ಕೊರೋನಾ: ಇಂದಿನಿಂದ ಮಂಗಳೂರು-ಮಡಗಾಂವ್ ರೈಲು ಜತೆಗೆ ಮಂಗಳೂರು-ವಿಜಯಪುರ ಟ್ರೈನ್​​ ಕೂಡ ರದ್ದು

ಕರ್ನಾಟಕದ ಕಲಬುರಗಿಯಲ್ಲಿ ಕೊರೊನಾ ವೈರಸ್ ಗೆ 76 ವರ್ಷದ ಮೊಹ್ಮದ್ ಹುಸೇನ್ ಸಿದ್ದಿಕಿ ಬಲಿಯಾದರು. ಇವರ ನಂತರ ದೆಹಲಿಯಲ್ಲಿ 68 ವರ್ಷದ ಮತ್ತೋರ್ವ ವ್ಯಕ್ತಿ ಈ ಮಾರಕಕ್ಕೆ ಮೃತರಾದರು. ಇದೀಗ ಮುಂಬೈನಲ್ಲಿ 64 ವರ್ಷದ ಮತ್ತೊಬ್ಬ ವ್ಯಕ್ತಿ ಕೊರೊನಾದಿಂದ ಅಸುನೀಗಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಂಗಳೂರು(ಮಾ.19): ಕೊರೋನಾ ವೈರಸ್​​ ಭೀತಿ ಕಾರಣ ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗವೂ ಮಂಗಳೂರು-ವಿಜಯಪುರ ರೈಲು ಸಂಚಾರವು ಇಂದಿನಿಂದ ಅಂದರೆ ಮಾ.19ರಿಂದ 22ರವರೆಗೆ ಸ್ಥಗಿತಗೊಂಡಿದೆ. ವಿಜಯಪುರದಿಂದ ಮಂಗಳೂರು ಜಂಕ್ಷನ್‌ಗೆ ಆಗಮಿಸುವ ತತ್ಕಾಲ್ ರೈಲು (ಟ್ರೇನ್ ನಂ. 07327) ಮತ್ತು ಮಂಗಳೂರು ಜಂಕ್ಷನ್​​ನಿಂದ ವಿಜಯಪುರಕ್ಕೆ ತೆರಳುವ ರೈಲುಗಳನ್ನು (07328) ಮಾ.22ರವರೆಗೆ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

  ಈಗಾಗಲೇ ಮಂಗಳೂರು ಸೆಂಟ್ರಲ್​​ ಮತ್ತು ಮಡಗಾಂವ್ ನಡುವಿನ ರೈಲುಗಳ ಸಂಚಾರವನ್ನು ಮಾ.19ರಿಂದ 31ರವರೆಗೂ ಸಂಪೂರ್ಣ ರದ್ದುಗೊಳಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಎರಡು ದಿನಗಳ ಹಿಂದೆಯೇ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಕೆ. ಗೋಪಿನಾಥ್, ಮಂಗಳೂರು ಸೆಂಟ್ರಲ್- ಮಡಗಾಂವ್ ಇಂಟರ್‌ ಸಿಟಿ ಎಕ್ಸ್‌ಪ್ರೆಸ್ (ಟ್ರೇನ್ ನಂ.22636) ರೈಲು ರದ್ದುಗೊಳಿಸಲಾಗಿದೆ. ಜತೆಗೆ ಮಡಗಾಂವ್‌ನಿಂದ ಮಂಗಳೂರು ಸೆಂಟ್ರಲ್‌ಗೆ ಆಗಮಿಸುವ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲ್‌ನ್ನು (22635) ಕೂಡ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದರು.

  ಚೀನಾದಲ್ಲಿ ಪತ್ತೆಯಾದ ಕೊರೋನಾ ವೈರಸ್​​ ಭಾರತದಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಇಲ್ಲಿಯವರೆಗೂ ಈ ಮಾರಕ ರೋಗಕ್ಕೆ ಸಿಲುಕಿ 150ಕ್ಕೂ ಅಧಿಕ ಭಾರತೀಯರು ನರಳುತ್ತಿದ್ದಾರೆ. ಮಹಾರಾಷ್ಟ್ರದಂತೆ ಕರ್ನಾಟಕದ ವಾತವರಣವೂ ಹದಗೆಟ್ಟಿದೆ. ಮೊದಲಿಗೆ ನಿರಾತಂಕವಾಗಿದ್ದ ಕರ್ನಾಟಕದಲ್ಲೂ ಈಗ ಕೊರೊನಾ ಕೋಲಾಹಲ ಸೃಷ್ಟಿಸಿದ ಪರಿಣಾಮ 14 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರ ಸಂಪರ್ಕದಲ್ಲಿ ಇರುವವರ ವೈದ್ಯಕೀಯ ತಪಾಸಣೆಗೆ ತೀವ್ರ ಕಾರ್ಯಾಚರಣೆ ನಡೆಯುತ್ತಿದೆ.

  ಇದನ್ನೂ ಓದಿ: ಭಾರತದಲ್ಲಿ 151ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ; ಜಾಗತಿಕವಾಗಿ 2 ಲಕ್ಷ ಜನರಿಗೆ ಕೋವಿಡ್​​-19

  ಕರ್ನಾಟಕದ ಕಲಬುರಗಿಯಲ್ಲಿ ಕೊರೊನಾ ವೈರಸ್ ಗೆ 76 ವರ್ಷದ ಮೊಹ್ಮದ್ ಹುಸೇನ್ ಸಿದ್ದಿಕಿ ಬಲಿಯಾದರು. ಇವರ ನಂತರ ದೆಹಲಿಯಲ್ಲಿ 68 ವರ್ಷದ ಮತ್ತೋರ್ವ ವ್ಯಕ್ತಿ ಈ ಮಾರಕಕ್ಕೆ ಮೃತರಾದರು. ಇದೀಗ ಮುಂಬೈನಲ್ಲಿ 64 ವರ್ಷದ ಮತ್ತೊಬ್ಬ ವ್ಯಕ್ತಿ ಕೊರೊನಾದಿಂದ ಅಸುನೀಗಿದ್ದಾನೆ. ಈ ಮಧ್ಯೆಯೇ ಕರ್ನಾಟಕ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಎಷ್ಟು ಮಂದಿ ಕೊರೋನಾದಿಂದ ನರಳುತ್ತಿದ್ದಾರೆ ಎಂಬ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.
  First published: