ಬ್ಲ್ಯಾಕ್ ಫಂಗಸ್ ಈರುಳ್ಳಿ ಮೇಲೆ, ಫ್ರಿಡ್ಜ್​​​ನಲ್ಲಿ ಬೆಳೆಯುತ್ತದೆಯೇ..? ತಜ್ಞ ವೈದ್ಯರು ಈ ಬಗ್ಗೆ ಏನಂತಾರೆ?

ಬ್ಲ್ಯಾಕ್​​ ಫಂಗಸ್​​ ಈರುಳ್ಳಿ ಮೇಲೆ, ಫ್ರಡ್ಜ್​​​ನಲ್ಲಿ ಬೆಳೆದು ನಮ್ಮ ದೇಹ ಸೇರುತ್ತದೆಯೇ? ಈ ಬಗೆಗಿನ ಎಲ್ಲಾ ಗೊಂದಲಗಳಿಗೂ ಉತ್ತರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೇಶದಲ್ಲಿ ಮಾರಣಾಂತಿಕ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಇದರೊಂದಿಗೆ ಸಾಕಷ್ಟು ವದಂತಿಗಳು, ಊಹಾಪೋಹಗಳು ಜನರನ್ನು ಭಯಭೀತಗೊಳಿಸುತ್ತಿವೆ. ಮನೆಯಲ್ಲಿರುವ ವಸ್ತುಗಳಾದ ತರಕಾರಿ ಮತ್ತು ಫ್ರಿಡ್ಜ್ನಲ್ಲಿ ಬ್ಲ್ಯಾಕ್ ಫಂಗಸ್ ಬೆಳೆಯಬಹುದು ಎಂಬ ಸಂಗತಿ ಹರಿದಾಡುತ್ತಿದೆ. ಜನ ಭಯಗೊಂಡು ಫ್ರಿಡ್ಜ್ ಕ್ಲೀನಿಂಗ್ನಲ್ಲಿ ತೊಡಗಿದ್ದಾರೆ. ಫೇಸ್ಬುಲ್ನಲ್ಲಿ ಹರಿದಾಡುತ್ತಿರುವ ಪೋಸ್ಟ್ ಪ್ರಕರಣ ಈರುಳ್ಳಿಗಳ ಮೇಲೆ ಕಾಣಿಸಿಕೊಳ್ಳುವ ಕಪ್ಪು ಪದರವೇ ಬ್ಲ್ಯಾಕ್ ಫಂಗಸ್ ಎನ್ನಲಾಗುತ್ತಿದೆ.

  ಹಿಂದಿಯಲ್ಲಿರುವ ಆ ಸುದೀರ್ಘ ಪೋಸ್ಟ್ ಹೇಳುವುದೇನೆಂದರೆ ಮನೆಯಲ್ಲಿರುವ ಕಪ್ಪು ಶಿಲೀಂಧ್ರದಿಂದ ಎಚ್ಚರವಾಗಿರಿ. ನೀವು ಈರುಳ್ಳಿ ಖರೀದಿ ಮಾಡಿದ ನಂತರ ಅದರ ಮೇಲೆ ಕಪ್ಪು ಪದರವನ್ನು ಗಮನಿಸಿರಬಹುದು. ವಾಸ್ತವದಲ್ಲಿ ಇದೇ ಕಪ್ಪು ಶಿಲೀಂದ್ರ. ರೆಫ್ರಿಡ್ಜಿರೇಟರ್ನ ರಬ್ಬರ್ ಒಳಗೆ ಕಾಣಸಿಗುವ ಕಪ್ಪು ಪೊರೆಯು ಕೂಡ ಬ್ಲ್ಯಾಕ್ ಫಂಗಸ್ ಇರಬಹುದು. ನಿರ್ಲಕ್ಷ್ಯ ವಹಿಸಿದರೆ ಈ ಕಪ್ಪು ಶಿಲೀಂದ್ರ ರೆಫ್ರಿಟ್ಜಿರೇಟರ್ನಲ್ಲಿ ಶೇಖರಿಸಿಟ್ಟ ಆಹಾರ ಪದಾರ್ಥಗಳ ಮೂಲಕ ನಿಮ್ಮ ದೇಹವನ್ನು ಸುಲಭವಾಗಿ ಸೇರಬಹುದು ಎಂದು ಬರೆಯಲಾಗಿದೆ.

  ಈ ಫೇಸ್‍ಬುಕ್ ಪೋಸ್ಟ್‍ನಲ್ಲಿರುವ ವಾದ ಸತ್ಯಕ್ಕೆ ದೂರವಾದದ್ದು. ಕಪ್ಪು ಶಿಲೀಂಧ್ರದ ಕೊರೋನಾ ರೋಗಿಗಳಲ್ಲಿ ದೀರ್ಘ ಕಾಲದ ಕಾಯಿಲೆಗೊಳಗಾಗಿ ಚಿಕಿತ್ಸೆ ಪಡೆದವರಲ್ಲಿ ಕಾಣಿಸಿಕೊಳ್ಳುತ್ತಿದೆ. ದೇಶಾದ್ಯಂತ 8 ಸಾವಿರಕ್ಕೂ ಹೆಚ್ಚು ಜನರಲ್ಲಿ ಈ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಾಗಾಗಿ ಅದನ್ನು ಸಾಂಕ್ರಾಮಿಕ ರೋಗಗಳ ಆ್ಯಕ್ಟ್ ಅಡಿಯಲ್ಲಿ ಗಮನಾರ್ಹ ರೋಗ ಎಂದು ಪರಿಗಣಿಸಬೇಕು ಎಂದು ಕೇಂದ್ರ ಸರಕಾರವು, ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಶಿಲೀಂಧ್ರ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಕೋವಿಡ್ ಪ್ರಕರಣಗಳು ಕಡಿಮೆ ಆದಂತೆ ಶಿಲೀಂಧ್ರ ಸೋಂಕು ಕೂಡ ಕಡಿಮೆ ಆಗಬಹುದು ಎಂದು ಏಮ್ಸ್ ನಿರ್ದೇಶಕ ಡಾ.ರಣ್‍ದೀಪ್ ಗುಲೇರಿಯಾ ಹೇಳಿದ್ದಾರೆ.

  ಇದನ್ನೂ ಓದಿ: ದಾಂಪತ್ಯದ ರಸಘಳಿಗೆಗೆ ಮತ್ತಷ್ಟು ಜೀವ ತುಂಬುತ್ತದೆ ಕೊಹಿನೂರ್ ಪಾನ್.. ಆದರೆ ಒಂದು ಕಂಡೀಷನ್!

  ಕಪ್ಪು ಶಿಲೀಂಧ್ರ ಎಂಬ ಪದದ ಮೂಲದ ಬಗ್ಗೆ ಮಾತನಾಡುತ್ತಾ ಅವರು, ಮ್ಯೂಕೋರ ಮೆಕೋಸಿಸ್ ಎಂಬುದು ಕಪ್ಪು ಶಿಲೀಂಧ್ರವಲ್ಲ ಎಂಬುದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು. ಇದು ತಪ್ಪಾದ ಹೆಸರು. ಏಕೆಂದರೆ ರಕ್ತ ಪೂರೈಕೆಯು ಕಡಿಮೆಯಾದಂತೆ ಚರ್ಮದ ಕೆಲವು ಭಾಗಗಳ ಬಣ್ಣಗಳು ಬದಲಾಗುತ್ತವೆ. ಆ ಭಾಗವು ಕಪ್ಪಾಗಿದೆ ಎಂಬ ಭಾವನೆ ನೀಡುವುದರಿಂದ ಈ ಕಪ್ಪು ಹೆಸರು ಬಂದಿರಬಹುದು ಎಂದು ಅವರು ಹೇಳಿದ್ದಾರೆ.

  ಬ್ಲ್ಯಾಕ್ ಫಂಗಸ್ಗೆ ಕಾರಣ ಮತ್ತು ಅದನ್ನು ತಡೆಯಲು ಏನು ಮಾಡಬಹುದು ಎಂಬುದರ ಬಗ್ಗೆ ಮಾತನಾಡುತ್ತಾ, “ಸುದೀರ್ಘ ಸಮಯದ ವರೆಗೆ ಯಾರಾದರೂ ಸ್ಟಿರಾಯ್ಡ್ಸ್ ತೆಗೆದುಕೊಂಡಿದ್ದರೆ ಅಥವಾ ಮಧುಮೇಹದಂತ ಕಾಯಿಲೆ ಹೊಂದಿದ್ದರೆ,ಆ ವ್ಯಕ್ತಿ ಅನೇಕ ಶಿಲೀಂಧ್ರಗಳ ಸೋಂಕಿಗೆ ಒಳಗಾಗಿರುತ್ತಾನೆ. ಮ್ಯೂಕೋರ್‍ಮೈಕೋಸಿಸ್‍ನಲ್ಲಿ ಸಾಮಾನ್ಯವಾಗಿ ಕಾಣ ಸಿಗುವುದೇನೆಂದರೆ. . . .ಸೈನಸ್, ಕಣ್ಣುಗಳ, ಮೂಗುಗಳನ್ನು ಒಳಗೊಂಡಿರುತ್ತದೆ ಮಾತ್ರವಲ್ಲ ಕೆಲವೊಮ್ಮೆ ಮೆದುಳನ್ನು ಕೂಡ ತಲುಪಬಹುದು. ಶ್ವಾಸಕೋಶದ ಮ್ಯೂಕೋರ್‍ಮೈಕೋಸಿಸ್ ಪ್ರಕರಣಗಳು ಕೂಡ ವರದಿಯಾಗಿವೆ “ ಅವರು ಹೇಳಿದ್ದಾರೆ.

  “ಕೆಲವು ಜನರು ಹೆಚ್ಚು ಅಪಾಯದ ಅಂಚಿನಲ್ಲಿದ್ದಾರೆ, ಅವರು ತಮ್ಮ ಸಕ್ಕರೆಯ ಪ್ರಮಾಣದ ನಿಯಂತ್ರಣದ ಬಗ್ಗೆ ಎಚ್ಚರದಿಂದ ಇರಬೇಕು. ನಾವು ಸ್ಟಿರಾಯ್ಟ್ ಬಳಕೆಯ ಬಗ್ಗೆ ಜಾಗರೂಕರಾಗಿರಬೇಕು. ಆರಂಭಿಕ ಹಂತದಲ್ಲಿ ಸ್ಟಿರಾಯ್ಡ್ ಬಳಸಬಾರದು. ಆರಂಭದಲ್ಲಿ ಸ್ಟಿರಾಯ್ಡ್ ಬಳಸುವುದರಿಂದ ರೋಗಿ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಎರಡೂ ಸೋಂಕಿಗೆ ಒಳಪಡುತ್ತಾನೆ ಎಂಬ ಬಗ್ಗೆ ದತ್ತಾಂಶಗಳು ಲಭ್ಯವಿವೆ. ಈ ರೀತಿ ಆಗದಂತೆ ತಡೆಯಬೇಕಾದರೆ, ಕೋವಿಡ್ ರೋಗಿಯ , ಮಧುಮೇಹ ಮತ್ತು ಸ್ಟಿರಾಯ್ಡ್ ಬಳಕೆಯ ಬಗ್ಗೆ ಅತ್ಯಂತ ಹತ್ತಿರದಿಂದ ಮೇಲ್ವಿಚಾರಣೆ ನಡೆಸಬೇಕಾಗುತ್ತದೆ.” ಎಂದು ಗುಲೇರಿಯಾ ಸಿಎನ್‍ಎನ್-ನ್ಯೂಸ್ 18ಗೆ ಹೇಳಿದ್ದಾರೆ.
  First published: