ಇಂದಿನಿಂದ ಬಿಎಂಟಿಸಿ ಸೇವೆ; ಯಾರೆಲ್ಲ ಬಸ್​ ಹತ್ತಬಹುದು? ಪಾಸ್​ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ

ನಗರದಲ್ಲಿ ಬಿಎಂಟಿಸಿ ಬಸ್​ಗಳ ಓಡಾಡಿದರೂ ಸಹ ಸಾರ್ವಜನಿಕರು ಬಸ್​ ಹತ್ತುವಂತಿಲ್ಲ. ಅಗತ್ಯ ಸೇವೆಯಡಿ ಕಾರ್ಯ ನಿರ್ವಹಣೆ ಮಾಡುತ್ತಿರುವವರಿಗಷ್ಟೇ ಬಸ್​​​ನಲ್ಲಿ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಹಾಗೆಯೇ ಬೆಂಗಳೂರು ಸಿಟಿ ಪೊಲೀಸ್ ನೀಡಿದ ಪಾಸ್ ಇದ್ದರಷ್ಟೇ ಓಡಾಡಲು ಅನುಮತಿ ಕೊಡಲಾಗಿದೆ. 

news18-kannada
Updated:March 26, 2020, 10:46 AM IST
ಇಂದಿನಿಂದ ಬಿಎಂಟಿಸಿ ಸೇವೆ; ಯಾರೆಲ್ಲ ಬಸ್​ ಹತ್ತಬಹುದು? ಪಾಸ್​ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ
ಬಿಎಂಟಿಸಿ ಬಸ್
  • Share this:
ಬೆಂಗಳೂರು(ಮಾ.26): ಲಾಕ್​ಡೌನ್​ ಆದೇಶದ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಅಗತ್ಯ ಸೇವಾ ಕ್ಷೇತ್ರದ ಸಿಬ್ಬಂದಿ ಓಡಾಡಲು ಬಿಎಂಟಿಸಿ ಬಸ್​ ಸೇವೆ ಒದಗಿಸಲಾಗಿದೆ. ಇಂದಿನಿಂದ 180 ಬಿಎಂಟಿಸಿ ಬಸ್​ಗಳನ್ನು ಬಿಡಲು ತೀರ್ಮಾನಿಸಲಾಗಿದೆ. 

ಹೀಗಾಗಿ 15ಕ್ಕೂ ಹೆಚ್ಚು ಬಸ್​ಗಳು ಮೆಜೆಸ್ಟಿಕ್​ನಿಂದ ಹೊರಡಲು ಸಿದ್ಧವಾಗಿವೆ. ವಿಕ್ಟೋರಿಯಾ, ಕಿಮ್ಸ್​​, ಜಯದೇವ, ನಿಮ್ಹಾನ್ಸ್​​​, ಕಿದ್ವಾಯಿ, ಫೋರ್ಟಿಸ್​, ಅಪೊಲೋ, ಸಾಗರ್​ ಹೀಗೆ ನಗರದ ನಾನಾ ಆಸ್ಪತ್ರೆಗಳಿಗೆ ಬಿಎಂಟಿಸಿ ಬಸ್​ ಸೇವೆ ಆರಂಭವಾಗಿದೆ.

ನಗರದಲ್ಲಿ ಬಿಎಂಟಿಸಿ ಬಸ್​ಗಳ ಓಡಾಡಿದರೂ ಸಹ ಸಾರ್ವಜನಿಕರು ಬಸ್​ ಹತ್ತುವಂತಿಲ್ಲ. ಅಗತ್ಯ ಸೇವೆಯಡಿ ಕಾರ್ಯ ನಿರ್ವಹಣೆ ಮಾಡುತ್ತಿರುವವರಿಗಷ್ಟೇ ಬಸ್​​​ನಲ್ಲಿ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಹಾಗೆಯೇ ಬೆಂಗಳೂರು ಸಿಟಿ ಪೊಲೀಸ್ ನೀಡಿದ ಪಾಸ್ ಇದ್ದರಷ್ಟೇ ಓಡಾಡಲು ಅನುಮತಿ ಕೊಡಲಾಗಿದೆ. 

ಸಿಂಗಾಪುರದಲ್ಲಿ ಭಾರತದ 3 ವರ್ಷದ ಮಗುವಿಗೆ ಕೊರೋನಾ ವೈರಸ್​​; ಸೋಂಕಿತರ ಸಂಖ್ಯೆ 631ಕ್ಕೆ ಏರಿಕೆ

ಅಗತ್ಯ ಸೇವೆ ಕ್ಷೇತ್ರದ ಸಿಬ್ಬಂದಿ-ಕರ್ಫ್ಯೂ ಪಾಸ್‌ ಎಂದು ನಮೂದಾಗಿದ್ದರೆ ಮಾತ್ರ ಬಿಎಂಟಿಸಿ ಬಸ್​​ ಹತ್ತಬಹುದಾಗಿದೆ. ಪೊಲೀಸ್ ಇಲಾಖೆ ಕೊಟ್ಟ ಪಾಸ್ ಜೊತೆಗೆ ತಮ್ಮ ಕಚೇರಿಯ ಪಾಸ್ ತೋರಿಸುವುದು ಕಡ್ಡಾಯ. ಬೆಂಗಳೂರು ಸಿಟಿ ಪೊಲೀಸರು ಕೊಟ್ಟ ಪಾಸ್ ಇಲ್ಲದಿದ್ದರೆ ಬಿಎಂಟಿಸಿ ಬಸ್ ಹತ್ತುವಂತಿಲ್ಲ. ಬಿಎಂಟಿಸಿ ಬಸ್ಸಿನಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿಗಮ ಮನವಿ ಮಾಡಿದೆ. ಒಂದು ಬಸ್​​ಗೆ ಕೇವಲ 20 ಪ್ರಯಾಣಿಕರನ್ನು ಮಾತ್ರ ಹತ್ತಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಲು ಯಾರಿಗಿದೆ ಅವಕಾಶ

- ಬೆಸ್ಕಾಂ ಸಿಬ್ಬಂದಿ- ಒಳಚರಂಡಿ ಮಂಡಳಿ
- ಬಿಬಿಎಂಪಿ ಸಿಬ್ಬಂದಿ
- ಪೊಲೀಸ್ ಇಲಾಖೆ ಸಿಬ್ಬಂದಿ
- ವೈದ್ಯರು( ಖಾಸಗಿ, ಸರ್ಕಾರಿ)
- ಔಷಧಾಲಯದ ಸಿಬ್ಬಂದಿ
- ಭದ್ರತಾ ಸಿಬ್ಬಂದಿ
- ರಕ್ತದಾನಿಗಳು
- ಬ್ಯಾಂಕ್ ಸಿಬ್ಬಂದಿ
- ಪತ್ರಕರ್ತರು
- ಬಿಎಂಟಿಸಿ

ಆಹಾರ ಅಭಾವ ತಲೆದೋರದಂತೆ ಸಕಲ ಸಿದ್ಧತೆ; ದಿನದ 24 ಗಂಟೆ ದಿನಸಿ ಅಂಗಡಿ ತೆರೆಯಲು ಅವಕಾಶ

ಇವರಲ್ಲದೆ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದಿರುವ ಅಂಗಡಿ ಕಾರ್ಮಿಕರು, ಡೆಲಿವರಿ ಹುಡುಗರು, ಪೆಟ್ರೋಲ್ ಬಂಕ್ ಸಿಬ್ಬಂದಿ, ಹೋಟೆಲ್ ಸಿಬ್ಬಂದಿಯನ್ನು ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಪಾಸ್​ ಪಡೆಯೋದು ಹೇಗೆ?

ಮೇಲ್ಕಂಡ ಅಗತ್ಯ ಸೇವಾ ಸಿಬ್ಬಂದಿ ಪಾಸ್​ ಪಡೆಯಲು ಈ ದಾಖಲೆಗಳನ್ನು ಕೊಡಬೇಕು.

  • ಸಿಬ್ಬಂದಿ ತಾವು ಕೆಲಸ ಮಾಡುವ ಕಚೇರಿಯಲ್ಲಿ ಕೊಟ್ಟಿರುವ ಐಡಿ ಕಾರ್ಡ್​​ ಜೆರಾಕ್ಸ್​​​​​ ಪ್ರತಿ

  • ತಮ್ಮ ಫೋಟೋ

  • ತಮ್ಮ ಕಚೇರಿಯ ಮೇಲಾಧಿಕಾರಿಗಳು ಸಹಿ ಮಾಡಿರುವ ಪತ್ರ


ಇಷ್ಟು ದಾಖಲೆಗಳನ್ನು ಸಿಬ್ಬಂದಿ ಆಯಾ ಡಿಸಿಪಿ ಕಚೇರಿಗೆ ಹೋಗಿ ಕೊಟ್ಟರೆ ಪಾಸ್​ ಪಡೆದುಕೊಳ್ಳಬಹುದಾಗಿದೆ.

ಇಂದು ಮತ್ತು ನಾಳೆ ಪಾಸ್​ ಇಲ್ಲದಿದ್ದರೂ ಕಚೇರಿಯ ಐಡಿ ಕಾರ್ಡ್​​ ತೋರಿಸಿದರೆ ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣಿಸಬಹುದಾಗಿದೆ. ಆದರೆ ಪಾಸ್​ ಪಡೆದ ಬಳಿಕ ಕಡ್ಡಾಯವಾಗಿ ಪಾಸ್​ ತೋರಿಸಬೇಕು ಎಂದು ತಿಳಿದು ಬಂದಿದೆ.
First published: March 26, 2020, 9:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading