ಟಿಕ್‌ಟಾಕ್ ಬಹಿಷ್ಕರಿಸಿ, ಚೀನಾಗೆ ಬುದ್ದಿ ಕಲಿಸಿ: ವಿಶ್ವಕ್ಕೆ ವೈರಸ್ ಹಬ್ಬಿಸಿದ ದೇಶದ ವಿರುದ್ಧ ನೆಟ್ಟಿಗರ ಆಕ್ರೋಶ

ಉದ್ದೇಶಪೂರ್ವಕವಾಗಿ ಚೀನಾ ವಿಶ್ವದ ಇತರ ಭಾಗಗಳ ಮೇಲೆ ವೈರಸ್ ಹರಡಿದೆ. ಹೀಗಾಗಿ ಚೀನಾದಿಂದ ಹುಟ್ಟುವ ಎಲ್ಲಾ ವ್ಯವಹಾರಗಳು ಮತ್ತು ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬುದು ನೆಟ್ಟಿಗರ ಉದ್ದೇಶವಾಗಿದೆ. 

news18-kannada
Updated:April 7, 2020, 5:48 PM IST
ಟಿಕ್‌ಟಾಕ್ ಬಹಿಷ್ಕರಿಸಿ, ಚೀನಾಗೆ ಬುದ್ದಿ ಕಲಿಸಿ: ವಿಶ್ವಕ್ಕೆ ವೈರಸ್ ಹಬ್ಬಿಸಿದ ದೇಶದ ವಿರುದ್ಧ ನೆಟ್ಟಿಗರ ಆಕ್ರೋಶ
ಟಿಕ್ ಟಾಕ್
  • Share this:
ಚೀನಾದ ಹುಬೈ ಪ್ರಾಂತ್ಯದಲ್ಲಿ ಹುಟ್ಟಿಕೊಂಡ ಕೊರೋನಾವೈರಸ್ ಈಗ ಸುಮಾರು 200 ದೇಶಗಳಿಗೆ ಹರಡಿದ್ದು, ವಿಶ್ವಾದ್ಯಂತ ಒಂದು ದಶಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಪ್ರಪಂಚದಾದ್ಯಂತ ಕನಿಷ್ಠ ಎಪ್ಪತ್ತು ಸಾವಿರ ಜನರು ಸಾವನ್ನಪ್ಪಿದ್ದಾರೆ. ಆದರೆ, ವಿಶ್ವದ ಜನರು ವೈರಸ್ ಅನ್ನು ದ್ವೇಷಿಸುತ್ತಿಲ್ಲ. ಬದಲಾಗಿ ಚೀನಾವನ್ನು ದ್ವೇಷಿಸುತ್ತಿದ್ದಾರೆ. ವೈರಸ್ ಅನ್ನು ಜಗತ್ತಿಗೆ ಪರಿಚಯಿಸಿದ ಚೀನಾ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಅರ್ಧಕ್ಕಿಂತ ಹೆಚ್ಚು ದೇಶಗಳು ಲಾಕ್ ಡೌನ್ ಆಗಿವೆ. ಈ ಸಾಂಕ್ರಾಮಿಕ ರೋಗದ ಆರಂಭಿಕ ಹಂತಗಳಲ್ಲಿ ವೈರಸ್ ತಡೆಯಲು ಸಾಧ್ಯವಾಗದ ಕಾರಣ ಜನರು ಚೀನಿಯರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. #MakeChinaPay ಮತ್ತು #ChinaLiedPeopleDied ನಂತಹ ಹ್ಯಾಶ್‌ಟ್ಯಾಗ್‌ಗಳು ಸಹ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ಭಾರತದಲ್ಲಿಯೂ, ಚೀನಾದ ವಿರುದ್ಧ ದ್ವೇಷ ಹೆಚ್ಚುತ್ತಿದೆ. ಚೀನೀ ಅಪ್ಲಿಕೇಶನ್ ಟಿಕ್‌ಟಾಕ್ ಕೂಡ ಇದರಿಂದ ಹೊರತಾಗಿಲ್ಲ. #BoycottTikTok ಮತ್ತು #BoycottChineseProducts ಟ್ರೆಂಡ್‌ಗಳು ಹೆಚ್ಚಿಗಿದೆ. ಜನರು ತಮ್ಮ ಫೋನ್‌ಗಳಿಂದ ಟಿಕ್‌ಟಾಕ್ ತೆಗೆಯುತ್ತಿದ್ದಾರೆ ಮತ್ತು ಅವರು ಇದನ್ನು ಚೀನಾ ವಿರುದ್ಧ ಸೇಡು ಎಂದು ಕರೆಯುತ್ತಿದ್ದಾರೆ.

ಈಗ ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮ ಕಂಪನಿಗಳಲ್ಲಿ ಒಂದಾಗಿರುವ ಟಿಕ್ಟಾಕ್, ಚೀನಾದ ಬೈಟೆಡೆನ್ಸ್ ಒಡೆತನದಲ್ಲಿದೆ. ಈ ಅಪ್ಲಿಕೇಶನ್ ಪ್ರಪಂಚದಾದ್ಯಂತ 800 ಮಿಲಿಯನ್ ಬಳಕೆದಾರರನ್ನು ಹೊಂದಿದೆ, ಮತ್ತು ಅವರಲ್ಲಿ ಅರ್ಧದಷ್ಟು ಜನರು ಭಾರತಕ್ಕೆ ಸೇರಿದವರಾಗಿದ್ದಾರೆ. ಟಿಕ್‌ಟಾಕ್‌ನಲ್ಲಿ ಭಾರತೀಯರು ದಿನಕ್ಕೆ 52 ನಿಮಿಷಗಳನ್ನು ಕಳೆಯುತ್ತಾರೆ.

ಇದನ್ನು ಓದಿ: ಕೇಂದ್ರದಿಂದ ಪಾವತಿಯಾಗದ ಜಿಎಸ್‌ಟಿ ಬಾಕಿ, ಕಾಡುತ್ತಿರುವ ಕೊರೋನಾ; ಹದಗೆಡಲಿದೆ ದಕ್ಷಿಣ ರಾಜ್ಯಗಳ ಆರ್ಥಿಕ ಪರಿಸ್ಥಿತಿ

ಉದ್ದೇಶಪೂರ್ವಕವಾಗಿ ಚೀನಾ ವಿಶ್ವದ ಇತರ ಭಾಗಗಳ ಮೇಲೆ ವೈರಸ್ ಹರಡಿದೆ. ಹೀಗಾಗಿ ಚೀನಾದಿಂದ ಹುಟ್ಟುವ ಎಲ್ಲಾ ವ್ಯವಹಾರಗಳು ಮತ್ತು ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬುದು ನೆಟ್ಟಿಗರ ಉದ್ದೇಶವಾಗಿದೆ.

ಅಮೆರಿಕದ ಅಧ್ಯಕ್ಷರೂ ಆಗಿರುವ ಡೊನಾಲ್ಡ್ ಟ್ರಂಪ್ ಈ ಹಿಂದೆ ಇಂತಹ ಹೇಳಿಕೆ ನೀಡಿದ್ದರು. ಈ ವೈರಸ್ ಅನ್ನು ವುಹಾನ್ ವೈರಸ್ ಅಥವಾ ಚೈನೀಸ್ ವೈರಸ್ ಎಂದು ಉಲ್ಲೇಖಿಸಿದ್ದಾರೆ.ವರದಿ: ಸಂಧ್ಯಾ ಎಂ
First published: April 7, 2020, 5:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading