Hanuman Jayanti: ಹನುಮ ಜಯಂತಿಯ ಶುಭಾಶಯ ಕೋರಿ ಕೊರೋನಾ ಔಷಧಿಗೆ ಬೇಡಿಕೆಯಿಟ್ಟ ಬ್ರೆಜಿಲ್ ಪ್ರಧಾನಿ

ಕೊರೋನಾ ಅಬ್ಬರಕ್ಕೆ ತತ್ತರಿಸಿರುವ ದೇಶಗಳ ಪೈಕಿ ಬ್ರೆಜಿಲ್ ಕೂಡ ಒಂದಾಗಿರುವುದರಿಂದ ಹನುಮ ಜಯಂತಿಗೆ ಶುಭಾಶಯ ಕೋರುವ ನೆಪದಲ್ಲಿ ಬ್ರೆಜಿಲ್ ಪ್ರಧಾನಿ ಬೋಲ್ಸನಾರೋ ಮತ್ತೊಮ್ಮೆ ಔಷಧಿಗಾಗಿ ಭಾರತಕ್ಕೆ ಮನವಿ ಮಾಡಿದ್ದಾರೆ.

Sushma Chakre | news18-kannada
Updated:April 8, 2020, 11:52 AM IST
Hanuman Jayanti: ಹನುಮ ಜಯಂತಿಯ ಶುಭಾಶಯ ಕೋರಿ ಕೊರೋನಾ ಔಷಧಿಗೆ ಬೇಡಿಕೆಯಿಟ್ಟ ಬ್ರೆಜಿಲ್ ಪ್ರಧಾನಿ
ಪ್ರಧಾನಿ ಮೋದಿ ಜೊತೆ ಬ್ರೆಜಿಲ್​ ಅಧ್ಯಕ್ಷ
  • Share this:
ನವದೆಹಲಿ (ಏ. 8): ಇಂದು ಹನುಮ ಜಯಂತಿ. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನರಿಗೆ ಹನುಮ ಜಯಂತಿಯ ಶುಭಾಶಯ ಕೋರಿದ್ದಾರೆ. ಅದೇ ರೀತಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಕೂಡ ಹನುಮ ಜಯಂತಿಯ ಶುಭಾಶಯಗಳನ್ನು ಕೋರಿದ್ದಾರೆ.

ರಾಮಾಯಣದ ಕಾಲದಲ್ಲಿಯೇ ಹನುಮಂತ ಸಂಜೀವಿನಿಯನ್ನು ತಂದಿದ್ದ ಎಂಬ ಪ್ರತೀತಿ ಇದೆ. ರಾಮನ ತಮ್ಮ ಲಕ್ಷ್ಮಣನ ಜೀವ ಕಾಪಾಡಲು ಹಿಮಾಲಯದಿಂದ ಹನುಮಂತ ಹೇಗೆ ಔಷಧಿಯನ್ನು ತಂದನೋ ಅದೇರೀತಿ ಭಾರತ ಮತ್ತು ಬ್ರೆಜಿಲ್ ಒಟ್ಟಾಗಿ ಕೊರೋನಾ ವೈರಸ್​ ವಿರುದ್ಧ ಸಮರ ಸಾರಬೇಕಾಗಿದೆ. ಈ ಕೊರೋನಾ ಮಾರಿಯನ್ನು ಮಟ್ಟಹಾಕಲು ಬ್ರೆಜಿಲ್​ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಕೆ ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ಬ್ರೆಜಿಲ್ ಪ್ರಧಾನಿ ಬೋಲ್ಸನಾರೋ ಹೇಳಿದ್ದಾರೆ.

ಇದನ್ನೂ ಓದಿ: ವಾಹನ ಸಿಗದೆ ಪರದಾಟ; ಸ್ಮಶಾನಕ್ಕೆ ಹಿಂದೂ ಮಹಿಳೆಯ ಶವ ಹೊತ್ತೊಯ್ದ ಮುಸ್ಲಿಂ ಯುವಕರು

ಮಲೇರಿಯಾಗೆ ನೀಡಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಕೊರೋನಾ ವೈರಸ್​ಗೆ ಔಷಧಿಯಾಗಿ ಬಳಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಹೆಚ್ಚಾಗಿ ಉತ್ಪಾದನೆ ಮಾಡುವ ಭಾರತದಿಂದ ಈ ಔಷಧಿಯನ್ನು ತಮ್ಮ ದೇಶಕ್ಕೆ ಪೂರೈಕೆ ಮಾಡುವಂತೆ 30 ದೇಶಗಳು ಒತ್ತಡ ಹೇರಿದ್ದವು. ಮಾನವೀಯತೆಯ ನೆಲೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ರಫ್ತಿನ ಮೇಲಿನ ನಿಷೇಧವನ್ನು ಸಡಿಲಗೊಳಿಸಲು ನಿರ್ಧರಿಸಿದ ಭಾರತ ಸರ್ಕಾರ ಕೊರೋನಾದಿಂದ ತೀವ್ರ ಹೊಡೆತಕ್ಕೊಳಗಾಗಿರುವ ದೇಶಗಳಿಗೆ ಮಾತ್ರ ಈ ಔಷಧಿಯನ್ನು ಪೂರೈಕೆ ಮಾಡುವುದಾಗಿ ಭರವಸೆ ನೀಡಿದೆ.

ಕೊರೋನಾ ಅಬ್ಬರಕ್ಕೆ ತತ್ತರಿಸಿರುವ ದೇಶಗಳ ಪೈಕಿ ಬ್ರೆಜಿಲ್ ಕೂಡ ಒಂದಾಗಿರುವುದರಿಂದ ಹನುಮ ಜಯಂತಿಗೆ ಶುಭಾಶಯ ಕೋರುವ ನೆಪದಲ್ಲಿ ಬ್ರೆಜಿಲ್ ಪ್ರಧಾನಿ ಬೋಲ್ಸನಾರೋ ಮತ್ತೊಮ್ಮೆ ಔಷಧಿಗಾಗಿ ಭಾರತಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೊರೋನಾ ಪೀಡಿತ ಬ್ರಿಟನ್ ಪ್ರಧಾನಿಗೆ ತಕ್ಕ ಶಾಸ್ತಿ ಆಗಿದೆ ಎಂದ ಮೇಯರ್ ಪಕ್ಷದಿಂದಲೇ ವಜಾ
First published: April 8, 2020, 11:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading