Coronavirus: ಈ ಹಾವಿನ ವಿಷ ಕೊರೋನಾಗೆ ರಾಮಬಾಣವಂತೆ..! ಹೊಸ ಅಧ್ಯಯನ

ಒಂದು ವಿಧದ ಹಾವಿನ ವಿಷದಲ್ಲಿರುವ ಅಣುವು ಕೋತಿ ಕೋಶಗಳಲ್ಲಿ ಕರೋನವೈರಸ್ ಸಂತಾನೋತ್ಪತ್ತಿಯನ್ನು ಪ್ರತಿಬಂಧಿಸುತ್ತದೆ ಎಂದು ಬ್ರೆಜಿಲ್ ಸಂಶೋಧಕರು ಕಂಡುಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕೊರೊನಾ ವೈರಸ್‌ ಇಡೀ ಜಗತ್ತನ್ನೇ ಬಾಧಿಸುತ್ತಿದ್ದು, ಇದು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡವರನ್ನೂ ಬಿಟ್ಟಿಲ್ಲ. ಮಿಲಿಯನ್‌ಗಟ್ಟಲೆ ಜನ ಈ ವೈರಾಣುವಿಗೆ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಕೋವಿಡ್ - 19 ವೈರಸ್‌ಗೆ ಬೇರೆ ಪರಿಹಾರಗಳೇನಾದ್ರೂ ಇದೆಯಾ ಎಂದು ಸಂಶೋಧಕರು ಪತ್ತೆ ಹಚ್ಚುತ್ತಲೇ ಇದ್ದಾರೆ. ಈಗ, ಒಂದು ವಿಧದ ಹಾವಿನ ವಿಷದಲ್ಲಿರುವ ಅಣುವು ಕೋತಿ ಕೋಶಗಳಲ್ಲಿ ಕರೋನವೈರಸ್ ಸಂತಾನೋತ್ಪತ್ತಿಯನ್ನು ಪ್ರತಿಬಂಧಿಸುತ್ತದೆ ಎಂದು ಬ್ರೆಜಿಲ್ ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಕೋವಿಡ್ -19ಗೆ ಕಾರಣವಾಗುವ ವೈರಸ್ ವಿರುದ್ಧ ಹೋರಾಡಲು ಔಷಧದತ್ತ ಮೊದಲ ಹೆಜ್ಜೆಯಾಗಿದೆ. ಈ ತಿಂಗಳು ವೈಜ್ಞಾನಿಕ ನಿಯತಕಾಲಿಕ ಮಾಲಿಕ್ಯೂಲ್ಸ್‌ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ ಜರರಾಕುಸು ಪಿಟ್ ವೈಪರ್‌ನಿಂದ ಉತ್ಪತ್ತಿಯಾಗುವ ಅಣುವು ವೈರಸ್‌ನ ಸಾಮರ್ಥ್ಯವನ್ನು ಕೋತಿಯ ಸೆಲ್‌ಗಳಲ್ಲಿ 75%ನಷ್ಟು ಮಲ್ಟಿಪ್ಲೈ ಆಗುವುದನ್ನು ತಡೆಯುತ್ತದೆ ಎಂದು ಕಂಡುಕೊಂಡಿದೆ.


"ಹಾವಿನ ವಿಷದ ಈ ಅಂಶವು ವೈರಸ್‌ನಿಂದ ಬಹಳ ಮುಖ್ಯವಾದ ಪ್ರೋಟೀನ್ ತಡೆಯಲು ಸಾಧ್ಯ ಎಂಬುದನ್ನು ನಾವು ತೋರಿಸಲು ಸಾಧ್ಯವಾಯಿತು'' ಎಂದು ಬ್ರೆಜಿಲ್‌ನ ಸಾವೋ ಪಾಲೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಅಧ್ಯಯನದ ಲೇಖಕ ರಾಫೆಲ್ ಗೈಡೋ ಹೇಳಿದ್ದಾರೆ.


ಅಣುವು ಪೆಪ್ಟೈಡ್ ಅಥವಾ ಅಮೈನೋ ಆಮ್ಲಗಳ ಸರಪಳಿಯಾಗಿದ್ದು, ಇದು ಪಿಎಲ್‌ಪ್ರೋ ಎಂಬ ಕೊರೊನಾ ವೈರಸ್‌ನ ಕಿಣ್ವಕ್ಕೆ ಸಂಪರ್ಕ ಕಲ್ಪಿಸಬಹುದು. ಇದು ಇತರ ಜೀವಕೋಶಗಳಿಗೆ ಹಾನಿಯಾಗದಂತೆ ವೈರಸ್‌ನ ಸಂತಾನೋತ್ಪತ್ತಿಗೆ ಮುಖ್ಯವಾಗಿದೆ.


ಇದನ್ನೂ ಓದಿ:Delhi Rains: ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳು; ವಾಹನ ಸಂಚಾರ ಅಸ್ತವ್ಯಸ್ತ

ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಗೆ ಈಗಾಗಲೇ ಹೆಸರುವಾಸಿಯಾಗಿರುವ ಪೆಪ್ಟೈಡ್ ಅನ್ನು ಪ್ರಯೋಗಾಲಯದಲ್ಲಿ ಸಂಶ್ಲೇಷಿಸಬಹುದು ಎಂದು ಗೈಡೋ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಮೂಲಕ ಹಾವುಗಳನ್ನು ಹಿಡಿಯುವುದು ಅಥವಾ ಸಾಕುವುದು ಅನಗತ್ಯವಾಗುತ್ತದೆ.


ಇನ್ನು, "ನಾವು ಬ್ರೆಜಿಲ್‌ನ ಸುತ್ತಲೂ ಜರರಾಚುಕು ಎಂಬ ಹಾವನ್ನು ಬೇಟೆಯಾಡಲು ಹೊರಟಿರುವ ಜನರ ಬಗ್ಗೆಯೂ ಆತಂಕದಿದ್ದೇವೆ. ಈ ಹಾವುಗಳು ಜಗತ್ತನ್ನು ಉಳಿಸಲು ಹೊರಟಿದೆ ಎಂದು ಜನರು ಯೋಚಿಸಬಹುದು ಆದರೆ, ಆ ರೀತಿ ಅಲ್ಲ!'' ಎಂದು ಸಾವೋ ಪಾಲೋದಲ್ಲಿ ಬುಟಾಂಟನ್ ಸಂಸ್ಥೆಯ ಜೈವಿಕ ಸಂಗ್ರಹ ನಡೆಸುತ್ತಿರುವ ಹರ್ಪಿಟಾಲಜಿಸ್ಟ್ ಗೈಸೆಪೆ ಪೋರ್ಟೊ ಹೇಳಿದರು. ಅಲ್ಲದೆ, ಸ್ವತ: ಹಾವಿನ ವಿಷವೇ ಕೊರೊನಾವೈರಸ್‌ ಅನ್ನು ಗುಣಪಡಿಸುವುದಿಲ್ಲ'' ಎಂದೂ ಮಾಹಿತಿ ನೀಡಿದರು.

ಸಂಶೋಧಕರು ಮುಂದೆ ಅಣುವಿನ ವಿವಿಧ ಡೋಸ್‌ಗಳ ದಕ್ಷತೆಯನ್ನು ಮೌಲ್ಯಮಾಪನ ಮಾಡುತ್ತಾರೆ ಮತ್ತು ವೈರಸ್ ಅನ್ನು ಜೀವಕೋಶಗಳಿಗೆ ಪ್ರವೇಶಿಸುವುದನ್ನು ತಡೆಯಲು ಇದು ಶಕ್ತವಾಗಿದೆಯೇ ಎಂಬುದನ್ನು ಸಂಶೋಧನೆಯ ಭಾಗವಾಗಿದ್ದ ಸಾವೋ ಪಾಲೋ ರಾಜ್ಯ ವಿಶ್ವವಿದ್ಯಾಲಯದ (ಯುನೆಸ್ಪ್) ಪರೀಕ್ಷೆ ಮಾಡುವುದಾಗಿಯೂ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇದನ್ನೂ ಓದಿ:Coronavirus India: ಭಾರತದಲ್ಲಿ ಇಂದು ಅತೀ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆ

ಮಾನವ ಜೀವಕೋಶಗಳಲ್ಲಿ ಈ ವಸ್ತುವನ್ನು ಪರೀಕ್ಷಿಸಲು ಸಹ ಸಂಶೋಧಕರು ಆಶಿಸುತ್ತಾರೆ. ಆದರೆ, ಅವರು ಅದಕ್ಕೆ ಯಾವುದೇ ಟೈಮ್‌ಲೈನ್‌ ನೀಡಲಿಲ್ಲ.

6 ಅಡಿ (2 ಮೀಟರ್) ಉದ್ದವಿರುವ ಜರರಾಕುಸು ಬ್ರೆಜಿಲ್‌ನ ಅತಿ ದೊಡ್ಡ ಹಾವುಗಳಲ್ಲಿ ಒಂದಾಗಿದೆ. ಇದು ಕರಾವಳಿಯ ಅಟ್ಲಾಂಟಿಕ್ ಅರಣ್ಯದಲ್ಲಿ ವಾಸಿಸುತ್ತದೆ ಮತ್ತು ಬೊಲಿವಿಯಾ, ಪರಾಗ್ವೆ ಮತ್ತು ಅರ್ಜೆಂಟೀನಾದಲ್ಲಿಯೂ ಕಂಡುಬರುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Latha CG
First published: