news18-kannada Updated:March 2, 2021, 10:07 AM IST
ಬಿಜೆಪಿ ಸಂಸದ ನಂದ ಸಿಂಗ್ ಚೌಹಾಣ್
ನವದೆಹಲಿ(ಮಾ.02): ಕೊರೋನಾ ಮಹಾಮಾರಿಗೆ ಇಂದು ಮಧ್ಯಪ್ರದೇಶದ ಬಿಜೆಪಿ ಸಂಸದ ನಂದ ಸಿಂಗ್ ಚೌಹಾಣ್ ಬಲಿಯಾಗಿದ್ದಾರೆ. ಕೊರೋನಾ ಸೋಂಕು ತಗುಲಿದ ಹಿನ್ನೆಲೆ, ಸಂಸದ ನಂದ ಸಿಂಗ್ ಚೌಹಾಣ್ ಎರಡು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.
ನಂದ ಸಿಂಗ್ ಚೌಹಾಣ್ ಅವರು, ಖಂದ್ವಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದರು. 2 ವಾರದ ಹಿಂದೆ ಕೊರೋನಾ ಸೋಂಕು ತಗುಲಿದ ಹಿನ್ನೆಲೆ, ದೆಹಲಿ-ಎನ್ಸಿಆರ್ನ ಮೆಡಾಂಟ ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಸಂಸದರ ನಿಧನಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ಸೂಚಿಸಿದ್ದಾರೆ. ಜನಪ್ರಿಯ ನಾಯಕ ನಂದ ಸಿಂಗ್ ಅವರು ನಮ್ಮೆಲ್ಲರನ್ನೂ ಅಗಲಿದ್ದಾರೆ. ಬಿಜೆಪಿಯು ಒಬ್ಬ ದಕ್ಷ ಹಾಗೂ ಉತ್ತಮ ನಾಯಕನನ್ನು ಕಳೆದುಕೊಂಡಿದೆ. ಇದು ನನಗೆ ವೈಯಕ್ತಿಕ ನಷ್ಟವೂ ಹೌದು ಎಂದು ಕಂಬನಿ ಮಿಡಿದಿದ್ದಾರೆ.
ಅನೇಕ ಕೇಂದ್ರ ಸಚಿವರೂ ಸಹ ನಂದ ಸಿಂಗ್ ಚೌಹಾಣ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Published by:
Latha CG
First published:
March 2, 2021, 10:00 AM IST