ಸೀಮೆಎಣ್ಣೆ ಕುಡಿದರೆ ಸೋಂಕು ಹೋಗುತ್ತದೆ ಎಂದು ಜೀವ ಕಳೆದುಕೊಂಡ; ವರದಿಯಲ್ಲಿ ಬಂದಿದ್ದು ಕೋವಿಡ್​ ನೆಗಟಿವ್​​

ಪರಿಚಯಸ್ಥರೊಬ್ಬರು ಸೀಮೆ ಎಣ್ಣೆಗೆ ಸೋಂಕು ಕೊಲ್ಲುವ ಶಕ್ತಿ ಇದೆ ಎಂಬ ಹೇಳಿದ್ದು ನೆನಪಾಗಿದೆ, ಇದನ್ನೇ ನಂಬಿದ ಈತ ಸೀಮೆ ಎಣ್ಣೆ ಕುಡಿದು ಅಸ್ವಸ್ಥಗೊಂಡಿದ್ದಾನೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಕೋವಿಡ್​ ಎರಡನೇ ಅಲೆಯಲ್ಲಿ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಜೊತೆಗೆ ಸಾಮಾನ್ಯ ಜನರಲ್ಲೂ ಕೂಡ ಭೀತಿ ಮೂಡಿಸಿದೆ. ಸಾಮಾನ್ಯ ಜ್ವರ ಕಂಡು ಬಂದರೂ ಜನರು ಗಾಬರಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇಂತಹದೇ ಒಂದು ಘಟನೆ ಮಧ್ಯ ಪ್ರದೇಶದ ಭೋಪಾಲ್​ನಲ್ಲಿಯೂ ನಡೆದಿದೆ. ಸಾಮಾನ್ಯ ಜ್ವರದಿಂದ ಬಳಲುತ್ತಿದ್ದ 30 ವರ್ಷದ ಯುವಕ ತನಗೆ ಕೋವಿಡ್​ ಬಂದಿದೆ ಎಂದು ಹೆದರಿ, ಸೀಮೆ ಎಣ್ಣೆ ಕುಡಿದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ದುರಾದೃಷ್ಟ ಎಂದರೇ, ಈತನಿಗೆ ಕೋವಿಡ್​ ಸೋಂಕು ಇರಲೇ ಇಲ್ಲ ಎಂಬ ವರದಿ ಮರಣೋತ್ತರದ ಬಳಿಕ ತಿಳಿದು ಬಂದಿದೆ. ಈ ಮೂಲಕ ಸೋಂಕು ಯಾವ ಮಟ್ಟಿಗೆ ಜನರಲ್ಲಿ ಭಯ, ಅಭದ್ರತೆ ಮೂಡಿಸಿ ಮೂಢ ನಂಬಿಕೆಗಳನ್ನು ಅನುಸರಿಸುವಂತೆ ಪ್ರೇರೆಪಿಸುತ್ತವೆ ಎಂಬುದಕ್ಕೆ ಸಾಕ್ಷಿ ಈ ಘಟನೆ ಯಾಗಿದೆ.

  ವೃತ್ತಿಯಲ್ಲಿ ಟೈಲರ್​ ಆದ ಮಹೇಂದ್ರ ಎಂಬುವವರು ಭೋಪಲ್​ನ ಶಿವ್​ ನಗರದಲ್ಲಿ ವಾಸವಾಗಿದ್ದರು. ಕಳೆದ ಐದಾರು ದಿನಗಳಿಂದ ಮಹೇಂದ್ರ ಜ್ವರದಿಂದ ಬಳಲುತ್ತಿದ್ದ. ಜ್ವರಕ್ಕೆ ಔಷಧ ತೆಗೆದುಕೊಂಡರೂ ದೇಹದ ಉಷ್ಣಾಂಶ ಕಡಿಮೆಯಾಗಿರಲಿಲ್ಲ. ಈ ಹಿನ್ನೆಲೆ ಈತನಿಗೆ ತನಗೆ ಕೊರೋನಾ ಸೋಂಕು ತಗಲಿದೆ ಎಂಬ ಅನುಮಾನ ಮೂಡಿದೆ. ಈ ವೇಳೆ ಈತನಿಗೆ ಪರಿಚಯಸ್ಥರೊಬ್ಬರು ಯಾವಾಗಲೋ ಸೀಮೆ ಎಣ್ಣೆಗೆ ಸೋಂಕು ಕೊಲ್ಲುವ ಶಕ್ತಿ ಇದೆ ಎಂಬ ಹೇಳಿದ್ದು ನೆನಪಾಗಿದೆ, ಇದನ್ನೇ ನಂಬಿದ ಈತ ಸೀಮೆ ಎಣ್ಣೆ ಕುಡಿದು ಅಸ್ವಸ್ಥಗೊಂಡಿದ್ದಾನೆ.

  ಇದನ್ನು ಓದಿ: ಪ್ರತಿದಿನ ಹಸುವಿನ ಮೂತ್ರ ಕುಡಿಯುತ್ತೇನೆ; ನನಗೆ ಕೊರೋನಾ ಬರಲ್ಲ ಎಂದ ಸಂಸದೆ ಪ್ರಗ್ಯಾ ಠಾಕೂರ್​​

  ಈತನ ಸ್ಥಿತಿ ಗಂಭೀರವಾದ ಹಿನ್ನಲೆ ತಕ್ಷಣಕ್ಕೆ ಕುಟುಂಬಸ್ಥರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ಬೆಡ್​ ಕೊರತೆ ಹಿನ್ನಲೆ ದಾಖಲು ಮಾಡಲು ನಿರಾಕರಿಸಿದ್ದಾರೆ. ಬಳಿಕ ಹಮಿಡಿಯ ಎಂಬ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋದರು ಪ್ರಯೋಜನವಾಗಿಲ್ಲ. ಇದಾದ ಎರಡು ದಿನದ ಬಳಿಕ ಮತ್ತೊಂದು ಆಸ್ಪತ್ರೆಯಲ್ಲಿ ಆತನಿಗೆ ಬೆಡ್​ ಸಿಕ್ಕಿದೆ. ಆದರೂ ಆತನ ಉಳಿಸಿಕೊಳ್ಳುವಲ್ಲಿ ಕುಟುಂಬ ಸೋತಿದೆ.

  ಆತನ ದಾಖಲಾತಿ ಬಳಿಕ ನಡೆದ ಸೋಂಕು ಪರೀಕ್ಷೆಯಲ್ಲಿ ಆತನಿಗೆ ಕೋವಿಡ್​ ನೆಗೆಟಿವ್​ ಬಂದಿದೆ ಎಂದು ಇಲ್ಲಿನ ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
  ತೆಲಂಗಾಣದಲ್ಲೂ ಕೂಡ ದಿನಗೂಲಿ ಕಾರ್ಮಿಕನೊಬ್ಬ ಕೂಡ ಇದೇ ರೀತಿ ಜೀವಕ್ಕೆ ಆಪತ್ತು ತಂದು ಕೊಂಡಿರುವ ಘಟನೆ ನಡೆದಿದೆ. ಕೋವಿಡ್​ ಸೋಂಕಿಗೆ ತುತ್ತಾಗಿರುವ ಹಿನ್ನಲೆ ಐಸೋಲೇಷನ್​ ವೇಳೆ ತಾನು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸೋಂಕಿತನ ತಾಯಿ ಚಿಂತೆಗೆ ಒಳಗಾಗಿದ್ದರು. ಈ ಹಿನ್ನಲೆ ಆತ ಇಂತಹ ನಿರ್ಧಾರ ಕೈಗೊಂಡು ಚಲಿಸುವ ರೈಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
  Published by:Seema R
  First published: