ಬಿಎಂಟಿಸಿ ಕ್ಯಾಷ್ ಲೆಸ್ ಪೇಮೆಂಟ್ ಗೆ ನಿರಾಸಕ್ತಿ; ಪಾಸ್, ಟಿಕೆಟ್​ಗೆ ಪ್ರಯಾಣಿಕರು ರೈಟ್ ರೈಟ್...!

ಬೆಂಗಳೂರಿನ ಮೂಲೆ ಮೂಲೆಗಳಿಗೆ ಬಸ್ ಸೇವೆ ನೀಡುವ ಬಿಎಂಟಿಸಿಗೆ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯಂತೆ ಏರುತ್ತಿಲ್ಲ. ಶಾಲಾ ಕಾಲೇಜು ಬಂದ್ ಆಗಿರುವುದು, ವರ್ಕ್ ಫ್ರಂ ಹೋಂ ಇನ್ನೂ ಹೆಚ್ಚಿರುವುದರಿಂದ‌ ಪ್ರಯಾಣಿಕರ ಸಂಖ್ಯೆ ಗಣನೀಯ ಅಗಿ ಕಡಿಮೆಯಾಗಿದೆ

ಬಿಎಂಟಿಸಿ ಬಸ್​ಗಳು

ಬಿಎಂಟಿಸಿ ಬಸ್​ಗಳು

  • Share this:
ಬೆಂಗಳೂರು(ಜೂನ್. 01 ): ಲಾಕ್ ಡೌನ್ ಸಡಲಿಕೆ‌ ಹಿನ್ನೆಲೆ ಬಿಎಂಟಿಸಿ ತನ್ನ ಸಾರಿಗೆ ವ್ಯವಸ್ಥೆ ಆರಂಭಿಸಿ ಎರಡು ವಾರಗಳೇ ಕಳೆದಿದೆ. ಬಸ್ ಸೇವೆ ಹೆಚ್ಚು ಮಾಡುತ್ತಿದ್ದಂತೆ ಕ್ಯಾಷ್ ಲೆಸ್ ಪೇಮೆಂಟ್ ಹಂತ ಹಂತವಾಗಿ ಬಸ್ ಗಳಲ್ಲಿ ಶುರುಮಾಡಿದೆ. ಆದರೆ, ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆ, ಇ- ಪೇಮೆಂಟ್ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿಲ್ಲ.

ಕೊರೋನಾ ಸೋಂಕು ಹರಡುವಿಕೆ ಹಿನ್ನೆಲೆ ಬೆಂಗಳೂರಿನಲ್ಲಿ ಬಿಎಂಟಿಸಿ ಆರಂಭಿಸಿದ ಕ್ಯೂ ಆರ್ ಕೋಡ್ ಸಿಸ್ಟಮ್ ಗೆ ಹೊಂದಿಕೊಳ್ಳಲು ಪ್ರಯಾಣಿಕರು ಇನ್ನೂ ಸಿದ್ಧವಾದಂತಿಲ್ಲ. ಪ್ರಯಾಣಿಕರಿಂದ ದುಡ್ಡು ಇಸಿದುಕೊಂಡು ಟಿಕೆಟ್ ಕೊಡುವುದರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುವ ಕಾರಣಕ್ಕೆ ಬಿಎಂಟಿಸಿಯ ಆನ್‌ ಲೈನ್ ಪೇಮೆಂಟ್ ಉತ್ಸುಕತೆ ತೋರಿತು. ಆದರೆ, ಆರಂಭದಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚೇನು ಯಶ ಕಾಣುತ್ತಿಲ್ಲ.

ಬೆಂಗಳೂರಿನ ಮೂಲೆ ಮೂಲೆಗಳಿಗೆ ಬಸ್ ಸೇವೆ ನೀಡುವ ಬಿಎಂಟಿಸಿಗೆ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯಂತೆ ಏರುತ್ತಿಲ್ಲ. ಶಾಲಾ ಕಾಲೇಜು ಬಂದ್ ಆಗಿರುವುದು, ವರ್ಕ್ ಫ್ರಂ ಹೋಂ ಇನ್ನೂ ಹೆಚ್ಚಿರುವುದರಿಂದ‌ ಪ್ರಯಾಣಿಕರ ಸಂಖ್ಯೆ ಗಣನೀಯ ಅಗಿ ಕಡಿಮೆಯಾಗಿದೆ. ಬಸ್ ನಲ್ಲಿ ಓಡಾಟ ಸುರಕ್ಷಿತವಲ್ಲ ಎನ್ನುವ ಕಾರಣಕ್ಕೆ ಬಸ್ ಬದಲು ತಮ್ಮ ಸ್ವಂತ ವಾಹನಗಳಲ್ಲಿ ಓಡಾಡುವುದು ಹೆಚ್ಚಾಗಿದೆ. ವಾಹನವಿಲ್ಲದವರು ಡ್ಯುಟಿಗೆ ಹೋಗಲು ಬಿಎಂಟಿಸಿ ಬಸ್ ಸೇವೆ ಅನಿವಾರ್ಯವಾಗಿದೆ.

ಇವರುಗಳಲ್ಲಿ ಬಹುತೇಕರು ಬಸ್ ಪಾಸ್ ಹೊಂದಿರುತ್ತಾರೆ. ರಾಜ್ಯದ ವಿವಿಧ ಕಡೆಯಿಂದ ಬಂದವರು ದಿನದ ಪಾಸ್ ಬಹುಪಾಲು ಜನ ದುಡ್ಡು ಕೊಟ್ಟು ತೆಗೆದುಕೊಳ್ಳುತ್ತಿದ್ದಾರೆ. ಶೇ.10ರಷ್ಟು ಡಿಜಿಟಲ್ ಪೇ! ಇದೀಗ ಬಿಎಂಟಿಸಿ ಏಳು ಸಾವಿರ ಬಸ್ ಗಳಲ್ಲಿ ಮೂರುವರೆ ಸಾವಿರ ಬಿಎಂಟಿಸಿ ಬಸ್ ಗಳನ್ನು ಓಡಾಡಿಸುತ್ತಿದೆ. ಎಸಿ ಬಸ್ ಗಳ ಸಂಚಾರ ಜೂನ್ 1 ರಿಂದ ಆರಂಭವಾಗುತ್ತಿದೆ. ಸದ್ಯ ಒಂದು ಸಾವಿರ ಬಸ್ ಗಳಲ್ಲಿ ಕ್ಯೂ ಆರ್ ಕೋಡ್ ಸಿಸ್ಟಮ್ ತರಲಾಗಿದೆ. ಆದರೆ, ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಿದ್ದು, ಇದರಲ್ಲಿ ಆನ್ ಲೈನ್ ಪೇ ಮಾಡುವವರ ಸಂಖ್ಯೆಯು ತುಂಬ ಕಡಿಮೆಯಾಗುತ್ತಿದೆ‌. ಶೇ. 10 ರಷ್ಟು ಮಾತ್ರ ಇ ಪೇ ಬಳಕೆಯಾಗುತ್ತಿದೆ. ಕಂಡಕ್ಟರ್ ಕೊರಳಿನಲ್ಲಿರುವ ಕ್ಯೂಆರ್ ಕೋಡಿ ಪ್ರಯಾಣಿಕರು ಸ್ಕ್ಯಾನ್ ಮಾಡಿ ಪೇ ಮಾಡುತ್ತಿದ್ದಾರೆ. ಉಳಿದಂತೆ ಟಿಕೆಟ್, ಪಾಸ್ ಗೆ ದುಡ್ಡು ಕೊಟ್ಟು ಖರೀರಿಸುವವರೇ ಹೆಚ್ಚಿದ್ದಾರೆ.

ಪೀಣ್ಯ, 8ನೇ ಮೈಲುದಂಥ ಕೈಗಾರಿಕೆ ಹಬ್ ಇರುವ ಸ್ಥಳಗಳಿಗೆ ಇ ಪೇಮೆಂಟ್ ಬಹಳ ಕಡಿಮೆ. ರಾಜಾಜಿನಗರ, ಹೆಚ್ ಎಸ್ ಆರ್ ಲೇ ಔಟ್, ಐಟಿ ಪಾರ್ಕ್ ನಂಥ ಮಾರ್ಗಗಳ ಬಸ್ ಗಳಲ್ಲಿ ಮಾತ್ರ ಡಿಜಿ ಪೇಮೆಂಟ್ ಹೆಚ್ಚಿದೆ ಎನ್ನುತ್ತಾರೆ ಬಿಎಂಟಿಸಿ ಬಸ್ ಕಂಡಕ್ಟರ್.

ಇದನ್ನೂ ಓದಿ : ಆಟೋ,ಕ್ಯಾಬ್ ಚಾಲಕರಿಗೆ ಯಾವಾಗ ಬರುತ್ತೆ 5000 ಪರಿಹಾರಧನ?: ಹಣ ಪಡೆಯಲು ಇವೆ ಹತ್ತಾರು ಷರತ್ತುಗಳು

ಮೊದಲು ಓಡಾಡಲು ಬಸ್ ಗಳೇ ಇದ್ದಿದ್ದಿಲ್ಲ. ಇದೀಗ ಬಸ್ ಸಿಗುತ್ತಿವೆ. ಡ್ಯುಟಿಗೆ ಹೋಗಿಬರುವವರು ಹೆಚ್ಚು ದುಡ್ಡು ಕೊಟ್ಟು ಟಿಕೆಟ್ ತಗೋತಾರೆ. ನಾನು ಫಸ್ಟ್ ಟೈಮ್  ಶಾಪ್ ಗಳಂತೆ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡಿದೆ. ಬಸ್ ಗಳಲ್ಲಿ ಡಿಜಿ ಸೇವೆ ಒಳ್ಳೆಯದು. ಸಾಧ್ಯವಷ್ಟು ಎಲ್ಲರೂ ಕ್ಯಾಷ್ ಲೆಸ್ ಪೇ ಮಾಡೋದು ಒಳ್ಳೆದು ಎನ್ನುತ್ತಾರೆ ಬಸವೇಶ್ವರ ನಗರ ನಿವಾಸಿ ಅಮೃತ್.
First published: