Black Fungus: ರಾಜ್ಯದಲ್ಲಿ ಈವರೆಗೆ 39 ಮಂದಿ ಬ್ಲ್ಯಾಕ್​ ಫಂಗಸ್​ಗೆ ಬಲಿ; 1250 ಕೇಸ್​ ಪತ್ತೆ

Black Fungus in Karnataka: ಬೆಂಗಳೂರು ನಗರದಲ್ಲಿ 521, ಧಾರವಾಡದಲ್ಲಿ 119 ಕೇಸ್​ಗಳು, ಕಲಬುರ್ಗಿಯಲ್ಲಿ 102  ಬ್ಲ್ಯಾಕ್​ ಫಂಗಸ್​ ಪ್ರಕರಣಗಳು ಪತ್ತೆಯಾಗಿವೆ.

ಬ್ಲಾಕ್​ ಫಂಗಸ್

ಬ್ಲಾಕ್​ ಫಂಗಸ್

  • Share this:
    ಬೆಂಗಳೂರು(ಮೇ 31): ಕೊರೋನಾ ಎರಡನೇ ಅಲೆ ದೇಶದೆಲ್ಲೆಡೆ ವ್ಯಾಪಕವಾಗಿ ಹರಡಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಡುವೆಯೇ ಈಗ ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್​ ಫಂಗಸ್​ ಎನ್ನುವ ಹೊಸ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಕೋವಿಡ್​-19 ಚಿಕಿತ್ಸೆಯಲ್ಲಿ ಅತಿಯಾದ ಸ್ಟಿರಾಯ್ಡ್​ ಬಳಕೆಯಿಂದಾಗಿ ಬ್ಲ್ಯಾಕ್​ ಫಂಗಸ್​ ಅಥವಾ ಕಪ್ಪು ಶಿಲೀಂಧ್ರ ರೋಗ ಪತ್ತೆಯಾಗುತ್ತಿದೆ ಎನ್ನಲಾಗಿದೆ. ಇದು ಭಾರತೀಯರ ಜೀವವನ್ನು ಹಿಂಡಲು ಪ್ರಾರಂಭಿಸಿದೆ. ಈಗಾಗಲೇ ಸಾವಿನ ಮನೆಯ ಬಾಗಿಲು ತಟ್ಟಿ ಬಂದವರಿಗೆ ಮತ್ತೊಂದು ಯಮಯಾತನೆ ನೀಡುತ್ತಿದೆ. ಕರ್ನಾಟಕದಲ್ಲಿಯೂ  ಬ್ಲ್ಯಾಕ್​ ಫಂಗಸ್​ ಆರ್ಭಟ ಹೆಚ್ಚಾಗಿದ್ದು, ಈವರೆಗೆ 39 ಮಂದಿ ಬ್ಲ್ಯಾಕ್​ ಫಂಗಸ್​ಗೆ ಬಲಿಯಾಗಿದ್ದಾರೆ.

    ರಾಜ್ಯದಲ್ಲಿ ಈವರೆಗೆ ಒಟ್ಟು 1250 ಬ್ಲ್ಯಾಕ್​ ಫಂಗಸ್​ ಪ್ರಕರಣಗಳು ಪತ್ತೆಯಾಗಿವೆ. 1193 ರೋಗಿಗಳು ಬ್ಲ್ಯಾಕ್​ ಫಂಗಸ್​ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಬ್ಲಾಕ್ ಫಂಗಸ್ ನಿಂದ ಗುಣಮುಖ ಆದವರು 18 ಮಂದಿ ಮಾತ್ರ ಎಂದು ಆರೋಗ್ಯ ಇಲಾಖೆಯಿಂದ ಮಾಹಿತಿ ಲಭಿಸಿದೆ.

    ಇದನ್ನೂ ಓದಿ:Petrol Diesel Price: ಮೇ ತಿಂಗಳಲ್ಲಿ 16ನೇ ಸಲ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ; ಬೆಂಗಳೂರು ಸೇರಿ ವಿವಿಧೆಡೆ ಇಂದಿನ ದರ ಎಷ್ಟು?

    ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿಯೂ ಸಹ ಕೊರೋನಾ ಜೊತೆಗೆ ಬ್ಲ್ಯಾಕ್​ ಫಂಗಸ್​ ಸೋಂಕು ಬಿಟ್ಟು ಬಿಡದೆ ಕಾಡುತ್ತಿದೆ. ಬೆಂಗಳೂರು ನಗರದಲ್ಲೇ ಬರೋಬ್ಬರಿ 521 ಮಂದಿಗೆ ಬ್ಲ್ಯಾಕ್ ಫಂಗಸ್ ವಕ್ಕರಿಸಿದೆ.  508 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.  521 ಮಂದಿಯಲ್ಲಿ ಕೇವಲ 10 ಮಂದಿ ಮಾತ್ರ ಗುಣಮುಖರಾಗಿದ್ದಾರೆ.

     ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಬ್ಲ್ಯಾಕ್​ ಫಂಗಸ್ ಪ್ರಕರಣಗಳು ಪತ್ತೆ?

    ಬಾಗಲಕೋಟೆಯಲ್ಲಿ 68 ಕೇಸ್​ಗಳು, ಬಳ್ಳಾರಿಯಲ್ಲಿ 6 ಪ್ರಕರಣಗಳು, ಬೆಳಗಾವಿಯಲ್ಲಿ 35, ಬೆಂಗಳೂರು ಗ್ರಾಮಾಂತರದಲ್ಲಿ 21, ಬೆಂಗಳೂರು ನಗರದಲ್ಲಿ 521, ಬೀದರ್ ಜಿಲ್ಲೆಯಲ್ಲಿ 18 ಕೇಸ್​ಗಳು, ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಒಂದೊಂದು ಕೇಸ್​, ಚಿತ್ರದುರ್ಗದಲ್ಲಿ 33, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24, ದಾವಣಗೆರೆ ಜಿಲ್ಲೆಯಲ್ಲಿ 21, ಧಾರವಾಡದಲ್ಲಿ 119 ಕೇಸ್​ಗಳು, ಗದಗ ಜಿಲ್ಲೆಯಲ್ಲಿ 10, ಹಾಸನದಲ್ಲಿ 9 ಕೇಸ್​ಗಳು, ಹಾವೇರಿಯಲ್ಲಿ 8, ಕಲಬುರ್ಗಿಯಲ್ಲಿ 102, ಕೋಲಾರದಲ್ಲಿ 42 ಕೇಸ್​ಗಳು, ಕೊಪ್ಪಳದಲ್ಲಿ 13 ಪ್ರಕರಣಗಳು, ಮಂಡ್ಯ ಜಿಲ್ಲೆಯಲ್ಲಿ 3 ಕೇಸ್​ಗಳು, ಮೈಸೂರಿನಲ್ಲಿ 35 ಪ್ರಕರಣಗಳು, ರಾಯಚೂರಿನಲ್ಲಿ 36 ಕೇಸ್​ಗಳು, ರಾಮನಗರದಲ್ಲಿ 3 ಕೇಸ್​ಗಳು, ಶಿವಮೊಗ್ಗದಲ್ಲಿ 38 ಪ್ರಕರಣಗಳು, ತುಮಕೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ತಲಾ 10 ಕೇಸ್​ಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿ 3 ಪ್ರಕರಣಗಳು, ವಿಜಯಪುರದಲ್ಲಿ 57 ಕೇಸ್​ಗಳು, ಯಾದಗಿರಿಯಲ್ಲಿ 3 ಬ್ಲ್ಯಾಕ್​ ಫಂಗಸ್​ ಪ್ರಕರಣಗಳು ಪತ್ತೆಯಾಗಿವೆ.

    ಇದನ್ನೂ ಓದಿ:Morning Digest: Petrol, Diesel ಬೆಲೆ ಏರಿಕೆ; CBSE, ICSE ವಿದ್ಯಾರ್ಥಿಗಳಿಗೆ ಎಕ್ಸಾಂ ಇದೆಯಾ?; ಇಂದಿನ ಪ್ರಮುಖ ಸುದ್ದಿಗಳತ್ತ ಒಂದು ನೋಟ

    ಬ್ಲ್ಯಾಕ್​ ಫಂಗಸ್​​ನ ಲಕ್ಷಣಗಳೇನು? 

    ಈ ಬ್ಲ್ಯಾಕ್​ ಫಂಗಸ್​ ರೋಗಿಯ ಸೈನಸ್​ ಮತ್ತು ಶ್ವಾಸಕೋಸದ ಮೇಲೆ ಪರಿಣಾಮ ಬೀರುತ್ತದೆ. ಮುಖದ ಒಂದು ಭಾಗ ಊದಿಕೊಳ್ಳುತ್ತದೆ. ತೀವ್ರ ತಲೆನೋವು, ಮೂಗು ಕಟ್ಟಿದಂತಾಗುತ್ತದೆ, ಮೂಗಿನ ಮೇಲೆ ಮತ್ತು ಬಾಯಿಯ ಮೇಲ್ಭಾಗದಲ್ಲಿ ಕಪ್ಪು ಕಲೆಗಳು ಕಾಣಿಸುತ್ತವೆ, ಎದೆನೋವು, ಉಸಿರಾಟದ ತೊಂದರೆ, ಕಣ್ಣಿನ ದೃಷ್ಟಿ ಕಡಿಮೆಯಾಗುವುದು ಇವೆಲ್ಲಾ ಬ್ಲ್ಯಾಕ್​ ಫಂಗಸ್​​ನ ಲಕ್ಷಣಗಳಾಗಿವೆ. ಏಮ್ಸ್​ ವೈದ್ಯರ ಪ್ರಕಾರ, ಆಹಾರ ಪದಾರ್ಥಗಳನ್ನು ತಿನ್ನುವಾಗ ಬಾಯಿ ತೆರೆಯಲು ಹಾಗೂ ಜಗಿಯುವಾಗ ಹಿಂಸೆಯಾಗುತ್ತದೆ. ಹಲ್ಲುಗಳು ಸಹ ಸಡಿಲಗೊಳ್ಳುತ್ತವೆ ಎಂದು ಹೇಳಿದ್ದಾರೆ.

    ಕೋವಿಡ್​-19 ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚಾಗಿ ಸ್ಟಿರಾಯ್ಡ್​ ಇಂಜೆಕ್ಷನ್​ನ್ನು ಬಳಸಲಾಗುತ್ತದೆ. ಇದು ಉಸಿರಾಟದ ಪ್ರದೇಶಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದೇ ವೇಳೆ ಸೋಂಕಿನ ವಿರುದ್ಧ ಹೋರಾಡುವ ವ್ಯಕ್ತಿಯ ರೋಗ ನಿರೋಧಕ ಶಕ್ತಿಯ ಮೇಲೂ ಸಹ ಪರಿಣಾಮ ಬೀರುತ್ತದೆ. ಅಂತಹ ವ್ಯಕ್ತಿಗಳಿಗೆ ಈ ಬ್ಲ್ಯಾಕ್​ ಫಂಗಸ್​ ವಕ್ಕರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಿಡ್ನಿಗಳ ಸಮಸ್ಯೆ, ಡಯಾಬಿಟಿಸ್​, ಕ್ಯಾನ್ಸರ್ ಇರುವ ಹಾಗೂ ಯಾರೂ ದೀರ್ಘಕಾಲ ಸ್ಟಿರಾಯ್ಡ್​ಗಳನ್ನು ಬಳಸುತ್ತಾರೋ ಅವರಿಗೆ ಬ್ಲ್ಯಾಕ್​ ಫಂಗಸ್​ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ. ಅತಿಯಾದ ಸ್ಟಿರಾಯ್ಡ್​ ಬಳಕೆಯಿಂದಾಗಿ ಮಾನವನ ದೇಹದಲ್ಲಿನ ಬಿಳಿರಕ್ತಕಣಗಳು ಬಹುತೇಕ ನಶಿಸಿಹೋಗಿರುತ್ತವೆ.
    Published by:Latha CG
    First published: