HOME » NEWS » Coronavirus-latest-news » BJP GOVERNMENT CAN NOT TAKE ANY ACTION ABOUT CORONAVIRUS SAYS BJP EX MLA RH

ಕೊರೋನಾ ತಡೆಗೆ 200 ಕೋಟಿ ಬಿಡುಗಡೆ ಮಾಡಿರುವುದು ಭ್ರಷ್ಟಾಚಾರಕ್ಕೆ ಹೊರತು ರೋಗಿ ಉದ್ಧಾರಕ್ಕಲ್ಲ; ಬಿಜೆಪಿ ಮಾಜಿ ಶಾಸಕ ಆರೋಪ

ಸರಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳನ್ನು ಹೊಂದಿದ್ದಾರೆ. ಅಲ್ಲಿಯೂ ಆವರು ಕೆಲಸ ನಿರ್ವಹಿಸುವುದರಿಂದ ಇವರು ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದಿಲ್ಲ. ಈ ವೈದ್ಯರು ಜಿಲ್ಲಾ ಆರೋಗ್ಯಾಧಿಕಾಗಳಿಗೆ ಮಾಮೂಲಿ ನೀಡುವುದರಿಂದ ಡಿಎಚ್ಒ ಮೌನ ವಹಿಸುತ್ತಾರೆ. ಈ ಬಗ್ಗೆ ಮೂರು ದಿನಗಳಲ್ಲಿ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಕ್ರಮ ಕೈಗೊಳ್ಳದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಮಾಜಿ ಶಾಸಕರು ಎಚ್ಚರಿಕೆ ನೀಡಿದರು.

news18-kannada
Updated:March 19, 2020, 3:36 PM IST
ಕೊರೋನಾ ತಡೆಗೆ 200 ಕೋಟಿ ಬಿಡುಗಡೆ ಮಾಡಿರುವುದು ಭ್ರಷ್ಟಾಚಾರಕ್ಕೆ ಹೊರತು ರೋಗಿ ಉದ್ಧಾರಕ್ಕಲ್ಲ; ಬಿಜೆಪಿ ಮಾಜಿ ಶಾಸಕ ಆರೋಪ
ಬಿಜೆಪಿ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ.
  • Share this:
ವಿಜಯಪುರ: ರಾಜ್ಯದಲ್ಲಿ ಆರೋಗ್ಯ ಇಲಾಖೆ ಸತ್ತು ಹೋಗಿದೆ. ಉತ್ತರ ಕರ್ನಾಟಕದಲ್ಲಿ ಕೊರೋನಾ ತಪಾಸಣೆಗೆ ಒಂದು ಲ್ಯಾಬ್ ತೆರೆಯದ ಸರಕಾರ ರೂ. 200 ಕೋ. ಬಿಡುಗಡೆ ಮಾಡಿದ್ದು, ಭ್ರಷ್ಟಾಚಾರಕ್ಕಾಗಿ ಹೊರತು ರೋಗಿಗಳ ಉದ್ಧಾರಕ್ಕಾಗಿ ಅಲ್ಲ ಎಂದು ಬಿಜೆಪಿ ಮಾಜಿ ಶಾಸಕ ಮತ್ತು ವೈದ್ಯರೂ ಆಗಿರುವ ಡಾ. ಸಾರ್ವಭೌಮ ಬಗಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಸಚಿವ ಬಿ. ಶ್ರೀರಾಮು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕೊರೋನಾ ತಪಾಸಣೆ ಲ್ಯಾಬ್ ತೆರೆಯಲಾಗುವುದು ಎಂದು ಹೇಳಿದ್ದಾರೆ. ಆದರೆ, ಈವರೆಗೆ ಉತ್ತರ ಕರ್ನಾಟಕದಲ್ಲಿ ಒಂದೂ ಲ್ಯಾಬ್ ತೆರೆದಿಲ್ಲ.  ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ರೂ. 13 ಕೋ. ಖರ್ಚು ಮಾಡಿ 2 ಲ್ಯಾಬ್ ತೆರೆದಿದ್ದಾರೆ.  ಹಾಸನ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಲ್ಯಾಬ್ ತೆರೆದಿದ್ದಾರೆ. ಆದರೆ, ಕೊರೋನಾದಿಂದ ಮೊದಲ ವ್ಯಕ್ತಿ ಬಲಿಯಾದ ಕಲಬುರಗಿಯಲ್ಲಿ ಈವರೆಗೂ ಯಾಕೆ ಲ್ಯಾಬ್ ತೆರೆದಿಲ್ಲ. ಉತ್ತರ ಕರ್ನಾಟಕ ಸತ್ತು ಹೋಗಿದೆಯಾ? ಐದರಲ್ಲಿ ಉತ್ತರ ಕರ್ನಾಟಕಕ್ಕೆ ಒಂದೂ ಲ್ಯಾಬ್ ಇಲ್ಲದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಕಲಬುರಗಿಯಲ್ಲಿ ಲ್ಯಾಬ್ ತೆರೆಯುವ ಯೋಗ್ಯತೆ ಆರೋಗ್ಯ ಇಲಾಖೆಗೆ ಇಲ್ಲ.  ಕರ್ನಾಟಕದಲ್ಲಿ ಆರೋಗ್ಯ ಇಲಾಖೆ ಸತ್ತು ಹೋಗಿದೆ. ಸಮರೋಪಾದಿಯಲ್ಲಿ ಈ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಆದರೆ, ಇವರಪ್ಪನ ಆಣೆಗೂ ಸಚಿವರಾದ ಬಿ. ಶ್ರೀರಾಮುಲು ಮತ್ತು ಸುಧಾಕರ ಲ್ಯಾಬ್ ತೆರೆದು ತೋರಿಸಲಿ ಎಂದು ಅವರು ಸವಾಲು ಹಾಕಿದರು.

ಕೊರೋನಾ ನಿಯಂತ್ರಣ ಮತ್ತು ಚಿಕಿತ್ಸೆಗೆ 200 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.  ಆದರೆ, ಈ ಹಣದಲ್ಲಿ ಅಪರಾ-ತಪರಾ ನಡೆಯುತ್ತದೆ. ಕಡಿಮೆ ಬೆಲೆಯ ಸಲಕರಣೆ ಖರೀದಿಸಿದ ಹೆಚ್ಚಿನ ಬಿಲ್ ಪಾವತಿಸುತ್ತಾರೆ. ಇದನ್ನು ನಾನು ಚೆನ್ನಾಗಿ ಬಲ್ಲೆ. ಈ 200 ಕೋಟಿ ಖರ್ಚಿಗೆ ಯಾವ ಕ್ರಿಯಾ ಯೋಜನೆ ರೂಪಿಸಿದ್ದಾರೆ ಎಂದು ಪ್ರಶ್ನಿಸಿದರು.

ಆಯುಷ್ಮಾನ್ ಭಾರತ ಯೋಜನೆಯಡಿ ಸರಕಾರ ಖಾಸಗಿ ಆಸ್ಪತ್ರೆಗಳಿಗೆ 23 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಆ ಆಸ್ಪತ್ರೆಗಳಿಗೆ ಮೊದಲು ಹಣ ಪಾವತಿ ಮಾಡಿ.  ಹೆಚ್ಚುವರಿಯಾಗಿ 20 ಕೋಟಿ ರೂ. ಬಿಡುಗಡೆ ಮಾಡಿ. ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ನಿರ್ವಹಣೆಗೆ ಸಾಕಷ್ಟು ಸಿಬ್ಬಂದಿಯಿದ್ದಾರೆ. ಆದರೆ, ಸರಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಿರ್ವಹಣೆಗೆ ಯಾವ ತಂತ್ರಜ್ಞರಿದ್ದಾರೆ ಎಂದು ಪ್ರಶ್ನಿಸಿದರು.

ಕೊರೋನಾ ಬಗ್ಗೆ ವಿಜಯಪುರ ಮತ್ತು ಸರಕಾರ ನಿರ್ಲಕ್ಷ್ಯ ವಹಿಸಿದ್ದು, ವಿದೇಶಗಳಿಂದ ಬಂದಿರುವ ಪ್ರತಿಯೊಬ್ಬರನ್ನು ಮನೆಗಳ ಬದಲು ಆಸ್ಪತ್ರೆಗಳಲ್ಲಿಯೇ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಉಸ್ತುವಾರಿಯಲ್ಲಿ ತೀವ್ರ ನಿಗಾದಲ್ಲಿ ಇಡಬೇಕು. ಮನೆಯಲ್ಲಿ ನಿಗಾದಲ್ಲಿರುವ ವ್ಯಕ್ತಿಗಳು ಯಾರ ಮಾತನ್ನೂ ಕೇಳುವುದಿಲ್ಲ. ಅವರನ್ನು ಮನೆ ನಿಗಾದಲ್ಲಿ ಇಡುವ ಕಲ್ಪನೆ ದೊಡ್ಡ ತಪ್ಪು. ಅವರನ್ನು ಮನೆ ನಿಗಾದ ಬದಲು ಸರಕಾರಿ ಆಸ್ಪತ್ರೆ ನಿಗಾದಲ್ಲಿ ಇಡಬೇಕು. ಮನೆ ನಿಗಾದಲ್ಲಿ ಇಟ್ಟ ಪರಿಣಾವೇ ಇಂದು ಇಟಲಿಯಲ್ಲಿ ಕೊರೊನಾ ಉಪಟಳ ಮಿತಿ ಮೀರಿದೆ ಎಂದು ತಿಳಿಸಿದರು.

ಇದನ್ನು ಓದಿ: ಕೊರೋನಾ ವೈರಸ್​ ನಿಯಂತ್ರಿಸುವಲ್ಲಿ ಚೀನಾ ಯಶಸ್ವಿ?; ಇದೇ ಮೊದಲ ಬಾರಿಗೆ ದಾಖಲಾಗಿಲ್ಲ ಹೊಸ ಪ್ರಕರಣಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವ ವೈದ್ಯರು ಖಾಸಗಿ ಆಸ್ಪತ್ರೆಗಳನ್ನು ಹೊಂದಿದ್ದಾರೆ. ಅಲ್ಲಿಯೂ ಆವರು ಕೆಲಸ ನಿರ್ವಹಿಸುವುದರಿಂದ ಈ ವೈದ್ಯರು ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದಿಲ್ಲ. ಈ ವೈದ್ಯರು ಜಿಲ್ಲಾ ಆರೋಗ್ಯಾಧಿಕಾಗಳಿಗೆ ಮಾಮೂಲಿ ನೀಡುವುದರಿಂದ ಡಿಎಚ್ಒ ಮೌನ ವಹಿಸುತ್ತಾರೆ. ಈ ಬಗ್ಗೆ ಮೂರು ದಿನಗಳಲ್ಲಿ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಕ್ರಮ ಕೈಗೊಳ್ಳದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಮಾಜಿ ಶಾಸಕರು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಹೇಳಿಕೆ ಬಳಿಕ ಪ್ರತಿಕ್ರಿಯಿಸಿದ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ದೇಶನದಂತೆ ವಿದೇಶದಿಂದ ಬಂದಿರುವವರ ಮೇಲೆ ಮನೆಯಲ್ಲಿಯೇ ನಿಗಾ ವಹಿಸಲಾಗಿದೆ.  ಅವರ ವೈಯಕ್ತಿಕ ಜೀವನಕ್ಕೆ ಕುಂದು ತರಬಾದರು ಎಂಬ ನಿರ್ದೇಶನದಡಿ ಕೆಲಸ ನಿರ್ವಹಿಸತ್ತಿರುವುದಾಗಿ ತಿಳಿಸಿದರು. ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಖಾಸಗಿ ಆಸ್ಪತ್ರೆ ಹೊಂದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಮಾಜಿ ಶಾಸಕರಿಗೆ ಈ ಬಗ್ಗೆ ಮಾಹಿತಿ ಇದ್ದರೆ ನೀಡಲಿ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕ ಹಿತಾಸಕ್ತಿ ಸಲ್ಲಿಕೆ ಅವರ ವಿವೇಚನಗೆ ಬಿಟ್ಟಿದ್ದು ಎಂದು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ತಿಳಿಸಿದರು.
First published: March 19, 2020, 3:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories