ನೀವು ಸಾಯಬೇಡಿ, ಬೇರೆಯವರನ್ನು ಸಾಯಿಸಬೇಡಿ; ಮನೆಯಲ್ಲಿ ಬಿದ್ದಿರೋಕೆ ಏನಾಗಿದೆ ನಿಮಗೆ?; ಕಿಡಿಕಾರಿದ ಸಚಿವ ಈಶ್ವರಪ್ಪ

3 ವಿಷಯಗಳನ್ನು ಹೇಳಿ ಜನರಿಗೆ ಕೊರೋನಾದಿಂದ ದೂರವಿರಿ ಎಂದಿದ್ದಾರೆ. ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ಕುಟುಂಬ ಚೆನ್ನಾಗಿ ನೋಡಿಕೊಳ್ಳಬೇಕೆಂದರೆ ನಾನು ಮನೆಯಲ್ಲಿರಬೇಕು. ಸಮಾಜವನ್ನು ಹಾಳು ಮಾಡಬಾರದು ಎಂದರೆ ನಾನು ಮನೆಯಲ್ಲಿರಬೇಕು.

ಸಚಿವ ಕೆ ಎಸ್ ಈಶ್ವರಪ್ಪ

ಸಚಿವ ಕೆ ಎಸ್ ಈಶ್ವರಪ್ಪ

  • Share this:
ಶಿವಮೊಗ್ಗ(ಜು.22): ವಿಧಿಯಲ್ಲದೇ ನಾನು ಈ ಪದಗಳನ್ನು ಬಳಸುತ್ತಿದ್ದೇನೆ. ವಿನಾಃ ಕಾರಣ ಓಡಾಡಬೇಡಿ. ಮೋಜಿಗೋಸ್ಕರ ಸುತ್ತಬೇಡಿ.  ನೀವು ಸಾಯ್ತಿರಾ ಬೇರೆಯವರನ್ನೂ ಸಾಯಿಸುತ್ತೀರಾ. ಸಾಯಬೇಕು ಅಂತಲೇ ಹೊರಗೆ ಬರುತ್ತೀರಾ. ಬೇಡಾ ಬೇಡಾ ಎಂದು ಎಷ್ಟು ಹೇಳಿದರೂ, ಹೊರಗೆ ಬರ್ತೀರಾ. ಗೊತ್ತಿದ್ದರೂ ಸಾಯುವುದಕ್ಕೆ ಹೊರಗೆ ಬರ್ತೀರಾ, ಮನೆಯಲ್ಲಿ ಇರೋದಕ್ಕೆ ಏನು ಕಷ್ಟ ನಿಮಗೆ ಅಂತ ಸಚಿವ ಕೆ.ಎಸ್.ಈಶ್ವರಪ್ಪ ಸಾರ್ವಜನಿಕರಿಗೆ  ಪ್ರಶ್ನೆ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಇಂದು ಜನರಿಗೆ ವಿನಂತಿಸಿಕೊಂಡ ಪರಿ ಇದು. ನನ್ನ ಜೀವ ನಾನು ಉಳಿಸಿಕೊಳ್ಳಬೇಕು ಎಂದರೆ ನಾನು ಮನೆಯಲ್ಲಿ ಬಿದ್ದಿರಬೇಕು ಎಂದು ಜಿಲ್ಲೆಯಲ್ಲಿ ಜನರಿಗೆ ಹೇಳಿದ್ದಾರೆ. ನಾನು ಈ ಪದ ಬಳಸಬಾರದು, ಅದರೂ ಈ ಪದ ಬಳಕೆ ಮಾಡುತ್ತಿದ್ದೇನೆ ಎಂದಿದ್ದಾರೆ.  ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಕೊರೋನಾ ಸೋಂಕಿನಿಂದ ದೂರವಿರಬೇಕಾದರೆ, ನೀವು ಮನೆಯಲ್ಲಿಯೇ ಇರಿ ಎಂದು ಜಿಲ್ಲೆಯ ಜನರಿಗೆ ವಿನಂತಿಕೊಂಡಿದ್ದಾರೆ.

3 ವಿಷಯಗಳನ್ನು ಹೇಳಿ ಜನರಿಗೆ ಕೊರೋನಾದಿಂದ ದೂರವಿರಿ ಎಂದಿದ್ದಾರೆ. ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ಕುಟುಂಬ ಚೆನ್ನಾಗಿ ನೋಡಿಕೊಳ್ಳಬೇಕೆಂದರೆ ನಾನು ಮನೆಯಲ್ಲಿರಬೇಕು. ಸಮಾಜವನ್ನು ಹಾಳು ಮಾಡಬಾರದು ಎಂದರೆ ನಾನು ಮನೆಯಲ್ಲಿರಬೇಕು. ಮೋಜು ಮಾಡುವ ಸಂದರ್ಭ ಖಂಡಿತ ಇದಲ್ಲ. ನೀವುಗಳು, ಬೇರೆ ಸಂದರ್ಭದಲ್ಲಿ ಎಷ್ಟು ಬೇಕಾದರೂ, ಎಲ್ಲಿ ಬೇಕೋ ಅಲ್ಲಿ  ಓಡಾಡಿ ಯಾರು ಕೇಳಲ್ಲ. ಆದರೆ, ಈಗ ಮಾತ್ರ ದಯಮಾಡಿ ಮನೆಯಲ್ಲಿಯೇ ಇರಿ ಅನಾವಶ್ಯಕವಾಗಿ ಎಲ್ಲಿಯೂ ಸಹ ಓಡಾಡಬೇಡಿ ಎಂದು ತಿಳಿಸಿದ್ದಾರೆ.

ಮತ್ತೆ ಮುನ್ನೆಲೆಗೆ ಬಂದ ಮೈತ್ರಿ ಸರ್ಕಾರದ ಚರ್ಚೆ - ಈ ಬಗ್ಗೆ ಎಚ್​​.ಡಿ ಕುಮಾರಸ್ವಾಮಿ ಹೇಳಿದ್ದೇನು?

ರಸ್ತೆಗಳಲ್ಲಿ ನೋಡಿದರೆ ನನಗೆ ಭಯವಾಗುತ್ತದೆ, ಹಾಗೆಯೇ ಜನರು ಓಡಾಡುತ್ತಿದ್ದಾರೆ. ಎಲ್ಲೂ ಹೋಗಿಯೇ ಇಲ್ಲವೇನೋ, ತರಕಾರಿ ಖರೀದಿ ಮಾಡಿಯೇ ಇಲ್ಲವೇನೋ ಎಂಬಂತೆ, ವರ್ತಿಸುತ್ತಿದ್ದಾರೆ. ಸರ್ಕಾರ ಎಷ್ಟು ಬಡ್ಕೊಂಡರೂ ಜನರು ಓಡಾಡುತ್ತಿದ್ದಾರೆ. ನೀವು ಹಾಳಾಗುತ್ತಿದ್ದೀರಾ. ಸಮಾಜವನ್ನು ಹಾಳು ಮಾಡುತ್ತಿದ್ದೀರಾ. ದಯಮಾಡಿ ಪ್ರಾರ್ಥನೆ ಮಾಡುತ್ತೇನೆ ಓಡಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್ ಡೌನ್ ಇಲ್ಲ ಎಂದು ತಿಳಿಸಿದ್ದಾರೆ.

ಶಿವಮೊಗ್ಗ ನಗರದ ಕೆಲ ವಾರ್ಡ್ ಗಳಲ್ಲಿ ಸೀಲ್ ಡೌನ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.  ಹಳೆ ಶಿವಮೊಗ್ಗ ಭಾಗದಲ್ಲಿ ಒಟ್ಟು 7 ವಾರ್ಡ್ ಗಳು ಬರಲಿದ್ದು, ಇದರಲ್ಲಿ, ವಾರ್ಡ್ ನಂಬರ್ 22, 23, 29 ಮತ್ತು 30 ಸೀಲ್ ಡೌನ್ ಮಾಡಲಾಗುತ್ತಿದೆ. ವಾರ್ಡ್  ನಂಬರ್ 12, 13 ಮತ್ತು 33 ರಲ್ಲಿ ಭಾಗಶಃ ಲಾಕ್ ಡೌನ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಜು. 23 ರಿಂದ  ಜು. 29 ರವರೆಗೆ ಸೀಲ್ ಡೌನ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಕೊರೋನಾ ನಿಯಂತ್ರಣದ ಕ್ರಮವಾಗಿ ಶಿವಮೊಗ್ಗದ ಬೆಕ್ಕಿನ ಕಲ್ಮಠ ಬಿ.ಹೆಚ್.ರಸ್ತೆ, ಅಮೀರ್ ಅಹ್ಮದ್ ವೃತ್ತ, ಅಶೋಕ ವೃತ್ತದಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಹೊಸ ತೀರ್ಥಹಳ್ಳಿ ರಸ್ತೆ, ಬೈಪಾಸ್ ರಸ್ತೆಯ ತುಂಗಾ ನದಿಯ ಹೊಸ ಸೇತುವೆವರೆಗೆ ಬರುವಂತಹ ಪ್ರದೇಶದಲ್ಲಿ ಸೀಲ್ ಡೌನ್ ಜಾರಿಯಾಗಲಿದೆ. ಈ ಪ್ರದೇಶದಲ್ಲಿನ ಸಾರ್ವಜನಿಕರು ಯಾರು ಸಹ ಹೊರಗೆ ಹೋಗುವಂತಿಲ್ಲ, ಬೇರೆ ಪ್ರದೇಶದಲ್ಲಿನ ಜನರು ಸೀಲ್ ಡೌನ್  ಏರಿಯಾಕ್ಕೆ ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗಳು, ಔಷಧಿ ಅಂಗಡಿಗಳು ಮತ್ತು ಹಾಲು ಮಾರಾಟ ಕೇಂದ್ರಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ತರಕಾರಿ, ದಿನಸಿ ಮತ್ತು ಹಣ್ಣು ಮಾರಾಟ ಕೇಂದ್ರಗಳಿಗೆ ಬೆಳಗ್ಗೆ 5 ಗಂಟೆಯಿಂದ ಬೆಳಗ್ಗೆ 10  ತೆರೆಯಲಿವೆ ಎಂದು ತಿಳಿಸಿದ್ದಾರೆ. ಉಳಿದಂತೆ ಎಲ್ಲವೂ ಸೀಲ್ ಡೌನ್ ನಿಯಮಕ್ಕೆ ಒಳಪಡುತ್ತವೆ ಎಂದು ಹೇಳಿದ್ದಾರೆ.
Published by:Latha CG
First published: