• ಹೋಂ
 • »
 • ನ್ಯೂಸ್
 • »
 • Corona
 • »
 • PM Cares: ಪಿಎಂ ಕೇರ್ಸ್‌ ಪರಾಮರ್ಶೆಗೆ ಜಿಜೆಪಿ ವಿರೋಧ; ಲೆಕ್ಕಪತ್ರ ಸಮಿತಿಯ ತನಿಖೆಗೆ ವಿರೋಧ ಪಕ್ಷಗಳು ಪಟ್ಟು

PM Cares: ಪಿಎಂ ಕೇರ್ಸ್‌ ಪರಾಮರ್ಶೆಗೆ ಜಿಜೆಪಿ ವಿರೋಧ; ಲೆಕ್ಕಪತ್ರ ಸಮಿತಿಯ ತನಿಖೆಗೆ ವಿರೋಧ ಪಕ್ಷಗಳು ಪಟ್ಟು

ಸಂಸತ್​ ಚಿತ್ರಣ

ಸಂಸತ್​ ಚಿತ್ರಣ

ಪಿಎಂ ಕೇರ್ಸ್ ಹಣದ ಖರ್ಚಿನ ಬಗ್ಗೆ ಬಿಜೆಪಿ ಸದಸ್ಯರಿಗೆ ಆತಂಕವಿರುವ ಕಾರಣಕ್ಕಾಗಿ ಸಂಸದೀಯ ಸಮಿತಿಯ ಪರಿಶೀಲನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಕಟುವಾಗಿ ಆರೋಪಿಸುತ್ತಿವೆ.

 • Share this:

ನವ ದೆಹಲಿ (ಜುಲೈ.11); ದೇಶದ ಪ್ರಮುಖ ಸಂಸದೀಯ ಸಮಿತಿಗಳಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯೂ (PAC) ಸಹ ಒಂದು. ಈ ಹಿಂದೆ ಇಡೀ ದೇಶದಲ್ಲೆಡೆ ತಲ್ಲಣ ಸೃಷ್ಟಿಸಿದ್ದ 2ಜಿ ಸೆಕ್ಟ್ರಂ ಹಗರಣವನ್ನು ಬಯಲಿಗೆ ಎಳೆಯುವಲ್ಲಿ ಈ ಸಮಿತಿ ಮಹತ್ವದ ಪಾತ್ರವನ್ನು ನಿಭಾಯಿಸಿದೆ. ಆನಂತರವೂ ಅನೇಕ ಹಗರಣಗಳನ್ನು ಬಯಲಿಗೆ ಎಳೆದ ಶ್ರೇಯ ಈ ಸಮಿತಿಗೆ ಇದೆ. ಇದೇ ಕಾರಣಕ್ಕೆ PM Cares ನಿಧಿಯನ್ನು ಪರಾಮರ್ಶಿಸುವ ಹೊಣೆಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಆದರೆ, ಆಡಳಿತರೂಢ ಬಿಜೆಪಿ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.


ಕೊರೋನಾ ಸಾಂಕ್ರಾಮಿಕ ರೋಗ ದೇಶದೆಲ್ಲೆಡೆ ವ್ಯಾಪಿಸಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಪರಿಹಾರ ನಿಧಿ" ಬದಲಾಗಿ ಪಿಎಂ ಕೇರ್ಸ್‌ (PM Cares) ಅನ್ನು ಸ್ಥಾಪಿಸಿತ್ತು. ಅಲ್ಲದೆ, ಜನ ಸಾಮಾನ್ಯರು ಈ ಕೇರ್ಸ್‌‌ಗೆ ಪರಿಹಾರದ ಹಣ ನೀಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಈವರೆಗೆ 36,000 ಕೋಟಿಗೂ ಅಧಿಕ ಹಣ ಈ ಖಾತೆಗೆ ಸಂದಾಯವಾಗಿದೆ ಎನ್ನಲಾಗುತ್ತಿದೆ.


ಆದರೆ, ನಿಖರವಾಗಿ ಸಂದಾಯವಾದ ಹಣ ಎಷ್ಟು? ಈ ಪೈಕಿ ಖರ್ಚು ಮಾಡಲಾದ ಹಣ ಎಷ್ಟು? ಎಂಬ ಕುರಿತು ಕೇಂದ್ರ ಸರ್ಕಾರ ಈವರೆಗೆ ಮಾಹಿತಿ ನೀಡಿಲ್ಲ. ಅಲ್ಲದೆ, ಆರ್‌ಟಿಇ ಅಡಿಯಲ್ಲೂ ಈ ಕುರಿತು ಪ್ರಶ್ನೆ ಕೇಳಲು ಸಾಧ್ಯವಾಗದಂತೆ PM Cares ಅನ್ನು ಆರ್‌ಟಿಇ ಕಾನೂನಿನಿಂದ ಹೊರಗಿಡಲಾಗಿದೆ.


ಈ ಸಂಬಂಧ ಸಂಸತ್‌ನಲ್ಲಿ ಅನುಮೋದನೆ ಮಂಡಿಸಿ ಮಾತನಾಡಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರೂ ಆಗಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, "ರಾಷ್ಟ್ರದ ಬಗ್ಗೆ ಯೋಚಿಸಿ ತಮ್ಮ ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಂಡು ಪ್ರಮುಖ ವಿಷಯದ ಬಗ್ಗೆ ಒಮ್ಮತ ಕಂಡುಕೊಳ್ಳಬೇಕು" ಎಂದು ಸದನದ ಇತರ ಸದಸ್ಯರಿಗೆ ಮನವಿ ಮಾಡಿದ್ದಾರೆ.


ಈ ವೇಳೆ ಬಿಜು ಜನತಾದಳ ಮತ್ತು ಡಿಎಂಕೆ ಸದಸ್ಯರು ಈ ಪ್ರಸ್ತಾಪವನ್ನು ಅನುಮೋದಿಸಿದರೂ, ಆಡಳಿತಾರೂಢ ಬಿಜೆಪಿಯ ಸದಸ್ಯರೆ ಹೆಚ್ಚಿದ್ದ ಸಭೆಯಲ್ಲಿ ಪಿಎಂ ಕೇರ್ಸ್ ಬಗ್ಗೆ ಪರಿಶೀಲನೆ ನಡೆಸುವ ಚೌಧರಿ ಅವರ ಪ್ರಸ್ತಾಪವನ್ನು ವಿರೋಧಿಸಿದರು ಎಂದು ಮೂಲಗಳು ತಿಳಿಸಿವೆ.


ಪಿಎಂ ಕೇರ್ಸ್ ಹಣದ ಖರ್ಚಿನ ಬಗ್ಗೆ ಬಿಜೆಪಿ ಸದಸ್ಯರಿಗೆ ಆತಂಕವಿರುವ ಕಾರಣಕ್ಕಾಗಿ ಸಂಸದೀಯ ಸಮಿತಿಯ ಪರಿಶೀಲನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಕಟುವಾಗಿ ಆರೋಪಿಸುತ್ತಿವೆ.

top videos


  ಆದರೆ, "ವೈಯಕ್ತಿಕ ಮತ್ತು ಖಾಸಗಿ ವಲಯದ ದೇಣಿಗೆಗಳನ್ನು ಸೆಳೆಯಲು ರಾಷ್ಟ್ರೀಯ ತುರ್ತು ಪರಿಸ್ಥಿತಿಗಾಗಿ ಸ್ಥಾಪಿಸಲಾದ ಪಿಎಂ ಕೇರ್ಸ್ ನಿಧಿಯನ್ನು ಸರ್ಕಾರದ ಲೆಕ್ಕಪರಿಶೋಧಕರಿಂದ ಪರಿಶೀಲಿಸಲಾಗುವುದಿಲ್ಲ. ಅದನ್ನು ಸ್ವತಂತ್ರ ಲೆಕ್ಕ ಪರಿಶೋಧಕರು ನೋಡುತ್ತಾರೆ" ಎಂದು ಸರ್ಕಾರ ಸದನಕ್ಕೆ ತಿಳಿಸಿದೆ.

  ಇದನ್ನೂ ಓದಿ : Corona Effect: ಅಂತಿಮ ವರ್ಷ ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯಗಳ ಪರೀಕ್ಷೆಗಳೂ ರದ್ದು; ದೆಹಲಿ ಸರ್ಕಾರದಿಂದ ಮಹತ್ವದ ನಿರ್ಧಾರ


  ಕಳೆದ ನಾಲ್ಕು ತಿಂಗಳಿನಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಇದ್ದ ಕಾರಣ ಸದನ ಕಲಾಪಗಳು ನಡೆದಿರಲಿಲ್ಲ. ಆದರೆ, ಇದೀಗ ಹಂತಹಂತವಾಗಿ ಲಾಕ್‌ಡೌನ್‌ ಅನ್ನು ತೆರವುಗೊಳಿಸುತ್ತಿರುವ ಕಾರಣದಿಂದಾಗಿ ಇದೇ ಮೊದಲ ಬಾರಿಗೆ ಸಭೆಸೇರಿದ್ದು, ಬೇರೆ ಸಂಸದೀಯ ಸಮಿತಿಯ ಸಭೆಗೆ ಭಾಗವಹಿಸದ ಬಿಜೆಪಿಯ ಎಲ್ಲಾ ಸದಸ್ಯರು ಈ ಸಭೆಯಲ್ಲಿ ಬಹುತೇಕ ಪೂರ್ಣ ಹಾಜರಾತಿ ಖಚಿತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

  First published: