ಬಿಹಾರದಲ್ಲಿ ಮತ್ತೊಬ್ಬರಿಗೆ ಕೊರೋನಾ; ಸೋಂಕಿತರ ಸಂಖ್ಯೆ 7ಕ್ಕೇರಿಕೆ

ವಿದೇಶಗಳಿಂದ ಆಗಮಿಸುವವರ ಮತ್ತು ಕೊರೋನಾ ಸೋಂಕಿತರ ನಿಕಟವರ್ತಿಗಳನ್ನು ಕ್ವಾರಂಟೈನ್ ಮಾಡಲು ಬಿಹಾರದಲ್ಲಿ ಸ್ಥಳದ ಕೊರತೆ ಎದುರಾಗಿದೆ. ಹೀಗಾಗಿ, ಪಾಟ್ನಾದಲ್ಲಿ ತಮಗೆ ನೀಡಿರುವ ಸರ್ಕಾರಿ ಬಂಗಲೆಯನ್ನು ಕೊರೋನಾ ಶಂಕಿತರ ಕ್ವಾರಂಟೈನ್ ಕೇಂದ್ರವಾಗಿ ಅಥವಾ ಟೆಸ್ಟಿಂಗ್ ಸೆಂಟರ್ ಆಗಿ ಮಾಡಲು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಸೂಚಿಸಿದ್ದಾರೆ.

news18-kannada
Updated:March 26, 2020, 10:15 PM IST
ಬಿಹಾರದಲ್ಲಿ ಮತ್ತೊಬ್ಬರಿಗೆ ಕೊರೋನಾ; ಸೋಂಕಿತರ ಸಂಖ್ಯೆ 7ಕ್ಕೇರಿಕೆ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ(ಮಾ.26): ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 694ಕ್ಕೆ ಏರಿಕೆಯಾಗಿದೆ.ಈಗಾಗಲೇ ದೇಶದಲ್ಲಿ 16 ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್​ನ ಭೀಕರತೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆಯೇ ಮೈಸೂರಿನ ಮಾದರಿಯಲ್ಲೇ ಬಿಹಾರದಲ್ಲಿಎಲ್ಲಿಯೂ ಹೋಗದಿದ್ದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಪಾಟ್ನಾದ 20 ವರ್ಷದ ಯುವಕನಲ್ಲಿ ಕಾಣಿಸಿಕೊಂಡ ಸೋಂಕಿನ ಬಗ್ಗೆ ನಳಂದ ಮೆಡಿಕಲ್ ಕಾಲೇಜು ಧೃಡಪಡಿಸಿದೆ. ಈ ಮೂಲಕ ಬಿಹಾರದ ಕೊರೋನಾ ಪೀಡಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ವಿದೇಶಗಳಿಂದ ಬಿಹಾರಕ್ಕೆ ಬರುವವರಿಗೆ, ಹಾಗೂ ಕೊರೋನಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರಿಗೆ ಈಗಾಗಲೇ ಗೃಹ ದಿಗ್ಬಂಧನ (ಹೋಮ್ ಕ್ವಾರಂಟೈನ್)ದಲ್ಲಿ ಇರಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೊರೋನಾ ಶಂಕಿತರನ್ನು ಪ್ರತ್ಯೇಕವಾಗಿರಿಸಲು ಅನೇಕ ಹೋಟೆಲ್, ಆಸ್ಪತ್ರೆ​ಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ. ಇನ್ನು ಕೆಲವರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರುವಂತೆ ಸೂಚನೆ ನೀಡಲಾಗಿದೆ.

ವಿದೇಶಗಳಿಂದ ಆಗಮಿಸುವವರ ಮತ್ತು ಕೊರೋನಾ ಸೋಂಕಿತರ ನಿಕಟವರ್ತಿಗಳನ್ನು ಕ್ವಾರಂಟೈನ್ ಮಾಡಲು ಬಿಹಾರದಲ್ಲಿ ಸ್ಥಳದ ಕೊರತೆ ಎದುರಾಗಿದೆ. ಹೀಗಾಗಿ, ಪಾಟ್ನಾದಲ್ಲಿ ತಮಗೆ ನೀಡಿರುವ ಸರ್ಕಾರಿ ಬಂಗಲೆಯನ್ನು ಕೊರೋನಾ ಶಂಕಿತರ ಕ್ವಾರಂಟೈನ್ ಕೇಂದ್ರವಾಗಿ ಅಥವಾ ಟೆಸ್ಟಿಂಗ್ ಸೆಂಟರ್ ಆಗಿ ಮಾಡಲು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಸೂಚಿಸಿದ್ದಾರೆ.

ಇದನ್ನೂ ಓದಿ: ಕೋವಿಡ್-19: ದೇಶದಲ್ಲಿ ಸೋಂಕಿತರ ಸಂಖ್ಯೆ 694, 16 ಮಂದಿ ಸಾವು

ಈ ಮಧ್ಯೆ ವಿಶ್ವಾದ್ಯಂತ ವ್ಯಾಪಕವಾಗಿ ಹರಡಿರುವ ಕೊರೋನಾ ವೈರಸ್ ಕುರಿತಂತೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿವರ ನೀಡಿದ್ದಾರೆ. 'ಕೊರೊನಾ ವೈರಸ್‌ ಸೋಂಕಿಗೆ ಗುರಿಯಾಗುವವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ‘ಮುಖ್ಯಮಂತ್ರಿ ಚಿಕಿತ್ಸಾ ಸಹಾಯತಾ ಕೋಶ್‌ ಯೋಜನೆ’ಯ ಮೂಲಕ ಭರಿಸಲಿದೆ. ಒಂದು ವೇಳೆ ಈ ಕಾಯಿಲೆಯಿಂದ ಯಾವುದೇ ವ್ಯಕ್ತಿ ಮೃತಪಟ್ಟಿರೇ ಅವರ ಕುಟುಂಬಸ್ಥರಿಗೆ ‘ಮುಖ್ಯಮಂತ್ರಿ ಪರಿಹಾರ ನಿಧಿ’ಯಿಂದ 4 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading