• ಹೋಂ
  • »
  • ನ್ಯೂಸ್
  • »
  • Corona
  • »
  • ಕೊರೋನಾ ಅಟ್ಟಹಾಸ: ಭೂತಾನ್​ನಲ್ಲಿ ಮೊದಲ ಪ್ರಕರಣ ಪತ್ತೆ; ಅಮೆರಿಕದಲ್ಲಿ 12ಕ್ಕೇರಿದ ಸಾವಿನ ಸಂಖ್ಯೆ

ಕೊರೋನಾ ಅಟ್ಟಹಾಸ: ಭೂತಾನ್​ನಲ್ಲಿ ಮೊದಲ ಪ್ರಕರಣ ಪತ್ತೆ; ಅಮೆರಿಕದಲ್ಲಿ 12ಕ್ಕೇರಿದ ಸಾವಿನ ಸಂಖ್ಯೆ

ರಾಜ್ಯದಲ್ಲಿ ಒಟ್ಟು 18 ಕೊರೋನಾ ಶಂಕಿತರನ್ನು ಐಸೋಲೇಟೆಡ್ ವಾರ್ಡ್ಗಳಲ್ಲಿ ಇರಿಸಲಾಗಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 10 ಜನ, ಇತರೆ ಆಸ್ಪತ್ರೆಯಲ್ಲಿ ಇಬ್ಬರನ್ನು, ಹಾಸನದಲ್ಲಿ ಇಬ್ಬರು, ದಕ್ಷಿಣ ಕನ್ನಡದಲ್ಲಿ ಮೂವರು ಹಾಗೂ ಬಳ್ಳಾರಿಯಲ್ಲಿ ಒಬ್ಬ ಕೊರೋನಾ ಶಂಕಿತರನ್ನು ಐಸೋಲೇಟೆಡ್ ವಾರ್ಡ್ಗಳಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 18 ಕೊರೋನಾ ಶಂಕಿತರನ್ನು ಐಸೋಲೇಟೆಡ್ ವಾರ್ಡ್ಗಳಲ್ಲಿ ಇರಿಸಲಾಗಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 10 ಜನ, ಇತರೆ ಆಸ್ಪತ್ರೆಯಲ್ಲಿ ಇಬ್ಬರನ್ನು, ಹಾಸನದಲ್ಲಿ ಇಬ್ಬರು, ದಕ್ಷಿಣ ಕನ್ನಡದಲ್ಲಿ ಮೂವರು ಹಾಗೂ ಬಳ್ಳಾರಿಯಲ್ಲಿ ಒಬ್ಬ ಕೊರೋನಾ ಶಂಕಿತರನ್ನು ಐಸೋಲೇಟೆಡ್ ವಾರ್ಡ್ಗಳಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಮಾರ್ಚ್​2ರಂದು ಈ ಅಮೆರಿಕ ಪ್ರವಾಸಿ 76 ವರ್ಷದ ಪ್ರವಾಸಿಗರು ಭಾರತದಿಂದ ಭೂತಾನ್​​ಗೆ ಪ್ರವಾಸ ಬೆಳಸಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಪರೀಕ್ಷಿಸಿದಾಗ ಕೋವಿಡ್​-19 ಸೋಂಕಿರುವುದು ಪತ್ತೆಯಾಗಿದೆ.

  • Share this:

ನವದೆಹಲಿ(ಮಾ. 06): ವಿಶ್ವವನ್ನೇ ಬೆಚ್ಚಿಬೀಳಿಸುತ್ತಿರುವ ಕರೋನಾ ವೈರಸ್​​ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಜಗತ್ತಿನ ಹಲವು ರಾಷ್ಟ್ರಗಳು ಈ ಸೋಂಕಿನಿಂದ ಕಂಗಲಾಗುತ್ತಿದ್ದು, ಇದಕ್ಕೆ ಹೊಸ ಸೇರ್ಪಡೆ ಭೂತಾನ್​​ ಆಗಿದೆ.


ಪುಟ್ಟ ರಾಷ್ಟ್ರವಾಗಿರುವ ಭೂತಾನ್​​ನಲ್ಲಿ ಮೊದಲ ಕರೋನಾ ವೈರಸ್​ ಪ್ರಕರಣ ಪತ್ತೆಯಾಗಿದೆ. ಪ್ರವಾಸಿಗರ ಆಕರ್ಷಣ ತಾಣವಾಗಿರುವ ಭೂತಾನ್​ನಲ್ಲಿ ಅಮೆರಿಕದ ಪ್ರವಾಸಿಗರೊಬ್ಬರು ಈ ಸೋಂಕಿಗೆ ತುತ್ತಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.


ಸೋಂಕು ತಗುಲಿರುವ 76 ವರ್ಷದ ಅಮೆರಿಕನ್ ಪ್ರವಾಸಿಗ ಮಾರ್ಚ್​ 2ರಂದು ಭಾರತದಿಂದ ಭೂತಾನ್​ಗೆ ಪ್ರವಾಸ ಬೆಳಸಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಪರೀಕ್ಷಿಸಿದಾಗ ಕೋವಿಡ್​-19 ಸೋಂಕಿರುವುದು ಪತ್ತೆಯಾಗಿದೆ.


ಈ ಹಿನ್ನೆಲೆಯಲ್ಲಿ ದೇಶಕ್ಕೆ ಪ್ರವಾಸ ಬರುವವರಿಗೆ ಎರಡು ವಾರಗಳ ನಿರ್ಬಂಧ ವಿಧಿಸಲಾಗಿದೆ. ರಾಜಧಾನಿ ತಿಂಪುವಿನ ಮೂರು ಪ್ರದೇಶಗಳಲ್ಲಿ ಶಾಲೆಗಳನ್ನು ಎರಡು ವಾರಗಳ ಮಟ್ಟಿಗೆ ಮುಚ್ಚಲಾಗಿದೆ ಎಂದು ಇಲ್ಲಿನ ಪ್ರಧಾನಿ ತಿಳಿಸಿದ್ದಾರೆ.


ಇನ್ನು ಅಮೆರಿಕದಲ್ಲಿ ಕೊರೋನಾ ವೈರಸ್​ನಿಂದಾಗಿ ಸಾವಿನ ಸಂಖ್ಯೆ 12ಕ್ಕೆ ಏರಿದೆ. ಇದುವರೆಗೆ ಅಲ್ಲಿ 57 ಪ್ರಕರಣಗಳು ದೃಢಪಟ್ಟಿದೆ.


ಇದನ್ನು ಓದಿ: ಕೊರೋನಾ ವೈರಸ್: ಭಾರತದಲ್ಲಿ ಸೋಂಕಿತರ ಸಂಖ್ಯೆ 30ಕ್ಕೇರಿಕೆ; ವಿಶ್ವಾದ್ಯಂತ ಕ್ಷಿಪ್ರ ವೇಗದಲ್ಲಿ ಸೋಂಕು ಏರಿಕೆ


ಚೀನಾದ ವೂಹಾನ್​ನಲ್ಲಿ ಮತ್ತೆ ಹೊಸದಾಗಿ 126 ಪ್ರಕರಣಗಳು ದೃಢಪಟ್ಟಿದೆ. ದಕ್ಷಿಣ ಕೋರಿಯದಲ್ಲಿ ಕೂಡ ಹೊಸದಾಗಿ 196 ಪ್ರಕರಣ ದಾಖಲಾಗಿದ್ದು, ಏಳು ಜನರು ಸಾವನ್ನಪ್ಪಿದ್ದಾರೆ.

Published by:Seema R
First published: