತ್ತದೆ ಮತ್ತು ಅದು ಜೀವಕೋಶಗಳಲ್ಲಿ ಸೇರಿಕೊಳ್ಳುತ್ತದೆ ಮತ್ತು ವೈರಸ್ ದೇಹಕ್ಕೆ ಪ್ರವೇಶಿಸಿದಾಗಲೆಲ್ಲಾ ಇದು ಸಕ್ರಿಯಗೊಳ್ಳುತ್ತದೆ ಎಂದು ಅವರು ವಿವರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ