ವಾಕ್ಸಿನ್​ ಫಾರ್ಮುಲಾನ ಅಡುಗೆ ರೆಸಿಪಿಯಂತೆ ಹಂಚಿಕೊಳ್ಳಲು ಆಗಲ್ಲ; ಕಷ್ಟಕ್ಕೆ ಆಗಲ್ವಾ ಬಿಲ್​ಗೇಟ್ಸ್​​?

ಜನ ಕೊರೋನಾದಿಂದ ಪ್ರಾಣ ಬಿಡುತ್ತಿದ್ದಾರೆ. ಇಂಥ ಸಮಯದಲ್ಲಿ ಲಸಿಕೆ ಫಾರ್ಮುಲಾ ಕೊಡಲ್ಲ ಅನ್ನೋದು ದುಡ್ಡಿನ ಧಿಮಾಕು ಎಂದು ಬಿಲ್​​​ಗೇಟ್ಸ್​​ ವಿರುದ್ಧ ಟೀಕೆ, ಖಂಡನೆ ವ್ಯಕ್ತವಾಗ್ತಿದೆ.

ಬಿಲ್ ಗೇಟ್ಸ್​.

ಬಿಲ್ ಗೇಟ್ಸ್​.

  • Share this:
ಬೆಂಗಳೂರು: ವಿಶ್ವದ ಆಗರ್ಭ ಶ್ರೀಮಂತರಲ್ಲಿ ಒಬ್ಬರಾದ ಹಾಗೂ ದೈತ್ಯ ಕಂಪನಿ ಮೈಕ್ರೋಸಾಫ್ಟ್​​ನ ಸಹ ಸಂಸ್ಥಾಪಕರಾದ ಬಿಲ್​​ಗೇಟ್ಸ್​​​​​​ ಸದ್ಯ ಇಡೀ ಜಗತ್ತು ಎದುರಿಸುತ್ತಿರುವ ಕೊರೋನಾ ಸಂಕಷ್ಟದ ಬಗ್ಗೆ ಮಾತನಾಡಿದ್ದಾರೆ. ದಿ ಸ್ಕೈ ನ್ಯೂಸ್​​ಗೆ ನೀಡಿರುವ ಸಂದರ್ಶನದಲ್ಲಿ ಲಸಿಕೆ ವಿತರಣೆ ಬಗ್ಗೆ ಬಿಲ್​ಗೇಟ್ಸ್​​​ ನೀಡಿರುವ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೊರೋನಾದಿಂದ ತತ್ತರಿಸುತ್ತಿರುವ ರಾಷ್ಟ್ರಗಳ ನೆರವಿಗೆ ವಿಶ್ವದ ಶ್ರೀಮಂತರು ಮುಂದಾಗುತ್ತಿದ್ದಾರೆ. ಇಂಥಾ ಸಮಯದಲ್ಲಿ ಕೊರೋನಾ ಲಸಿಕೆ ಫಾರ್ಮುಲಾವನ್ನು ಅಡುಗೆಯ ರೆಸಿಪಿಯಂತೆ ಎಲ್ಲಾ ದೇಶಗಳೊಂದಿಗೂ ಹಂಚಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮೂಲಕ ಬಿಗ್​ಗೇಟ್ಸ್​​ ಎಲ್ಲರ ಹುಬ್ಬೇರಿಸಿದ್ದಾರೆ.

ಅಭಿವೃದ್ಧಿಶೀಲ ರಾಷ್ಟ್ರಗಳ ಜೊತೆ ಲಸಿಕೆಯ ಫಾರ್ಮುಲಾವನ್ನು ಹಂಚಿಕೊಳ್ಳಲು ಬಯಸುತ್ತೀರಾ ಎಂಬ ಸಂದರ್ಶಕರ ಪ್ರಶ್ನೆಗೆ ಗೇಟ್ಸ್​​ ಇಲ್ಲ ಎಂದು ನೇರವಾಗಿ ಉತ್ತರಿಸಿದ್ದಾರೆ. ಇದಕ್ಕೆ ಉದಾಹರಣೆಯನ್ನೂ ಕೊಟ್ಟಿರುವ ಗೇಟ್ಸ್​, ಅಮೆರಿಕಾದ ಜಾನ್ಸನ್​ & ಜಾನ್ಸನ್​​ ಕಂಪನಿ ಭಾರತದಲ್ಲಿ ಕಾರ್ಖಾನೆ ತೆಗೆದು ಲಸಿಕೆ ನೀಡುತ್ತೆ. ಆದರೆ ಅದು ಅಮೆರಿಕಾದ ಸಂಶೋಧನೆ ಹಾಗೂ ಆಸ್ತಿ. ಇಲ್ಲಿಂದ ಅಲ್ಲಿಗೆ ರವಾನೆ ಮಾಡುವುದಕ್ಕಿಂತ ಅಲ್ಲಿಯೇ ಸಂಶೋಧನೆಗಳು ನಡೆಯಬೇಕು. ವಿಶ್ವದಲ್ಲಿ ಸಾಕಷ್ಟು ಲಸಿಕಾ ಕಂಪನಿಗಳಿವೆ. ಲಸಿಕೆ ಸುರಕ್ಷತೆ ಬಗ್ಗೆ ಜನ ಗಂಭೀರವಾಗಿದ್ದಾರೆ. ಹೀಗಾಗಿ ಸುಮ್ಮನೆ ಒಂದೇ ಫಾರ್ಮುಲಾ ಎಲ್ಲೆಡೆ ಓಡಾಡಬಾರದು. ಹಲವು ಸಂಶೋಧನೆಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಲ್​ಗೇಟ್ಸ್​​​​​ ಅವರ ಈ ಅಭಿಪ್ರಾಯಕ್ಕೆ ವಿಶ್ವದ ಹಲವಡೆ ಟೀಕೆಗಳು, ಖಂಡನೆಗಳು ವ್ಯಕ್ತವಾಗಿದೆ. ಜನ ಕೊರೋನಾದಿಂದ ಪ್ರಾಣ ಬಿಡುತ್ತಿದ್ದಾರೆ. ಇಂಥ ಸಮಯದಲ್ಲಿ ಲಸಿಕೆ ಫಾರ್ಮುಲಾ ಕೊಡಲ್ಲ. ಅವರೇ ಸಂಶೋಧನೆ ನಡೆಸಬೇಕು ಎಂದಿರೋದು ದುಡ್ಡಿನ ಧಿಮಾಕು ಅಷ್ಟೇ ಎಂದು ಕಟುವಾಗಿ ಟೀಕಿಸಿದ್ದಾರೆ. ಬಿಲ್​ಗೇಟ್ಸ್​ ಹೇಳಿರುವಂತೆ ಲಸಿಕೆಗೆ ಪ್ರಯತ್ನಗಳು, ಪರೀಕ್ಷೆಗಳನ್ನು ಮಾಡಿಕೊಂಡು ಕೂರವ ಸಮಯ ಈಗಿಲ್ಲ. ಜನ ಸಾಯುತ್ತಿದ್ದಾರೆ, ವಿಶ್ವದ ಮುಂದುವರಿದ ರಾಷ್ಟ್ರಗಳು ಮುಂದುವರೆಯುತ್ತಿರುವ ಹಾಗೂ ಬಡ ದೇಶಗಳ ನೆರವಿಗೆ ಧಾವಿಸಬೇಕು. ಫಾರ್ಮುಲಾ ಕೊಡಲು ಅಸಾಧ್ಯ ಎನ್ನುವುದು ಅಮಾನವೀಯ ಎಂದು ಬಿಲ್​ಗೇಟ್ಸ್​​​ನ ಖಂಡಿಸಿದ್ದಾರೆ.

ಇನ್ನು ಮುಂದುವರಿದ ರಾಷ್ಟ್ರಗಳು ತಮಗೆ ಮೊದಲು ಲಸಿಕೆ ಪಡೆಯಲು ಆದ್ಯತೆ ನೀಡುತ್ತಿರುವುದು ಅಚ್ಚರಿಯೇನಲ್ಲ. ಮೊದಲು ಶ್ರೀಮಂತ ದೇಶಗಳು ಚೆನ್ನಾಗಿರುವ ಆಹಾರ ಪದಾರ್ಥಗಳನ್ನು ತಿಂದು, ಉಳಿದದ್ದನ್ನು ಬಡ ದೇಶಗಳಿಗೆ ಕೊಡುವ ಸಂಸ್ಕೃತಿ ಈಗಲೇ ಮುಂದುವರೆದಿದೆ ಎಂದೂ ಸಂದರ್ಶನದಲ್ಲಿ ಬಿಲ್​ಗೇಟ್ಸ್​ ಹೇಳಿದ್ದಾರೆ.
Published by:Kavya V
First published: