Sonu Sood: ತನ್ನ ಮಗುವಿಗೆ ಸೋನು ಸೂದ್​ ಹೆಸರಿಟ್ಟ ಬಿಹಾರದ ವಲಸೆ ಕಾರ್ಮಿಕ ಮಹಿಳೆ..!

Sonu Sood: ಮುಂಬೈನಲ್ಲಿರುವ ವಲಸೆ ಕಾರ್ಮಿಕರ ಜೊತೆಗೆ, ಕೇರಳದಲ್ಲಿ ಸಿಲುಕಿದ್ದ 167 ಮಂದಿ ಹೆಣ್ಣು ಮಕ್ಕಳಿಗೂ ಸಹಾಯ ಮಾಡಿದ್ದಾರೆ ನಟ ಸೋನು. ಅವರಿಗಾಗಿ ವಿಶೇಷ ವಿಮಾನದ ವ್ಯವಸ್ಥೆ ಮಾಡಿಸಿ, ಮನೆಗಳಿಗೆ ತಲುಪಿಸಿದ್ದಾರಂತೆ.

Anitha E | news18-kannada
Updated:May 29, 2020, 11:30 PM IST
Sonu Sood: ತನ್ನ ಮಗುವಿಗೆ ಸೋನು ಸೂದ್​ ಹೆಸರಿಟ್ಟ ಬಿಹಾರದ ವಲಸೆ ಕಾರ್ಮಿಕ ಮಹಿಳೆ..!
ಸೋನು ಸೂದ್​
  • Share this:
ಲಾಕ್​ಡೌನ್​ನಿಂದಾಗಿ ತಮ್ಮ ಮನೆಗಳಿಗೆ ಸೇರಲಾಗದೆ ಪರದಾಡುತ್ತಿರುವ ವಲಸೆ ಕಾರ್ಮಿಕರ ಸಹಾಯಕ್ಕೆ ನಿಂತಿದ್ದಾರೆ  ಸೋನು ಸೂದ್​ . ಮುಂಬೈನಲ್ಲಿ ಸಿಲುಕಿದ್ದ ನೂರಾರು ಮಂದಿ ವಲಸೆ ಕಾರ್ಮಿಕರಿಗೆ ಅನ್ನಾಹಾರದ ಜೊತೆಗೆ ಸುರಕ್ಷಿತವಾಗಿ ಅವರವರ ಮನೆಗಳಿಗೆ ತಲುಪಿಸಲು ಬಸ್ಸುಗಳ ವ್ಯವಸ್ಥೆ ಸಹ ಮಾಡಿಸಿದ್ದರು. 

ಮುಂಬೈನಲ್ಲಿರುವ ವಲಸೆ ಕಾರ್ಮಿಕರ ಜೊತೆಗೆ, ಕೇರಳದಲ್ಲಿ ಸಿಲುಕಿದ್ದ 167 ಮಂದಿ ಹೆಣ್ಣು ಮಕ್ಕಳಿಗೂ ಸಹಾಯ ಮಾಡಿದ್ದಾರೆ ನಟ ಸೋನು. ಅವರಿಗಾಗಿ ವಿಶೇಷ ವಿಮಾನದ ವ್ಯವಸ್ಥೆ ಮಾಡಿಸಿ, ಮನೆಗಳಿಗೆ ತಲುಪಿಸಿದ್ದಾರಂತೆ.

covid 19 sonu sood provides meals to 25000 migrant workers during Ramadan 
ಸೋನು ಸೂದ್


ಕಷ್ಟದಲ್ಲಿರುವ ವಲಸೆ ಕಾರ್ಮಿಕರು ಹಸಿವಿನಿಂದ ಇರಬಾರದೆಂದು ಅವರಿಗೆ ಆಹಾರದ ವ್ಯವಸ್ಥೆ ಮಾಡುವ ಮೂಲಕ ನೆರವಾಗಲು ಮುಂದಾದವರು ಸೋನು. ಇಂತಹ ನಿಸ್ವಾರ್ಥಿ ನಟನಿಂದ ಸಹಾಯ ಪಡೆದವರು ಹೇಗಾದರು ಋಣ ತೀರಿಸಬೇಕೆಂದುಕೊಳ್ಳುವುದರಲ್ಲಿ ತಪ್ಪಿಲ್ಲ.

ಇದನ್ನೂ ಓದಿ: Sonu Sood: ಕೇರಳದಲ್ಲಿ ಸಿಲುಕಿದ್ದ 167 ಹೆಣ್ಣು ಮಕ್ಕಳಿಗೆ ಮನೆ ಸೇರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿಸಿದ ಸೋನು ಸೂದ್​..!

ಬಿಹಾರ ಮೂಲದ ವಲಸೆ ಕಾರ್ಮಿಕ ಮಹಿಳೆ ತಮ್ಮ ಮಗುವಿಗೆ ಸೂನು ಹೆಸರನ್ನೇ ಇಟ್ಟಿದ್ದಾರಂತೆ. ಹೀಗೆಂದು ಅವರೇ ಸೋನುಗೆ ತಿಳಿಸಿದ್ದು, ಈ ವಿಷಯವನ್ನು ಸೋನು ಇಂಗ್ಲಿಷ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

covid 19 sonu sood provides meals to 25000 migrant workers during Ramadan 
ಸೋನು ಸೂದ್​
ಮುಂಬೈನಿಂದ ಬಿಹಾರಕ್ಕೆ ಕಳುಹಿಸಿದ್ದ ಕಾರ್ಮಿಕರಲ್ಲಿ ಓರ್ವ ಗರ್ಭಿಣಿ ಮಹಿಳೆ ಇದ್ದರಂತೆ. ಆಕೆ ಮನೆಗೆ ತಲುಪಿದ ನಂತರ ಅವರ ಆರೋಗ್ಯ ವಿಚಾರಿಸಲು ಸೋನು ಅವರನ್ನು ಸಂಪರ್ಕಿಸಿದ್ದರಂತೆ. ಆಗ ಮಾತನಾಡುತ್ತಾ ಆ ಮಹಿಳೆ ಗಂಡು ಮಗುವಾಗಿದೆ ಎಂದಿದ್ದಾರೆ. ಆಗ ಸೋನು, ಅವನಿಗೆ ಸೋನು ಶ್ರೀವಾಸ್ತವ್​ ಎಂದು ಹೆಸರಿಡಬೇಕು ಅಂತ ತಮಾಷೆಗೆ ಹೇಳಿದರಂತೆ. ಅದಕ್ಕೆ ಆ ತಾಯಿ ನನ್ನ ಮಗನಿಗೆ ಈಗಾಗಲೇ ಸೋನು ಸೂದ್​ ಶ್ರೀವಾಸ್ತವ್​ ಎಂದು ನಾಮಕರಣ ಮಾಡಿದ್ದೇವೆ ಎಂದರಂತೆ. ಈ ವಿಷಯ ಕೇಳಿ ಸೋನು ಹೃದಯ ತುಂಬಿ ಬಂದಿತ್ತಂತೆ. ಹೀಗೆಂದು ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಬಾಲಿವುಡ್ ನಟ.

ಇದನ್ನೂ ಓದಿ: Rashmika Mandanna: ಮತ್ತೊಮ್ಮೆ ಟ್ರೋಲಿಗರಿಗೆ ಪರೋಕ್ಷವಾಗಿ ಚಾಟಿ ಬೀಸಿದ ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ..!

ಇಂತಹ ಕಷ್ಟದ ಸಮಯದಲ್ಲಿ ಯಾರೊಬ್ಬರೂ ಮನೆಗಳಿಂದ ದೂರ ಇದ್ದು ಕಷ್ಟ ಪಡಬಾರದು ಅನ್ನೋದು ಸೋನು ಅವರ ಆಶಯ. ಇದೇ ಕಾರಣದಿಂದ ಯಾರೇ ಸಹಾಯ ಕೇಳಿದರೂ ಅವರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ಸೋನು ಮಾಡುವ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 Kareena Kapoor: ಕರೀನಾರ ಇನ್​ಸ್ಟಾಗ್ರಾಂನಲ್ಲೂ ಸ್ಟಾರ್ ಕಿಡ್​ ತೈಮೂರ್​ನದ್ದೇ ದರ್ಬಾರ್​..!

First published: May 29, 2020, 11:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading