news18-kannada Updated:June 28, 2020, 7:19 AM IST
ಬೆಂಗಳೂರು ಏರ್ಪೋರ್ಟ್
ದೇವನಹಳ್ಳಿ: ಕೊರೋನಾ ವೈರಸ್ ಸೋಂಕು ಹರಡದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಪಾರ್ಕಿಂಗ್ನಿಂದ ಆರಂಭಿಸಿ ವಿಮಾನ ಏರುವವರೆಗೂ ಸಂಪರ್ಕರಹಿತ ಪ್ರಕ್ರಿಯೆಯನ್ನ ಅಳವಡಿಸಲಾಗುತ್ತಿದೆ. ಚೆಕ್ ಇನ್ ಕೌಂಟರ್ಗಳು, ಇಮಿಗ್ರೇಷನ್ ಕೌಂಟರ್ಗಳು, ಎಟಿಆರ್ಎಸ್ ಟ್ರೇಗಳು ಮುಂತಾದ ಪದೇ ಪದೇ ಸ್ಪರ್ಶಿಸುವ ಸ್ಥಳ ಮತ್ತು ವಸ್ತುಗಳಿಗೆ ಸಿಲ್ವರ್ ನ್ಯಾನೊ ಕೋಟಿಂಗ್ ಅನುಷ್ಠಾನಗೊಳಿಸಲಾಗಿದೆ. ಟ್ರೇಗಳಿಗೆ UV ಟ್ರೀಟ್ಮೆಂಟ್ ಮಾಡಲಾಗುತ್ತದೆ. ಪ್ರತಿ ಬಳಕೆಯ ನಂತರ ಈ ಟ್ರೇಗಳನ್ನು ಬದ್ಧತೆಯ ತಂಡ ಸೋಂಕು ನಿವಾರಕ ಸಿಂಪಡಣೆ ಮಾಡುತ್ತದೆ.
ಟ್ರಾಲಿಗಳಿಗೂ ಕೂಡ ಪ್ರತಿ ಬಳಕೆಯ ನಂತರ ಸೋಂಕು ನಿವಾರಕದ ಸಿಂಪಡಣೆ ಮಾಡಲು ಎರಡು UV ಟನಲ್ಗಳನ್ನ ಸಿದ್ಧಪಿಡಸಲಾಗಿದೆ. ಈ ಟನೆಲ್ಗಳು ಟರ್ಮಿನಲ್ನ ನಿರ್ಬಂಧಿತ ಪ್ರದೇಶಗಳಲ್ಲಿ ಇರುತ್ತವೆ.
ಚೆಕ್ ಇನ್ ಬ್ಯಾಗ್ಗಳಿಗೆ ಯುಎಲ್ಬಿ ಸಿಂಪಡಣೆ: ಪರಸ್ಥಳಕ್ಕೆ ಹೋಗುವ ಪ್ರಯಾಣಿಕರ ಬ್ಯಾಗೇಜ್ಗಳನ್ನು ವಿಮಾನಕ್ಕೆ ಕಳುಹಿಸುವ ಮುನ್ನ ಸೋಂಕು ನಿವಾರಣಾ ಕ್ರಮಗಳಿಗೆ ಒಳಪಡಿಸಲಾಗುತ್ತದೆ. ಮೇಲ್ಮೈ ಪ್ರದೇಶಗಳನ್ನು ಸೋಂಕುರಹಿತವಾಗಿಸಲು ಸಿಲ್ವರ್ ನ್ಯಾನೋ ಕೋಟಿಂಗ್ ತಂತ್ರಜ್ಞಾನವನ್ನು ಬಿಐಎಎಲ್ ಪರಿಚಯಿಸಲಿದೆ. ಇದರಿಂದ ಆಯಾ ಪ್ರದೇಶಗಳಲ್ಲಿ ಸ್ವಯಂ ಸೋಂಕು ನಿವಾರಕ, ಪದೇ ಪದೇ ರಾಸಾಯನಿಕಗಳನ್ನು ಸಿಂಪಡಿಸಿ ಸೋಂಕು ನಿವಾರಕ ಕ್ರಮಗಳನ್ನು ಕೈಗೊಳ್ಳುವುದು ಕಡಿಮೆಯಾಗುತ್ತದೆ.
ಹೆಚ್ಚಿನ ಸಂಚಾರ ಇರುವ ಪ್ರದೇಶಗಳು ಮತ್ತು ಪದೇ ಪದೇ ಸ್ಪರ್ಶಿಸುವ ಮೇಲ್ಮೈ ಪ್ರದೇಶಗಳನ್ನು ಸೋಂಕು ನಿವಾರಕವಾಗಿಸುವ ಕ್ರಮವನ್ನು ಪ್ರತಿ 30 ನಿಮಿಷಗಳಿಗೊಮ್ಮೆ, ಪ್ರಯಾಣಿಕರ ಹರಿವಿಗೆ ಅಡ್ಡಿ ಮಾಡದಂತೆ ನಡೆಸಲಾಗುತ್ತಿದೆ. ಹೆಚ್ಚಿನ ಸಂಚಾರ ಇರುವ ಪ್ರದೇಶಗಳಲ್ಲಿ ಪ್ರತಿ ಮೂರು ಗಂಟೆಗಳಿಗೊಮ್ಮೆ ಯುಎಲ್ವಿ ಯಂತ್ರಗಳನ್ನು ಬಳಸಿ ಸೋಂಕು ನಿವಾರಕ ಕ್ರಮ ಕೈಗೊಳ್ಳಲಾಗುತ್ತಿದೆ. ಅಂದರೆ 24 ಗಂಟೆಗಳಲ್ಲಿ 8 ಬಾರಿ ಈ ಕ್ರಮ ಕೈಗೊಳ್ಳಲಾಗುತ್ತದೆ. ವಿಮಾನ ನಿಲ್ದಾಣದಲ್ಲಿನ ವಾಷ್ರೂಮ್ಗಳನ್ನು ನಿಗದಿತ ಅವಧಿಗೊಮ್ಮೆ ಸಮರ್ಪಿತ ಮಾನವಶಕ್ತಿ ಬಳಸಿ ಸೋಂಕು ನಿವಾರಕ ಕ್ರಮ ಕೈಗೊಳ್ಳಲಾಗುತ್ತಿದೆ. 456 ಟೇಬಲ್ಟಾಪ್ ಹ್ಯಾಂಡ್ ಸ್ಯಾನಿಟೈಸರ್ಗಳು ಮತ್ತು ಸೆನ್ಸರ್ ಆಧಾರಿತ 107 ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಟರ್ಮಿನಲ್ನ ವಿವಿಧ ಕಡೆಗಳಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: ತಮಿಳುನಾಡಿನ ಪೊಲೀಸ್ ಕಸ್ಟಡಿಯಲ್ಲಿ ದಾರುಣ ಸಾವುಂಡ ಜಯರಾಜ್ ಮತ್ತು ಬೆನಿಕ್ಸ್; ಪ್ರಕರಣದ ಒಂದು ಟೈಮ್ಲೈನ್
ಪಿಪಿಇ ಬಯೋವೇಸ್ಟ್ ಸುರಕ್ಷಿತ ವಿಲೇವಾರಿ:
ಪಿಪಿಇಗಳ ಬಳಕೆ ಹೆಚ್ಚುತ್ತಿದ್ದು, ಈ ಜೈವಿಕ ತ್ಯಾಜ್ಯಗಳನ್ನು ಸುರಕ್ಷಿತ ರೀತಿಯಲ್ಲಿ ವಿಲೇವಾರಿ ನಡೆಸುವ ಅಗತ್ಯವಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿ, ಅವರ ಮಾಸ್ಕ್ಗಳು, ಗೌಸ್ಗಳು ಮತ್ತು ಇತರೆ ಪಿಪಿಇ ಉಪಕರಣಗಳನ್ನು ಅನುಕೂಲ ರೀತಿಯಲ್ಲಿ ವಿಲೇವಾರಿ ಮಾಡಲು ಬೆಂಗಳೂರು ವಿಮಾನ ನಿಲ್ದಾಣದ ಎಲ್ಲೆಡೆ 120 ಸ್ಥಳಗಳಲ್ಲಿ ಜೈವಿಕ ತ್ಯಾಜ್ಯ ವಿಲೇವಾರಿ ಕಸದ ಡಬ್ಬಿಗಳನ್ನು ಇರಿಸಲಾಗಿದೆ. ಜೈವಿಕ ತ್ಯಾಜ್ಯವನ್ನು ಬದ್ಧತೆಯ ತಂಡವೊಂದು ನಿರ್ವಹಿಸುತ್ತಿದ್ದು, ಇದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಪ್ಪಿಗೆ ಪಡೆದಿರುವ ವೆಂಡರ್ಗೆ ಹಸ್ತಾಂತರಿಸಲಾಗುತ್ತದೆ. ಅವರು ಈ ತ್ಯಾಜ್ಯವನ್ನು ಸುಟ್ಟು ನಾಶ ಪಡಿಸುವ ಇನ್ಸರ್ನೇಷನ್ ಕ್ರಮಕ್ಕೆ ಒಳಪಡಿಸುತ್ತಾರೆ.
ಸಂಪರ್ಕರಹಿತ ಪ್ರಕ್ರಿಯೆ ವ್ಯವಸ್ಥೆಯು ಪ್ರಯಾಣಿಕರ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡಿದೆ ಎಂದು ಬಿಐಎಎಲ್ ಹೇಳಿದೆ. ವ್ಯವಸ್ಥೆಯಲ್ಲಿ ಸಾಗುವ ಎಲ್ಲಾ ವಸ್ತುಗಳ ಪ್ರಕ್ರಿಯೆಯಲ್ಲಿ ದೈಹಿಕ ಸಂಪರ್ಕವನ್ನು ಕಡಿಮೆ ಮಾಡಿ, ಆರಂಭದಿಂದ ಅಂತ್ಯದವರೆಗೆ ಗ್ರಾಹಕರ ಅನುಭವವನ್ನು ವಿಸ್ತರಿಸುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದರೂ ಚೆಕ್ ಇನ್ ಸಂದರ್ಭದಲ್ಲಿ ಹಲವಾರು ಸ್ಥಳಗಳಲ್ಲಿ ಪ್ರಯಾಣಿಕರು ಕಳೆಯಬೇಕಾದ ಸಮಯವನ್ನು ಈ ಸಂಪರ್ಕರಹಿತ ಪ್ರಕ್ರಿಯೆ ಕಡಿಮೆ ಮಾಡಿದೆ. ಜೊತೆಗೆ ಪ್ರಯಾಣಿಕರು ಕ್ಷಿಪ್ರಗತಿಯಲ್ಲಿ ಸಾಗಲು ನೆರವಾಗಿದೆ.
First published:
June 28, 2020, 7:19 AM IST