HOME » NEWS » Coronavirus-latest-news » BJP TO PROTEST AGAINST THE BAN ON TRAVELS FROM DAKSHINA KANNADA TO KERALA GNR

ದಕ್ಷಿಣ ಕನ್ನಡದಿಂದ ಕೇರಳಕ್ಕೆ ವಾಹನ ಸಂಚಾರ ಬಂದ್​​ - ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆಗೆ ಮುಂದಾದ ಬಿಜೆಪಿ

ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಇದೀಗ ವಾಹನ ಓಡಾಟಕ್ಕೆ ಕೊಂಚ ಸಡಿಲಿಕೆ ನೀಡಲಾಗಿದ್ದರೂ, ಕಾಸರಗೋಡು ಜಿಲ್ಲಾಡಳಿತ ಮಾತ್ರ ತನ್ನ ಬಿಗಿ ನಿಲುವನ್ನು ಮುಂದುವರಿಸಿದೆ. ಇದರಿಂದಾಗಿ ಗಡಿಭಾಗದಲ್ಲಿರುವ ಕನ್ನಡಿಗರಿಗೆ ಭಾರೀ ತೊಂದರೆಯಾಗುತ್ತಿದೆ.

news18-kannada
Updated:August 13, 2020, 2:58 PM IST
ದಕ್ಷಿಣ ಕನ್ನಡದಿಂದ ಕೇರಳಕ್ಕೆ ವಾಹನ ಸಂಚಾರ ಬಂದ್​​ - ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆಗೆ ಮುಂದಾದ ಬಿಜೆಪಿ
ದಕ್ಷಿಣ ಕನ್ನಡ - ಕೇರಳ ಮರ್ಗಾ ಬಂದ್​
  • Share this:
ದಕ್ಷಿಣ ಕನ್ನಡ(ಆ.13): ದೇಶದೆಲ್ಲೆಡೆ ಕೊರೋನಾ ಅನ್​​ಲಾಕ್ ಜಾರಿಯಲ್ಲಿದ್ದು, ಅಂತರ್ ರಾಜ್ಯ ಓಡಾಟಕ್ಕೆ ಇರುವ ಎಲ್ಲಾ ನಿರ್ಭಂಧಗಳನ್ನು ತೆರವುಗೊಳಿಸಲಾಗಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ನೆರೆಯ ಕೇರಳ ರಾಜ್ಯದ ನಡುವಿನ ವಾಹನಗಳ ಓಡಾಟಕ್ಕೆ ಈಗಲೂ ನಿರ್ಭಂಧವಿದೆ. ಈ ಕಾರಣಕ್ಕಾಗಿ ಇದೀಗ ಕಾಸರಗೋಡು ಜಿಲ್ಲಾ ಬಿಜೆಪಿ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.

ಸ್ವಾತಂತ್ರ್ಯ ದಿನದ ಗಡುವನ್ನು ಕೇರಳ ಮತ್ತು ಕರ್ನಾಟಕ ರಾಜ್ಯ ಸರಕಾರಗಳಿಗೆ ನೀಡಿದೆ. ಸ್ವಾತಂತ್ರ್ಯ ದಿನಾಚರಣೆಯ ಬಳಿಕ ಬಿಜೆಪಿ ಕಾರ್ಯಕರ್ತರು ಮಣ್ಣು ಹಾಕಿ ರಸ್ತೆ ಬಂದ್ ಮಾಡಿರುವ ಪ್ರದೇಶಗಳಿಗೆ ತೆರಳಿ ರಸ್ತೆಯ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಿದ್ದಾರೆ. ದಕ್ಷಿಣಕನ್ನಡ ಹಾಗೂ ಕೇರಳವನ್ನು ಸಂಪರ್ಕಿಸುವ ಸಣ್ಣ ಪುಟ್ಟ ರಸ್ತೆ ಸೇರಿದಂತೆ ಸುಮಾರು 23 ರಸ್ತೆಗಳನ್ನು ಎರಡೂ ಜಿಲ್ಲಾಡಳಿತಗಳು ಬಂದ್ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಇದೀಗ ವಾಹನ ಓಡಾಟಕ್ಕೆ ಕೊಂಚ ಸಡಿಲಿಕೆ ನೀಡಲಾಗಿದ್ದರೂ, ಕಾಸರಗೋಡು ಜಿಲ್ಲಾಡಳಿತ ಮಾತ್ರ ತನ್ನ ಬಿಗಿ ನಿಲುವನ್ನು ಮುಂದುವರಿಸಿದೆ. ಇದರಿಂದಾಗಿ ಗಡಿಭಾಗದಲ್ಲಿರುವ ಕನ್ನಡಿಗರಿಗೆ ಭಾರೀ ತೊಂದರೆಯಾಗುತ್ತಿದೆ. ಹೆಚ್ಚಾಗಿ ಈ ಭಾಗದಲ್ಲಿ ಹೆಚ್ಚು ಕನ್ನಡಿಗರೇ ಇದ್ದು, ಶಾಲೆ, ಉದ್ಯೋಗ ಹೀಗೆ ತಮ್ಮ ಎಲ್ಲಾ ಅವಶ್ಯಕತೆಗಳಿಗಾಗಿ ದಕ್ಷಿಣಕನ್ನಡ ಜಿಲ್ಲೆಯನ್ನೇ ಇಲ್ಲಿನ ಜನ ಆಶ್ರಯಿಸಿದ್ದಾರೆ. ಈ ಕಾರಣಕ್ಕಾಗಿಯೇ ಕೇರಳ ಸರಕಾರ ಈ ಭಾಗವನ್ನು ನಿರ್ಲಕ್ಷಿಸುತ್ತಿದೆ ಎನ್ನುವ ಆರೋಪಗಳೂ ಇವೆ.

ಕಾಸರಗೋಡಿನ ಜನ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಲು ಹಾಗೂ ನಿರ್ಗಮಿಸಲು ಪಾಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದ್ದು, ಈ ವ್ಯವಸ್ಥೆಯೂ ಹಲವಾರು ಲೋಪಗಳಿಂದ ಕೂಡಿವೆ. ಈ ಎಲ್ಲಾ ಸಮಸ್ಯೆ ಗಳಿಗೆ ಪರಿಹಾರವಾಗಿ ಈ ಮಣ್ಣು ತೆರವು ಪ್ರತಿಭಟನೆ ನಡೆಯಲಿದೆ ಎಂದು ಕಾಸರಗೋಡು ಜಿಲ್ಲಾ ಬಿಜೆಪಿ‌  ತಿಳಿಸಿದೆ.

ಇದನ್ನೂ ಓದಿ: ‘ಡಿಜೆ ಹಳ್ಳಿ ಗಲಭೆ ತಡೆಯುವಲ್ಲಿ ಸರ್ಕಾರ ವಿಫಲ; ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಲಿ‘ - ಕಾಂಗ್ರೆಸ್​
Published by: Ganesh Nachikethu
First published: August 13, 2020, 2:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories