HOME » NEWS » Coronavirus-latest-news » BMC ALLOWS SALE HOME DELIVERY OF LIQUOR AMID COVID CURBS RHHSN

ಮದ್ಯಪ್ರಿಯರಿಗೆ ಸಂತಸದ ಸುದ್ದಿ; ಲಾಕ್​ಡೌನ್ ವೇಳೆ ಎಣ್ಣೆ ಹೋಂ ಡೆಲಿವರಿಗೆ ಅವಕಾಶ ನೀಡಿದ ಮಹಾರಾಷ್ಟ್ರ!

ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತರಿಗೆ ಮನೆಯಲ್ಲಿ ಸೇವೆಗಳನ್ನು ಒದಗಿಸುವ ದಾಸಿಯರು, ಅಡುಗೆಯವರು, ಚಾಲಕರು, ಹೌಸ್ ಹೆಲ್ಪರ್, ದಾದಿಯರು ಮತ್ತು ವೈದ್ಯಕೀಯ ಸೇವೆ ನೀಡುವವರು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ಸಂಚರಿಸಲು ಅನುಮತಿ ನೀಡಲಾಗಿದೆ. 

news18-kannada
Updated:April 10, 2021, 9:48 PM IST
ಮದ್ಯಪ್ರಿಯರಿಗೆ ಸಂತಸದ ಸುದ್ದಿ; ಲಾಕ್​ಡೌನ್ ವೇಳೆ ಎಣ್ಣೆ ಹೋಂ ಡೆಲಿವರಿಗೆ ಅವಕಾಶ ನೀಡಿದ ಮಹಾರಾಷ್ಟ್ರ!
ಸಾಂದರ್ಭಿಕ ಚಿತ್ರ
  • Share this:
ಮುಂಬೈ: ಮುಂಬೈನಲ್ಲಿ ಕೊರೋನಾ ವೈರಸ್ ಹರಡುತ್ತಿರುವ ನಡುವೆ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಗರದಲ್ಲಿ ವಾರಪೂರ್ತಿ ಮದ್ಯ ಮಾರಾಟ ಮತ್ತು ಹೋಂ ಡೆಲಿವರಿಗೆ ಅನುಮತಿ ನೀಡಿದೆ. ಶುಕ್ರವಾರ ಬಿಎಂಸಿ ಹೊರಡಿಸಿದ  ಆದೇಶದ ಪ್ರಕಾರ, ಪರವಾನಗಿ ಹೊಂದಿರುವ ಅಂಗಡಿಗಳಿಗೆ ಸ್ಥಳೀಯ ಹಾಲ್ಕೋಹಾಲ್ ಮತ್ತು ಭಾರತೀಯ ನಿರ್ಮಿತ ವಿದೇಶಿ ಮದ್ಯವನ್ನು ಮನೆಗೆ ತಲುಪಿಸಲು ಅನುಮತಿ ನೀಡಲಾಗಿದೆ. ಆದಾಗ್ಯೂ, ವಿದೇಶಿ ಮದ್ಯವನ್ನು ಮಾತ್ರ ಅಂಗಡಿಗಳ ಕೌಂಟರ್‌ನಲ್ಲಿ ಖರೀದಿಸಬಹುದು ಎಂದು ತಿಳಿಸಿದೆ.

ಮನೆಗೆ ವಿತರಣೆ ನೀಡುವಾಗ, ರಾಜ್ಯದಲ್ಲಿ ಹೆಚ್ಚುತ್ತಿರುವ COVID-19 ಪ್ರಕರಣಗಳ ನಡುವೆ ನಾಗರಿಕ ಸಂಸ್ಥೆ ಅನುಸರಿಸಬೇಕಾದ ಕೆಲವು ಕಠಿಣ ನಿಯಮಗಳನ್ನು ವಿಧಿಸಿದೆ. ವಿತರಣಾ ಪ್ರತಿನಿಧಿಗಳು COVID- ಸೂಕ್ತವಾದ ನಡವಳಿಕೆಯನ್ನು ಕಡ್ಡಾಯವಾಗಿ ಅನುಸರಿಸಬೇಕು ಮತ್ತು ಮಾಸ್ಕ್​  ಧರಿಸಬೇಕು, ಸ್ಯಾನಿಟೈಸರ್​ಗಳನ್ನು ಬಳಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಮಾತ್ರ ಈ ಸೇವೆ ನೀಡಲು ಅನುಮತಿ ನೀಡಲಾಗಿದೆ ಎಂದು ಬಿಎಂಸಿ ತಿಳಿಸಿದೆ.

ಕೊರೋನಾ ವೈರಸ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಿನಿದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರವು ವಾರದ ದಿನಗಳಲ್ಲಿ ರಾತ್ರಿ ಕರ್ಫ್ಯೂ ಘೋಷಿಸಿದೆ ಮತ್ತು ಅದರ ‘ಬ್ರೇಕ್ ದಿ ಚೈನ್’ COVID-19 ಯೋಜನೆಯ ಭಾಗವಾಗಿ ಇತರ ನಿರ್ಬಂಧಗಳ ನಡುವೆ ವಾರಾಂತ್ಯದ ದಿನಗಳಲ್ಲಿ ಲಾಕ್‌ಡೌನ್ ವಿಧಿಸಿದೆ. ರಾಜ್ಯದ ಮೊದಲ ವಾರಾಂತ್ಯದ ಲಾಕ್‌ಡೌನ್ ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಾರಂಭವಾಗಿದೆ. ಮತ್ತು ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಲಾಕ್​ಡೌನ್​ ಮುಂದುವರಿಯುತ್ತದೆ. ವಾರಾಂತ್ಯದ ಲಾಕ್‌ಡೌನ್ ಮತ್ತು ಇತರ ನಿರ್ಬಂಧಗಳು ಏಪ್ರಿಲ್ 30 ರವರೆಗೆ ಮುಂದುವರಿಯುತ್ತದೆ.

ಇದನ್ನು ಓದಿ: Bangalore Night Curfew: ರಾಜಧಾನಿಯ ಗಡಿಯಲ್ಲಿ ನಾಕಬಂದಿ; 9.30ಕ್ಕೆ ಫ್ಲೈ ಓವರ್ ಸಂಚಾರ ಬಂದ್

ಮುಂಬೈನಲ್ಲಿ ಹೇರಲಾದ ಇತರೆ ನಿರ್ಬಂಧಗಳು
  • ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವಂತಹ ಜೋಮ್ಯಾಟೋ, ಸ್ವಿಗ್ಗಿ ಮುಂತಾದ ಹೋಂ ಡೆಲಿವರಿ ವಾರಪೂರ್ತಿ 24 ಗಂಟೆ  ಸೇವೆಗೆ ಅವಕಾಶ ನೀಡಲಾಗಿದೆ. ಮತ್ತು ವಾರಾಂತ್ಯದ ಲಾಕ್​ಡೌನ್ ವೇಳೆ ಯಾರೊಬ್ಬರೂ ಹೋಟೆಲ್​ನಿಂದ ಆಹಾರ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ. ಆದರೆ, ಹೋಂ ಡೆಲಿವರಿಗೆ ಅವಕಾಶವಿದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

  • ರಸ್ತೆ ಬದಿಯ ಆಹಾರ ಅಂಗಡಿಗಳು, ಹಣ್ಣಿನ ಅಂಗಡಿಗಳು ತೆರೆಯಲು ಅವಕಾಶ ನೀಡಲಾಗಿದೆ. ಆದರೆ, ಇಲ್ಲಿಂದ ಪಾರ್ಸೆಲ್​ ಅಷ್ಟೇ ತೆಗೆದುಕೊಂಡು ಹೋಗಬೇಕು. ಯಾರೊಬ್ಬರು ಅಲ್ಲಿ ನಿಂತುಕೊಳ್ಳುವಂತಿಲ್ಲ ಮತ್ತು ಆಹಾರ ಸೇವಿಸುವಂತಿಲ್ಲ.

  • ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಸೇರಿದಂತೆ ವಿದ್ಯಾರ್ಥಿಗಳು ಮತ್ತು ಇತರೆ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬಹುದು. ಆದರೆ, ಪರೀಕ್ಷೆಗೆ ಹೋಗುವಾಗ ಪರೀಕ್ಷೆಯ ಹಾಲ್​ ಟಿಕೆಟ್ ಅತ್ಯಗತ್ಯವಾಗಿ ತಮ್ಮೊಂದಿಗೆ ಕೊಂಡೊಯ್ಯಬೇಕು. ಜೊತೆಗೆ ತಮ್ಮೊಂದಿಗೆ ಒಬ್ಬರು ಗಾರ್ಡಿಯನ್​ ಅಥವಾ ಪೋಷಕರು ಜೊತೆಗೆ ಇರಲೇಬೇಕು.

  • ಮಹಾರಾಷ್ಟ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ನಿಗದಿತ ಸಮಯದೊಳಗೆ ಕಣ್ಣಿನ ಚಿಕಿತ್ಸಾಲಯಗಳು ಮತ್ತು ಕನ್ನಡಕದ ಅಂಗಡಿಗಳನ್ನು ತೆರೆಯಲು ಅವಕಾಶವಿದೆ.

  • ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತರಿಗೆ ಮನೆಯಲ್ಲಿ ಸೇವೆಗಳನ್ನು ಒದಗಿಸುವ ದಾಸಿಯರು, ಅಡುಗೆಯವರು, ಚಾಲಕರು, ಹೌಸ್ ಹೆಲ್ಪರ್, ದಾದಿಯರು ಮತ್ತು ವೈದ್ಯಕೀಯ ಸೇವೆ ನೀಡುವವರು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ಸಂಚರಿಸಲು ಅನುಮತಿ ನೀಡಲಾಗಿದೆ.

Published by: HR Ramesh
First published: April 10, 2021, 9:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories