ಬಾಸ್ಕೆಟ್​​ ​ಬಾಲ್​, ಡ್ಯಾನ್ಸ್​ಗಾದರೆ ಸೈ, ಲಸಿಕೆಗಾದರೆ ಅನಾರೋಗ್ಯವೇ? ಪ್ರಗ್ಯಾ ಠಾಕೂರ್ ವಿರುದ್ಧ ಕಾಂಗ್ರೆಸ್​ ಟೀಕೆ​​

ಪ್ರಧಾನಿ ನರೇಂದ್ರ ಮೋದಿ ಯಿಂದ ಮುಖ್ಯಮಂತ್ರಿ​ವರೆಗೆ ಬಹುತೇಕ ನಾಯಕರು ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಪಡೆದಿರುವಾಗ ಪ್ರಗ್ಯಾ ಠಾಕೂರ್​ಗೆ ಯಾಕೆ ಈ ವಿಶೇಷ ಮಾನ್ಯತೆ ಎಂದು ಕೇಳಿದ್ದಾರೆ.

ಪ್ರಗ್ಯಾ ಠಾಕೂರ್​​

ಪ್ರಗ್ಯಾ ಠಾಕೂರ್​​

 • Share this:
  ಭೋಪಾಲ್ (ಜು. 16): ಸದಾ ವಿವಾದಗಳ ಮೂಲಕವೇ ಸುದ್ದಿಯಾಗುವ ಭೋಪಾಲ್​ ಸಂಸದೆ ಪ್ರಗ್ಯಾ ಠಾಗೂರ್​ ಈಗ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದ್ದಾರೆ. ಈ ಬಾರಿ ಅವರು ಸುದ್ದಿಯಾಗುವುದು ಲಸಿಕೆ ವಿಚಾರಕ್ಕೆ. 51 ವರ್ಷದ ಭೋಪಾಲ್​ ಸಂಸದೆ ಮನೆಯಲ್ಲಿಯೇ ಕೋವಿಡ್​ ಲಸಿಕೆಯ ಮೊದಲ ಡೋಸ್​ ಪಡೆದಿದ್ದಾರೆ. ಹಿರಿಯ ನಾಗರೀಕರಿಗೆ ಮತ್ತು ವಿಶೇಷ ಚೇತನರಿಗೆ ಮನೆಯಲ್ಲಿ ಲಸಿಕೆ ನೀಡುವ ವ್ಯವಸ್ಥೆ ಇದ್ದು, ಈ ವಿಶೇಷ ನಿಯಮದ ಅಡಿ ಅವರು ಲಸಿಕೆ ಪಡೆದಿದ್ದಾರೆ. ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರು ಮನೆ ಹತ್ತಿರವಿರುವ ಲಸಿಕಾ ಕೇಂದ್ರಗಳಿಗೆ ಮಾಹಿತಿ ನೀಡಿ ಮನೆಯಲ್ಲಿ ಲಸಿಕೆ ಪಡೆಯಲು ಸರ್ಕಾರ ಅನುಮತಿ ನೀಡಿದೆ. ಈ ನಿಯಮವನ್ನು ಉಲ್ಲಂಘಿಸಿ ಪ್ರಗ್ಯಾ ಲಸಿಕೆ ಪಡೆದಿದ್ದಾರೆ.

  ಪ್ರಗ್ಯಾ ವಯಸ್ಸು ಇನ್ನು 60 ದಾಟಿಲ್ಲ ಹಾಗಾಗಿ ಹಿರಿಯ ನಾಗರಿಕರಲ್ಲ. ಜೊತೆ ಅವರು ವಿಶೇಷ ಚೇತನರ ಕೋಟಾದ ಅಡಿಯೂ ಬರುವುದಿಲ್ಲ ಎಂದು ರಾಜ್ಯ ಲಸಿಕಾ ಅಧಿಕಾರಿ ಸಂತೋಷ್ ಶುಕ್ಲಾ ಕೂಡ ತಿಳಿಸಿದ್ದಾರೆ.  ಮನೆಯಲ್ಲಿಯೇ ಲಸಿಕೆ ಪಡೆದ ಪ್ರಗ್ಯಾ ಠಾಕೂರ್​ ಕ್ರಮವನ್ನು ಕಾಂಗ್ರೆಸ್​ ಕೂಡ ಟೀಕಿಸಿದ್ದು, ವಾಗ್ದಾಳಿ ನಡೆಸಿದೆ. ಪ್ರಗ್ಯಾ ಅವರಿಗೆ ಬಾಸ್ಕೆಟ್​ ಬಾಲ್​ ಆಡಲು, ಮದುವೆಯಲ್ಲಿ ನೃತ್ಯ ಮಾಡಲು ಸಾಧ್ಯವಾಗುತ್ತದೆ. ಆದರೆ, ಮನೆಯ ಹತ್ತಿರದ ಲಸಿಕಾ ಕೇಂದ್ರಕ್ಕೆ ಹೋಗಿ ಕೋವಿಡ್​ ವಾಕ್ಸಿನ್​ ಪಡೆಯಲು ಸಾಧ್ಯವಾಗುವುದಿಲ್ಲವಾ ಎಂದು ಪ್ರಶ್ನಿಸಿದೆ.

  ಈ ಕುರಿತು ಟ್ವೀಟ್​ ಮಾಡಿರುವ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾಕ ನರೇಂದ್ರ ಸಲುಜಾ, ನಮ್ಮ ಭೋಪಾಲ್​ ಸಂಸದೆ, ಮದುವೆ ಡೋಲಿಗೆ ತಕ್ಕಂತೆ ನೃತ್ಯ ಮಾಡಲು ಸಾಧ್ಯವಾಗುವಾಗ ಅವರಿಗೆ ಏನಕ್ಕೆ ಮನೆಯಲ್ಲಿ ಲಸಿಕೆ ನೀಡಲಾಗಿದೆ ಎಂದು ಕಾರಣ ಕೇಳಿದ್ದಾರೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಯಿಂದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ವರೆಗೆ ಬಹುತೇಕ ನಾಯಕರು ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಪಡೆದಿರುವಾಗ ಪ್ರಗ್ಯಾ ಠಾಕೂರ್​ಗೆ ಯಾಕೆ ಈ ವಿಶೇಷ ಮಾನ್ಯತೆ ಎಂದು ಕೇಳಿದ್ದಾರೆ.

  ಪ್ರಗ್ಯಾಠಾಕೂರ್​ ಲಸಿಕೆ ಪಡೆದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಲಸಿಕೆಗಾಗಿ ಜನರು ಆಸ್ಪತ್ರೆಯ ಮುಂದೆ ಕಾದು ನಿಂತಿರುವ ದೃಶ್ಯಗಳು ಮಾಧ್ಯಮದಲ್ಲೂ ಕಂಡ ಬಂದಿದೆ.

  ಇತ್ತೀಚೆಗೆ ತಮ್ಮ ಕ್ಷೇತ್ರದಲ್ಲಿ ಇಬ್ಬರು ಬಡ ಯುವತಿಯರಿಗೆ ಮದುವೆ ಮಾಡಿ ಪ್ರಗ್ಯಾ ಸುದ್ದಿಯಾಗಿದ್ದರು. ಬಡ ಯುವತಿಯರ ಮದುವೆಗೆ ಆರ್ಥಿಕ ಸಹಾಯ ಮಾಡಿದ ಹಿನ್ನಲೆ ಆ ಕುಟುಂಬ ಸಂಸದರನ್ನು ಮದುವೆಗೆ ಆಹ್ವಾನಿಸಿತ್ತು. ಈ ವೇಳೆ ಅವರು ಮದುವೆ ಮನೆಯಲ್ಲಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದರು.

  ಇದನ್ನು ಓದಿ: ಕಣ್ಮನ ಸೆಳೆಯುತ್ತಿದೆ ಶಿವಲಿಂಗ ಆಕೃತಿಯ ರುದ್ರಾಕ್ಷ್​ ಕೇಂದ್ರ; ಏನಿದರ ವಿಶೇಷತೆ?

  ಇದಕ್ಕೂ ಮುನ್ನ ಬಾಸ್ಕೆಟ್​ ಬಾಲ್ ಆಟ ಆಡಿದ ಪ್ರಗ್ಯಾ ಠಾಕೂರ್​ ವಿಡಿಯೋ ಹಂಚಿಕೊಂಡಿದ್ದ ಅವರು, ನಾವು ಸದಾ ಭೂಪಲ್​ ಸಂಸದರು ವೀಲ್​ ಚೇರ್​ಮೇಲೆ ಕುಳಿತಿರುತ್ತಿದ್ದನ್ನು ನೋಡಿದ್ದೇವು. ಆದರೆ, ಇಂದು ಅವರು ಬಾಸ್ಕೆಟ್​ ಬಾಲ್​ ಆಡುತ್ತಿರುವುದು ನೋಡಿ ಖುಷಿಯಾಗಿದೆ. ಅವರಿಗೆ ಆದ ಗಾಯದಿಂದ ಅವರು ನಿಂತಿಕೊಳ್ಳಲು, ನಡೆಯಲು ಸಾಧ್ಯವಿಲ್ಲ ಎಂದು ಇಷ್ಟು ದಿನ ಅಂದುಕೊಂಡಿದದೇವು. ಇದೇ ರೀತಿ ದೇವರು ಅವರಿಗೆ ಆರೋಗ್ಯ ಕೊಡಲಿ ಎಂದು ಕುಟುಕಿದ್ದಾರೆ.

  2008ರ ಮಲೆಗಾಂವ್​ನ ಮಸೀದಿ ಮುಂದೆ ನಡೆದ ಬಾಂಬ್​ ಸ್ಪೋಟದ ಆರೋಪಿಯಾಗಿರುವ ಅವರು 9 ವರ್ಷ ಸೆರೆವಾಸ ಅನುಭವಿಸಿದ್ದರು. ಬಳಿಕ 2017ರಲ್ಲಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಮುಂಬೈನಿಂದ 200 ಕಿ.ಮೀ ದೂರವಿರುವ ಮಲೆಗಾಂವ್​ನ ಮಸೀದಿ ಬಳಿ ಬೈಕ್​ನಲ್ಲಿ ಬಾಂಬ್​ ಇಟ್ಟು ಸ್ಪೋಟಿಸಲಾಗಿತ್ತು. ಈ ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
  Published by:Seema R
  First published: