ಕೊರೋನಾ ನಡುವೆ ಬೆಳಗಾವಿಯಲ್ಲಿ ಪಂಚಾಯತಿ ರಾಜಕೀಯ: ನಾಮ ನಿರ್ದೇಶನ, ಕಾಂಗ್ರೆಸ್​​ ಬಿಜೆಪಿ ಕಿತ್ತಾಟ

ಒಟ್ನಲ್ಲಿ ಕೊರೋನಾ ಆತಂಕದ ಮಧ್ಯೆ ಪಂಚಾಯತಿ ರಾಜಕೀಯ ಕಿತ್ತಾಟ ಆರಂಭವಾಗಿದೆ. ಬಿಜೆಪಿ ಮುಖಂಡರ ನಾಮ ನಿರ್ದೇಶನದ ಪಟ್ಟಿ ಕಾಂಗ್ರೆಸ್ ಬೆಂಬಲಿಗರಲ್ಲಿ ತಳಮಳ ಸೃಷ್ಟಿಸಿದೆ. ಇನ್ನು ಅಧಿಕೃತ ಯಾವುದೇ ನಿರ್ಣಯ ಸರ್ಕಾರ ತೆಗೆದುಕೊಳ್ಳದಿದ್ದರೂ ಬಿಜೆಪಿ ನಾಯಕರ ಸಿದ್ದತೆ ಮಾಡಿಕೊಂಡಿರುವ ಪಟ್ಟಿ ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಸಿದಂತಾಗಿದೆ.

ಕಾಂಗ್ರೆಸ್​-ಬಿಜೆಪಿ ಚಿಹ್ನೆ

ಕಾಂಗ್ರೆಸ್​-ಬಿಜೆಪಿ ಚಿಹ್ನೆ

  • Share this:
ಬೆಳಗಾವಿ(ಜೂ.09): ರಾಜ್ಯದಲ್ಲಿ ಒಟ್ಟು 6,025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಪಂಚಾಯಿತಿಗಳ ಅಧಿಕಾರ ಅವಧಿ ಜೂನ್ ತಿಂಗಳಲ್ಲಿ ಮುಗಿಯಲಿದೆ. ನಿಯಮದ ಪ್ರಕಾರ ಅಧಿಕಾರವದಿ ಕೊನೆಗೊಳ್ಳುವ ಮುನ್ನವೇ ಚುನಾವಣೆ ನಡೆಸಬೇಕು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ವಿನಾಯಿತಿ ನೀಡಲು ಬರುತ್ತದೆ. ಹೀಗಾಗಿ ರಾಜ್ಯ ಚುನಾವಣಾ ಆಯೋಗ ಇನ್ನೂ ದಿನಾಂಕ ನಿಗದಿ ಮಾಡಿಲ್ಲ. ಹೀಗಿರುವಾಗ ನಾಮ ನಿರ್ದೇಶನದ ಲೆಕ್ಕಾಚಾರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಟ್ಟಿ ಸಿದ್ದತೆ ಮಾಡಿಕೊಂಡಿದ್ದಾರೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈ ಹಂತದಲ್ಲಿ ಚುನಾವಣೆ ನಡೆಸದಿರುವುದೇ ಸೂಕ್ತ ಎಂಬ ತೀರ್ಮಾನಕ್ಕೆ ರಾಜ್ಯ ಚುನಾವಣಾ ಆಯೋಗ ಬಂದಿದೆ. ಈ ಹಿಂದೆ ಚುನಾವಣೆ ನಡೆಸಬೇಕೂ ಬೇಡವೋ ಎಂಬ ಬಗ್ಗೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆಯೋಗ ವರದಿ ಕೇಳಿತ್ತು. ಬಹುತೇಕ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸಲು ಕಷ್ಟ ಎಂಬ ವರದಿಯನ್ನು ನೀಡಿದ್ದರು. ಈ ವರದಿ ಅನ್ವಯ ಆಯೋಗ ಚುನಾವಣೆಗಳನ್ನು ಮುಂದೂಡಿದೆ. ಆದರೆ, ದಿನಾಂಕ ಇನ್ನೂ ತಿಳಿಸಿಲ್ಲ.

ಇನ್ನು, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿರುವುದರಿಂದ ನಾಮ ನಿರ್ದೇಶನಕ್ಕೆ ಅವಕಾಶ ನೀಡಿದರೆ, ಬಿಜೆಪಿ ಬೆಂಬಲಿತ ಸದಸ್ಯರೆ ನೇಮಕವಾಗಲಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ತಳ ಮಟ್ಟದ ಪಕ್ಷ ಬಲವರ್ಧನೆಗೆ ನಾಮ ನಿರ್ದೇಶನ ಬಲ ನೀಡುತ್ತದೆ. ಇದು ಬಿಜೆಪಿಗೆ ಲಾಭವಾಗಲಿದೆ  ಎಂಬ ಮಾತು ಕೇಳಿ ಬಂದಿದೆ.

ಇದರ ಜೊತೆಗೆ ಸರ್ಕಾರ ಒಂದು ವೇಳೆ ನಾಮ ನಿರ್ದೇಶನಕ್ಕೆ ಅಧಿಕೃತ ಘೋಷಿಸಿ ಪ್ರಕ್ರಿಯೆ ಆರಂಭಿಸಿದರೆ ಇದರಿಂದ ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ ಬೆಂಬಲಿಗರಿಗೆ ಭಾರೀ ಅನ್ಯಾಯ ಆಗಲಿದೆ. ಬಿಜೆಪಿ ಶಾಸಕರು ಸಂಸದರು ತಮ್ಮ ಬೆಂಬಲಿಗರ ಮೂಲಕ ಅಭ್ಯರ್ಥಿಗಳು ಪಟ್ಟಿ ಸಿದ್ದ ಪಡೆಸಿಕೊಂಡಿದ್ದರ ಬಗ್ಗೆ ಕಾಂಗ್ರೆಸ್ ಬೆಂಬಲಿತರು ತಮ್ಮ ನಾಯಕರ ಮುಂದೆ ತಮ್ಮ ಅಳಲು ತೊಂಡಿದ್ದಾರೆ. ಸರ್ಕಾರದ ಆದೇಶವೆ ನೀಡಿಲ್ಲ ಮುಂದೆ ನೋಡೊಣ ಎಂದು ತಮ್ಮ ಬೆಂಬಲಿಗರ ಸಮಾಧನ ಪಡೆಸಿದ್ದಾರೆ ಕಾಂಗ್ರೆಸ್ ಮುಖಂಡರು.

ಇದನ್ನೂ ಓದಿ: ಅಮೆರಿಕದಲ್ಲಿ ಗಾಂಧಿ ಪ್ರತಿಮೆ ಧ್ವಂಸ: ಇದೊಂದು ನಾಚಿಕೆಗೇಡಿನ ಸಂಗತಿ ಎಂದ ಡೊನಾಲ್ಡ್​ ಟ್ರಂಪ್ ಆಕ್ರೋಶ​​​​

ಒಟ್ನಲ್ಲಿ ಕೊರೋನಾ ಆತಂಕದ ಮಧ್ಯೆ ಪಂಚಾಯತಿ ರಾಜಕೀಯ ಕಿತ್ತಾಟ ಆರಂಭವಾಗಿದೆ. ಬಿಜೆಪಿ ಮುಖಂಡರ ನಾಮ ನಿರ್ದೇಶನದ ಪಟ್ಟಿ ಕಾಂಗ್ರೆಸ್ ಬೆಂಬಲಿಗರಲ್ಲಿ ತಳಮಳ ಸೃಷ್ಟಿಸಿದೆ. ಇನ್ನು ಅಧಿಕೃತ ಯಾವುದೇ ನಿರ್ಣಯ ಸರ್ಕಾರ ತೆಗೆದುಕೊಳ್ಳದಿದ್ದರೂ ಬಿಜೆಪಿ ನಾಯಕರ ಸಿದ್ದತೆ ಮಾಡಿಕೊಂಡಿರುವ ಪಟ್ಟಿ ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಸಿದಂತಾಗಿದೆ.

ಸದಸ್ಯರಿಗೆ ಅಧಿಕಾರವೇನು ?

ಸರ್ಕಾರದ ನಾಮ ನಿರ್ದೇಶನವೇ ಅಂತಿಮ ಆದೇಶವಾದರೆ, ಪಂಚಾಯತಿಯ ಎಷ್ಟು ಸದಸ್ಯರಿರುತ್ತಾರೋ ಅಷ್ಟೇ ಸದಸ್ಯರನ್ನು ಮೀಸಲಾತಿ ಅನುಗುಣವಾಗಿ ನೇಮಿಸಲಾಗುತ್ತದೆ. ಪ್ರಮುಖವಾಗಿ ಈ ನಾಮ ನಿರ್ದೇಶನ ನೇಮಕ ಮಾಡುವ ಅಧಿಕಾರ ಜಿಲ್ಲಾಧಿಕಾರಿಗಳು ಅವರ ವಿವೇಚನೆ ಅಧಿಕಾರ ಬಳಸಿ ಸದಸ್ಯರ ನೇಮಿಸುತ್ತಾರೆ. ಇದರ ಜೊತೆಗೆ ತಾಲೂಕು ಮಟ್ಟದ "ಎ" ಅಥವಾ "ಬಿ" ಶ್ರೇಣಿಯ ಅಧಿಕಾರಿಯನ್ನ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ. ಇವರ ಅಧಿಕಾರ ಅವಧಿ 6 ತಿಂಗಳ ಇರಲಿದೆ. ಅಷ್ಟರಲ್ಲಿ ಚುನಾವಣಾ ನಡೇಸಬೇಕಾಗುತ್ತದೆ. ಇಲ್ಲಿ ನಾಮ ನಿರ್ದೇಶನ ಸದಸ್ಯರು ಸಲಹೆ ನೀಡಬಹುದು, ಎಂದಿನಂತೆ ಕಾರ್ಯದರ್ಶಿ ,ಪಿಡಿಓ ಕಾರ್ಯ ನಿರ್ವಹಿಸುತ್ತಾರೆ. ಈ ನೂತನ ಸದಸ್ಯರಿಗೆ ಯಾವುದೇ ಹಣಕಾಸಿನ ಅಧಿಕಾರ ಇರುವುದಿಲ್ಲ.
First published: