HOME » NEWS » Coronavirus-latest-news » BOLLYWOOD ACTOR SONU SOOD HELPED SURESH RAINA BY ARRANGING OXYGEN CYLINDER SESR

Raina-Sonu: ಆಕ್ಸಿಜನ್​ಗಾಗಿ ಟ್ವಿಟರ್​ನಲ್ಲಿ ಸಹಾಯಯಾಚಿಸಿದ ಸುರೇಶ್​ ರೈನಾ; 10 ನಿಮಿಷದಲ್ಲಿ ನೆರವು ನೀಡಿದ ಸೋನು ಸೂದ್​

ತಮ್ಮ ಕಷ್ಟಕಾಲದಲ್ಲಿ ನೆರವು ನೀಡಿದ ನಟನ ಕಾರ್ಯಕ್ಕೆ ಮನಸಾರೆ ಧನ್ಯವಾದ ಅರ್ಪಿಸಿದ ಸುರೇಶ್​ ರೈನಾ, ನಿಮ್ಮಿಂದ ಅತಿದೊಡ್ಡ ಸಹಾಯ ಸಿಕ್ಕಿದೆ. ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂದು ಹಾರೈಸಿದ್ದಾರೆ.

news18-kannada
Updated:May 6, 2021, 10:06 PM IST
Raina-Sonu: ಆಕ್ಸಿಜನ್​ಗಾಗಿ ಟ್ವಿಟರ್​ನಲ್ಲಿ ಸಹಾಯಯಾಚಿಸಿದ ಸುರೇಶ್​ ರೈನಾ; 10 ನಿಮಿಷದಲ್ಲಿ ನೆರವು ನೀಡಿದ ಸೋನು ಸೂದ್​
ರೈನಾ- ಸೂದ್​​
  • Share this:
ಬಾಲಿವುಡ್​ ನಟ ಸೋನು ಸೂದ್​ ಸೇವಾ ಮನೋಭಾವಗಳ ವರ್ಣನೆಗೆ ಪದಗಳೆ ಮುಗಿದಿದೆ. ಆದರೆ, ಈತನ ಕಾರ್ಯ ಮಾತ್ರ ನಿರಂತರವಾಗಿ ಸಾಗುತ್ತಲೇ ಇದೆ. ಈ ಬಾರಿ ಈ ರಿಯಲ್​ ಲೈಫ್​ ಹೀರೋ ಸಹಾಯ ಮಾಡಿರುವುದು ಮಾಜಿ ಟೀಮ್​ ಇಂಡಿಯಾ ಆಟಗಾರ ಸುರೇಶ್​ ರೈನಾಗೆ. ಸುರೇಶ್​ ರೈನಾ ಅವರ 65 ವರ್ಷದ ಆಂಟಿ ಕೋವಿಡ್​ಗೆ ತುತ್ತಾಗಿದ್ದು, ಅವರ ಪರಿಸ್ಥಿತಿ ಬಿಗಾಡಾಯಿಸಿದೆ. ಈ ವೇಳೆ ಆಕ್ಸಿಜನ್​ಗಾಗಿ ಅವರು ಅಲೆದಾಟ ನಡೆಸಿದ್ದು, ಕಡೆಗೆಟ್ವಿಟರ್​​ ಮೂಲಕ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥಗೆ ಮನವಿ ಮಾಡಿದ್ದಾರೆ. ಮೀರತ್​ನಲ್ಲಿರುವ ನಮ್ಮ ಆಂಟಿ ಶ್ವಾಸಕೋಸದ ಸೋಂಕಿಗೆ ತುತ್ತಾಗಿದ್ದು, ಅವರಿಗೆ ತಕ್ಷಣಕ್ಕೆ ಆಕ್ಸಿಜನ್​ ಬೇಕಾಗಿದೆ. ಅವರ ಆಕ್ಸಿಜನ್​ ಲೆವೆಲ್​ 91 ಇದ್ದು, ಸಹಾಯ ಮಾಡುವಂತೆ ಸಿಎಂ ಯೋಗಿ ಆದಿತ್ಯನಾಥ್​ಗೆ ಟ್ವೀಟ್ ​ಮಾಡಿದ್ದಾರೆ.ಈ ಟ್ವೀಟ್​ ಗಮನಿಸಿದ ನಟ ಸೋನು ಸೂದ್,​ ತಕ್ಷಣಕ್ಕೆ ಸಿಎಸ್​ಕೆ ತಂಡದ ಆಟಗಾರನ ನೆರವಿಗೆ ಆಗಮಿಸಿದ್ದಾರೆ. ಅಲ್ಲದೇ ಕೆಲವೇ ನಿಮಿಷದಲ್ಲಿ ಆಕ್ಸಿಜನ್​ ತಲುಪಲಿದೆ ಸಹೋದರ ಎಂದು ಸಂದೇಶ ರವಾನಿಸಿದ್ದಾರೆ. ಈ ಕುರಿತು ವಿವರಗಳನ್ನು ತಕ್ಷಣಕ್ಕೆ ರವಾನಿಸುವಂತೆ ಕೋರಿದ್ದು, 10 ನಿಮಿಷದಲ್ಲಿ ತಮ್ಮ ಫೌಂಡೇಶನ್​ ಮೂಲಕ ಆಕ್ಸಿಜನ್​ ವ್ಯವಸ್ಥೆ ಮಾಡಿದ್ದಾರೆ.


ತಮ್ಮ ಕಷ್ಟಕಾಲದಲ್ಲಿ ನೆರವು ನೀಡಿದ ನಟನ ಕಾರ್ಯಕ್ಕೆ ಮನಸಾರೆ ಧನ್ಯವಾದ ಅರ್ಪಿಸಿದ ಸುರೇಶ್​ ರೈನಾ, ನಿಮ್ಮಿಂದ ಅತಿದೊಡ್ಡ ಸಹಾಯ ಸಿಕ್ಕಿದೆ. ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂದು ಹಾರೈಸಿದ್ದಾರೆ.


ಕೊರೋನಾ ಮೊದಲ ಅಲೆಯಲ್ಲಿ ವಲಸಿಗರ ಪಾಲಿನ ದೇವರಾಗಿದ್ದ ಸೋನು ಸೂದ್​, ಬಳಿಕ ಆರ್ಥಿಕ ದುರ್ಬಲ ವರ್ಗದವರು, ತಮಗೆ ಸಹಾಯ ಕೋರಿದವರ ನೆರವಿಗೆ ಧಾವಿಸುತ್ತಿದ್ದರು. ಎರಡನೇ ಅಲೆಯಲ್ಲಿ ಇಡೀ ದೇಶದ ಆಪತ್ಬಾಂದವರಾಗಿ ಅವರು ತಮ್ಮ ಸೇವೆಯನ್ನು ನೀಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಯಾರು ಯಾವುದೇ ಸಹಾಯವನ್ನು ಕೋರಿದರೂ ಅದು ತಮ್ಮಿಂದ ಸಾಧ್ಯವಾದರೇ ಸೂನು ಈಡೇರಿಸಿಯೇ ತೀರುತ್ತಾರೆ. ದೇಶದ ಯಾವುದೇ ಮೂಲೆಯಿರಲೀ ಜನರು ಸಹಾಯಕ್ಕಾಗಿ ಒಂದು ಟ್ವೀಟ್​ ಮಾಡಿದರೂ ಅದಕ್ಕೆ ಪ್ರತಿಕ್ರಿಯಿಸದೇ ಇರಲಾರದು. ಇಷ್ಟೇ ಅಲ್ಲದೇ ತಮ್ಮ ಫೌಂಡೇಷನ್​ ಮೂಲಕ ಎಲ್ಲಿಯೇ ಕಷ್ಟದ ಪರಿಸ್ಥಿತಿ ಕಂಡು ಬಂದರೂ ಸದ್ದಿಲ್ಲದೇ ಆ ಸಮಸ್ಯೆ ಬಗೆಹರಿಸಲು ಅವರು ಮುಂದಾಗುತ್ತಾರೆ. ಇಷ್ಟೇ ಅಲ್ಲದೇ, ಇವರ ಸಹಾಯ ಕೋರಿ ಅನೇಕರು ಅವರ ಮನೆ ಬಾಗಿಲನ್ನು ತಟ್ಟುತ್ತಿದ್ದಾರೆ.

ಬೆಂಗಳೂರಿನ ಆರ್ಕಾ ಆಸ್ಪತ್ರೆಯಲ್ಲಿ ಆಕ್ಸಿಜನ್​ ಬಿಕಟ್ಟು ಕಂಡ ಬಂದ ತಕ್ಷಣದ ಸೋನು ಸೂದ್​ ತಂಡ ಸ್ವಯಂ ಸೇವಕ ಮನೋಭಾವದಿಂದ 16 ಆಕ್ಸಿಜನ್​ ಅನ್ನು ವ್ಯವಸ್ಥೆ ಮಾಡುವ ಮೂಲಕ 20 ರಿಂದ 22 ಮಂದಿ ಜನರ ಪ್ರಾಣ ಉಳಿಸಿದ್ದಾರೆ. ಸೋನು ಸೂದ್​ ಚಾರಿಟಿ ಫೌಂಡೇಷನ್​ ಅವರ ಸದಸ್ಯರೊಬ್ಬರಿಗೆ ಪೊಲೀಸರಿಂದ ತಕ್ಷಣಕ್ಕೆ ಆರ್ಕಾ ಆಸ್ಪತ್ರೆಗೆ ಆಮ್ಲಜನಕ ಒದಗಿಸುವಂತೆ ಎಸ್​ಒಎಸ್​ ಸಿಕ್ಕಿದೆ. ತಕ್ಷಣಕ್ಕೆ ಆಲರ್ಟ್​ ಆದ ಸೋನು ಆಕ್ಸಿಜನ್​ ವ್ಯವಸ್ಥೆ ಮಾಡಿ ಮತ್ತೆ ಜನರ ಹೃದಯ ಗೆದ್ದಿದ್ದಾರೆ.
Published by: Seema R
First published: May 6, 2021, 10:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories