ಕೊರೋನಾ ವಿರುದ್ಧ ಭಾರತ ಹೋರಾಟ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಹೊಗಳಿದ ಬಿಲ್​​ ಗೇಟ್ಸ್​

ಇನ್ನು, ಕೊರೋನಾ ವಿರುದ್ಧದ ಹೋರಾಟದಲ್ಲಿ ಡಿಟಿಜಿಲ್​​ಗೂ ಮೊದಲ ಆದ್ಯತೆ ನೀಡಿದ್ದೀರಿ. ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಲು​ ಆರೋಗ್ಯ ಸೇತು ಆ್ಯಪ್​ ಕಂಡು ಹಿಡಿದ ನಿಮ್ಮ ಸರ್ಕಾರಕ್ಕೆ ಒಂದು ಸಲಾಮ್​​ ಎಂದಿದ್ದಾರೆ ಬಿಲ್​​ ಗೇಟ್ಸ್​.


Updated:April 22, 2020, 8:55 PM IST
ಕೊರೋನಾ ವಿರುದ್ಧ ಭಾರತ ಹೋರಾಟ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಹೊಗಳಿದ ಬಿಲ್​​ ಗೇಟ್ಸ್​
ಕೊರೋನಾ ವಿರುದ್ಧ ಭಾರತ ಹೋರಾಟ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಹೊಗಳಿದ ಬಿಲ್​​ ಗೇಟ್ಸ್​
  • Share this:
ಬೆಂಗಳೂರು(ಏ.22): ಕೊರೋನಾ ವಿರುದ್ಧ ಹೋರಾಡಲು ಭಾರತ ತೆಗೆದುಕೊಂಡಿರುವ ಕ್ರಮಗಳನ್ನು ಹೊಗಳಿ ಪ್ರಧಾನಿ ನರೇಂದ್ರ ಮೋದಿಗೆ ಮೈಕ್ರೊಸಾಫ್ಟ್‌ ಸಹ-ಸ್ಥಾಪಕ ಮತ್ತು ಶತಕೋಟ್ಯಧಿಪತಿ ಬಿಲ್‌ ಗೇಟ್ಸ್‌ ಪತ್ರ ಬರೆದಿದ್ದಾರೆ. ದೇಶದ ಜನರನ್ನು ಕೊರೋನಾದಿಂದ ಬಚಾವ್​​ ಮಾಡಲು ಇಡೀ ಭಾರತವನ್ನೇ ಲಾಕ್​​ಡೌನ್​​ ಮಾಡಿರುವುದು ಸ್ವಾಗತಾರ್ಹ. ಇದರಿಂದಾಗಿ ಭಾರತದಲ್ಲಿ ಕೊರೋನಾ ಪಾಸಿಟಿವ್​​ ಪ್ರಕರಣಗಳು ಕಡಿಮೆ ಪತ್ತೆಯಾಗುತ್ತಿವೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಬಿಲ್​​ ಗೇಟ್ಸ್​​ ಹೊಗಳಿದ್ದಾರೆ. 

ಕೊರೋನಾ ಸಂಕಷ್ಟದ ಸಮಯದಲ್ಲಿ ಭಾರತದಲ್ಲಿ ನಿಮ್ಮ ನಾಯಕತ್ವದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಸ್ವಾಗತಿಸುತ್ತೇವೆ. ದೇಶದಲ್ಲಿ ಕೊರೋನಾ ಹರಡಲು ಕಾರಣವಾದ ಹಾಟ್​ಸ್ಪಾಟ್​ಗಳನ್ನು ಗುರುತಿಸುವುದು; ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವುದು; ರೋಗಿಗಳೊಂದಿಗೆ ಪ್ರಥಾಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳಿಗೆ 14 ದಿನಗಳ ಕಾಲ ಹೋಮ್​​ ಕ್ವಾರಂಟೈನ್​​ ಕಡ್ಡಾಯ ಮಾಡಿರುವುದು ಕೊರೋನಾ ಕಡಿಮೆಯಾಗಲು ಕಾರಣವಾಗಿದೆ. ಇದು ದೇಶದ ಜನರ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಬಿಲ್​​ ಗೇಟ್ಸ್​ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.

ಇನ್ನು, ಕೊರೋನಾ ವಿರುದ್ಧದ ಹೋರಾಟದಲ್ಲಿ ಡಿಟಿಜಿಲ್​​ಗೂ ಮೊದಲ ಆದ್ಯತೆ ನೀಡಿದ್ದೀರಿ. ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಲು​ ಆರೋಗ್ಯ ಸೇತು ಆ್ಯಪ್​ ಕಂಡು ಹಿಡಿದ ನಿಮ್ಮ ಸರ್ಕಾರಕ್ಕೆ ಒಂದು ಸಲಾಮ್​​ ಎಂದಿದ್ದಾರೆ.

ಇತ್ತೀಚೆಗಷ್ಟೇ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜೂನ್‌ ವೇಳೆಗೆ ಕೊರೊನಾ ಬಿಕ್ಕಟ್ಟನ್ನು ಹತೋಟಿಗೆ ತರಬಹುದು ಎಂದು ಬಿಲ್‌ ಗೇಟ್ಸ್‌ ಹೇಳಿದ್ದರು. ಕೊರೋನಾ ವೈರಸ್‌ ಮಾರಕವಾಗಿದ್ದು, ವ್ಯಾಪಕ ಹರಡುತ್ತಿದೆ. ನಾವು ಬಹಳಷ್ಟು ವರ್ಷಗಳಿಂದ ಮಾತನಾಡುತ್ತಿದ್ದ ದುಸ್ವಪ್ನ ಇದಾಗಿದೆ. ಇಂಥ ವೈರಸ್‌ಗಳು ನಮ್ಮ ಪ್ರಯಾಣಗಳಿಂದ ಸಂಪೂರ್ಣವಾಗಿ ಜಾಗತಿಕವಾಗಿ ಬಿಡುತ್ತವೆ. ಕೊಲಿಸಿನ್‌ ಇತ್ಯಾದಿ ಲಸಿಕೆಗಳನ್ನು 2015ರ ಬಳಿಕ ಅತ್ಯಂತ ಕಡಿಮೆ ಪ್ರಮಾಣದಲ್ಲಿಅಭಿವೃದ್ಧಿಪಡಿಸಿದೆವು. ಆಗಲೇ ಇಂಥ ಲಸಿಕೆಗಳ ಅಭಿವೃದ್ಧಿಪಡಿಸುವತ್ತ ಗಮನ ನೀಡಿದ್ದರೆ ಈಗ ಇಂತಹ ತೊಂದರೆ ಆಗುತ್ತಿರಲಿಲ್ಲ ಎಂದಿದ್ದರು.

ಇದನ್ನೂ ಓದಿ: ಬಿಗಿಯಾದ ಲಾಕ್​​ಡೌನ್​​ನಿಂದ ಸುಧಾರಣೆ ಕಂಡ ಬೆಂಗಳೂರು: ಕಳೆದ 3 ದಿನಗಳಿಂದ ದಾಖಲಾಗಿಲ್ಲ ಒಂದೇ ಒಂದು ಹೊಸ ಕೋವಿಡ್​​-19 ಪ್ರಕರಣ

ದೇಶಾದ್ಯಂತ ನಾವೆಲ್ಲರೂ ಒಂದಾಗಿ ಕ್ರಮಕೈಗೊಂಡರೆ ಮತ್ತು ಗೇಟ್‌ ಫೌಂಡೇಷನ್‌ ಮಾಡಿದಂತಹ ಸೆಲ್ಫ್ ಸ್ವಾಬ್‌ನಂಥ ಟೆಸ್ಟಿಂಗ್‌ ಕಿಟ್‌ ಬಳಸಿ ಜೂನ್‌ ವೇಳೆಗೆ ಕೊಂಚ ಪರಿಸ್ಥಿತಿ ಸುಧಾರಿಸಬಹುದು. ಚೀನಾ, ದಕ್ಷಿಣ ಕೊರಿಯಾ ಮುಂತಾದೆಡೆ ಏನು ಮಾಡಿದರು ಎನ್ನುವುದನ್ನು ಅಧ್ಯಯನ ಮಾಡಿ ನಾವೂ ಅದರಂತೆ ನಡೆಯಬೇಕಿದೆ. ಹೀಗಿದ್ದರೆ ಮಾತ್ರ ಪರಿಸ್ಥಿತಿ ಸುಧಾರಿಸಬಹುದು ಎಂದು ಹೇಳಿದ್ದರು.
First published: April 22, 2020, 8:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading