• Home
  • »
  • News
  • »
  • coronavirus-latest-news
  • »
  • ಕೋವಿಡ್​​-19 ಭ್ರಷ್ಟಚಾರ: ಕಾಂಗ್ರೆಸ್​ ಆರೋಪ ಶುದ್ಧ ಸುಳ್ಳು ಎಂದ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್​​

ಕೋವಿಡ್​​-19 ಭ್ರಷ್ಟಚಾರ: ಕಾಂಗ್ರೆಸ್​ ಆರೋಪ ಶುದ್ಧ ಸುಳ್ಳು ಎಂದ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್​​

ಅಪ್ಪಚು ರಂಜನ್

ಅಪ್ಪಚು ರಂಜನ್

ಇನ್ನ, ಕಾಂಗ್ರೆಸ್​ ವಿರುದ್ಧ ಸರ್ಕಾರ ಕೂಡಲೇ ತನಿಖೆ ಮಾಡಲಿ. ಸರ್ಕಾರ ಮೆಡಿಕಲ್ ಕಿಟ್‍ಗಳ ಖರೀದಿಗೆ ಖರ್ಚು ಮಾಡಿರುವುದೇ 665 ಕೋಟಿ ರೂ. ಎಂದು ಸಂಬಂಧಪಟ್ಟ ಸಚಿವರೇ ಸ್ಪಷ್ಟನೆ ನೀಡಿದ್ಧಾರೆ. ಆದರೆ, ಕಾಂಗ್ರೆಸ್​ ಮಾತ್ರ 2000 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದೆ, ಇದ್ಯಾವ ಲೆಕ್ಕ? ಎಂದು ಪ್ರಶ್ನಿಸಿದ್ಧಾರೆ.

ಮುಂದೆ ಓದಿ ...
  • Share this:

ಕೊಡಗು(ಜು.24): ರಾಜ್ಯ ಸರ್ಕಾರ ಮೆಡಿಕಲ್ ಕಿಟ್​ಗಳ ಖರೀದಿಗೆ ಖರ್ಚು ಮಾಡಿರುವುದೇ 665 ಕೋಟಿ ರೂಪಾಯಿ. ಹೀಗಿರುವಾಗ ವಿರೋಧ ಪಕ್ಷದವರು 2 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿದೆ. ಇದು ಶುದ್ದ ಸುಳ್ಳು ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದಾರೆ.


ಮಡಿಕೇರಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಅಪ್ಪಚ್ಚು ರಂಜನ್, ಕಾಂಗ್ರೆಸ್​ ಇಂತಹ ಆರೋಪ ಮಾಡುವಾಗ ಯೋಚಿಸಬೇಕಿತ್ತು. ಈಗಾಗಲೇ ಸಿಎಂ ಯಡಿಯೂರಪ್ಪ ಹಾಗೂ ಆರ್ ಅಶೋಕ್ ಉತ್ತರ ನೀಡಿದ್ದಾರೆ. ಹೀಗೆ ಆರೋಪ ಮಾಡುವ ಬದಲು ಕಾಂಗ್ರೆಸ್ ದಾಖಲೆಗಳನ್ನು ನೀಡಲಿ ಎಂದರು.


ಇನ್ನ, ಕಾಂಗ್ರೆಸ್​ ವಿರುದ್ಧ ಸರ್ಕಾರ ಕೂಡಲೇ ತನಿಖೆ ಮಾಡಲಿ. ಸರ್ಕಾರ ಮೆಡಿಕಲ್ ಕಿಟ್‍ಗಳ ಖರೀದಿಗೆ ಖರ್ಚು ಮಾಡಿರುವುದೇ 665 ಕೋಟಿ ರೂ. ಎಂದು ಸಂಬಂಧಪಟ್ಟ ಸಚಿವರೇ ಸ್ಪಷ್ಟನೆ ನೀಡಿದ್ಧಾರೆ. ಆದರೆ, ಕಾಂಗ್ರೆಸ್​ ಮಾತ್ರ 2000 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದೆ, ಇದ್ಯಾವ ಲೆಕ್ಕ? ಎಂದು ಪ್ರಶ್ನಿಸಿದ್ಧಾರೆ.


ರಾಜ್ಯದಲ್ಲಿ ಕೊರೋನಾ ತಾಂಡವವಾಡುತ್ತಿದೆ. ಸರಾಸರಿಯಾಗಿ ಒಂದು ದಿನಕ್ಕೆ 4 ಸಾವಿರಕ್ಕಿಂತ ಅಧಿಕ ಜನ ರಾಜ್ಯದಲ್ಲಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೊರೋನಾ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದೆ. ಎಲ್ಲಾ ವಸ್ತುಗಳನ್ನು ದುಪ್ಪಟ್ಟು ಬೆಲೆ ನೀಡಿ ಖರೀದಿಸಿದೆ. ಈ ಮೂಲಕ ಸಚಿವರು ಸಾವಿರಾರು ಕೋಟಿ ಹಣ ಲೂಟಿ ಹೊಡೆದಿದ್ದಾರೆ ಎಂದು ಸಿದ್ದರಾಮಯ್ಯ ಕಳೆದ ಹಲವು ದಿನಗಳಿಂದ ಆರೋಪಿಸುತ್ತಲೇ ಇದ್ದಾರೆ.


ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು, “ಕೊರೋನಾ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ. ಸಿದ್ದರಾಮಯ್ಯನವರಿಗೆ ಪ್ರಸ್ತಾವನೆ, ಮಂಜೂರಾತಿ, ಅನುಮೋದನೆ ಹಾಗೂ ವೆಚ್ಚ ಅಂದರೆ ಏನೂ ಎಂದೇ ಗೊತ್ತಿಲ್ಲ” ಎಂದು ಹೀಯಾಳಿಸಿದ್ದರು.


ಇದನ್ನೂ ಓದಿ: ಕರ್ನಾಟಕದಲ್ಲಿ ಕೋವಿಡ್​​-19 ಕಾವು: ಇಂದು 5,007 ಕೇಸ್​​ ಪತ್ತೆ, 85 ಸಾವಿರ ದಾಟಿದ ಸೋಂಕಿತರ ಸಂಖ್ಯೆ


ಹೀಗಾಗಿ ಕೊರೋನಾ ಪರಿಕರಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿಲ್ಲ, ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದರೆ ಭಯವೇಕೆ? ನೀವು ಪ್ರಾಮಾಣಿಕರಾಗಿದ್ದರೆ ಸಿಟ್ಟಿಂಗ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಿ. ತಮ್ಮನ್ನು ತಾವು ಪ್ರಾಮಾಣಿಕರು ಎಂದು ನಿರೂಪಿಸಿಕೊಳ್ಳಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಚಿವರಿಗೆ ಸವಾಲು ಹಾಕಿದ್ದರು.

Published by:Ganesh Nachikethu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು