• Home
  • »
  • News
  • »
  • coronavirus-latest-news
  • »
  • ಕೋವಿಡ್​​-19: ಬಡವರಿಗೆ ಸಹಾಯ ಹಸ್ತ ಚಾಚಿದ್ದ ಬಿಜೆಪಿ ಮುಖಂಡನಿಗೆ ಕೊನೆಗಾಗಿದ್ದುಅವಮಾನ

ಕೋವಿಡ್​​-19: ಬಡವರಿಗೆ ಸಹಾಯ ಹಸ್ತ ಚಾಚಿದ್ದ ಬಿಜೆಪಿ ಮುಖಂಡನಿಗೆ ಕೊನೆಗಾಗಿದ್ದುಅವಮಾನ

ಕೋವಿಡ್​​-19: ಬಡವರಿಗೆ ಸಹಾಯ ಹಸ್ತ ಚಾಚಿದ್ದ ಬಿಜೆಪಿ ಮುಖಂಡನಿಗೆ ಕೊನೆಗಾಗಿದ್ದುಅವಮಾನ

ಕೋವಿಡ್​​-19: ಬಡವರಿಗೆ ಸಹಾಯ ಹಸ್ತ ಚಾಚಿದ್ದ ಬಿಜೆಪಿ ಮುಖಂಡನಿಗೆ ಕೊನೆಗಾಗಿದ್ದುಅವಮಾನ

ಸದ್ಯ ವೈರಲ್​​ ಆದ ವಿಡಿಯೋದಿಂದ ಸಚಿವ ನಾಗೇಶ್​​ ಮತ್ತು ಬಿಜೆಪಿ ಹಿರಿಯ ಮುಖಂಡ ವಾಸುದೇವ ಮೂರ್ತಿ ಮುಜುಗರಕ್ಕೀಡಾಗಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ವಾಸುದೇವ, ಯಾರೋ ನನ್ನ ವಿರೋಧಿಗಳು ಹೀಗೆ ಮಾಡಿದ್ದಾರೆ. ನಾವು ಗುಣಮಟ್ಟದ ಆಹಾರ ಕಿಟ್​ಗಳನ್ನೇ ವಿತರಿಸಿದ್ದೇವೆ. ಇದನ್ನು ಆರೋಗ್ಯ ಇಲಾಖೆ ಅಧಿಕಾರಿಗಳೇ ಪರಿಶೀಲಿಸಿದ್ಧಾರೆ ಎಂದರು.

ಮುಂದೆ ಓದಿ ...
  • Share this:

ಕೋಲಾರ(ಮೇ.26): ಕೊರೋನಾ ಲಾಕ್​​ಡೌನ್​​ನಿಂದ ಅದೆಷ್ಟೋ ಜನ ಇಂದಿಗೂ ಆಹಾರ ಧಾನ್ಯಗಳು ಸಿಗದ ಕಾರಣ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಇಂತಹ ಜನರಿಗೆ ಸಹಾಯ ಹಸ್ತ ಚಾಚಲೆಂದು ಮನೆ ಮನೆಗೆ ಹೋಗಿ ಅಕ್ಕಿ ಸಂಗ್ರಹಿಸಿ ನೆರವು ನೀಡಿದವರು ಈಗ ಬೇಸರ ಮಾಡಿಕೊಂಡಿದ್ದಾರೆ. ಏತಕ್ಕಾದರೂ ಸಹಾಯ ಮಾಡಲು ಮುಂದೆ ಹೋದೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ರೀತಿಯ ಬೇಸರ ಮಾಡಿಕೊಂಡವರು ಕೋಲಾರದ ಮುಳಬಾಗಿಲು ತಾಲೂಕಿನ ಬಿಜೆಪಿ ಹಿರಿಯ ಮುಖಂಡರು.

ಹೌದು, ಮುಳಬಾಗಿಲು ತಾಲೂಕಿನ ಬೆಳಗಾನಹಳ್ಳಿಯಲ್ಲಿ ಎಂಬ ಗ್ರಾಮದಲ್ಲಿ ಕೊರೋನಾ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಊರನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಿದೆ. ಈ ಊರಿನ ಗ್ರಾಮಸ್ಥರು ಆಹಾರ ಧಾನ್ಯಗಳಿಲ್ಲದೇ ಪರದಾಡುತ್ತಿದ್ದವರಿಗೆ ಸಹಾಯ ಮಾಡಲು ಹಿರಿಯ ಬಿಜೆಪಿ ಮುಖಂಡ ವಾಸುದೇವ ಆಹಾರ ಕಿಟ್​ ವಿತರಣಾ ಕಾರ್ಯಕ್ರಮ ಆಯೋಜಿಸಿದ್ದರು.

ಗ್ರಾಮದ 120 ಮನೆಗಳಿಗೆ ಅಕ್ಕಿ, ಸಕ್ಕರೆ, ಗೋದಿ, ಮೈದಾ, ಸೋಪು, ಉಪ್ಪು ಸೇರಿದಂತೆ ದಿನಸಿ ಕಿಟ್​ಗಳನ್ನು ಸಚಿವ ನಾಗೇಶ್ ನೇತೃತ್ವದಲ್ಲಿ ವಿತರಣೆ ಮಾಡಲಾಗಿತ್ತು. ಆದರೀಗ ಇವರು ಕಳಪೆ ಗುಣಮಟ್ಟದ ಆಹಾರ ಸಾಮಗ್ರಿ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಅಲ್ಲದೇ ಈ ಸಂಬಂಧದ ಆಡಿಯೋವೊಂದು ವೈರಲ್​​ ಕೂಡ ಆಗಿದೆ.

ಇದನ್ನೂ ಓದಿ: ‘ಜೂನ್​​ವರೆಗೂ ಕಾದು ಜುಲೈನಿಂದ ಶಾಲೆಗಳನ್ನು ಆರಂಭಿಸಿ’ - ಕೇಂದ್ರಕ್ಕೆ ಶಿಕ್ಷಣ ತಜ್ಞರ ಸಮಿತಿ ಶಿಫಾರಸ್ಸು

ಸದ್ಯ ವೈರಲ್​​ ಆದ ವಿಡಿಯೋದಿಂದ ಸಚಿವ ನಾಗೇಶ್​​ ಮತ್ತು ಬಿಜೆಪಿ ಹಿರಿಯ ಮುಖಂಡ ವಾಸುದೇವ ಮೂರ್ತಿ ಮುಜುಗರಕ್ಕೀಡಾಗಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ವಾಸುದೇವ, ಯಾರೋ ನನ್ನ ವಿರೋಧಿಗಳು ಹೀಗೆ ಮಾಡಿದ್ದಾರೆ. ನಾವು ಗುಣಮಟ್ಟದ ಆಹಾರ ಕಿಟ್​ಗಳನ್ನೇ ವಿತರಿಸಿದ್ದೇವೆ. ಇದನ್ನು ಆರೋಗ್ಯ ಇಲಾಖೆ ಅಧಿಕಾರಿಗಳೇ ಪರಿಶೀಲಿಸಿದ್ಧಾರೆ ಎಂದರು.

First published: