ಅಯೋಧ್ಯೆಯಲ್ಲಿ ಆಗಸ್ಟ್‌ 05ಕ್ಕೆ ಪ್ರಧಾನಿ ಮೋದಿಯಿಂದ ಭೂಮಿ ಪೂಜೆ; ಕಾರ್ಯಕ್ರಮ ತಡೆ ಕೋರಿ ನ್ಯಾಯಾಲಯಕ್ಕೆ ಅರ್ಜಿ

ಸಾಮಾಜಿಕ ಅಂತರದ ಕುರಿತು ಸರ್ಕಾರವೇ ಜನರಲ್ಲಿ ಅರಿವು ಮೂಡಿಸಿ ಹೀಗೆ ಸರ್ಕಾರವೇ ಅದನ್ನು ಉಲ್ಲಂಘನೆ ಮಾಡುವುದು ಸರಿಯಲ್ಲ. ಶೀಲಾನ್ಯಾಸದ ಹೆಸರಲ್ಲಿ ಜನ ಒಂದುಕಡೆ ಸೇರಿದರೆ ಅದರಿಂದ ಮುಂದೆ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಭೂಮಿ ಪೂಜೆಗೆ ತಡೆ ನೀಡಿ ಎಂದು ಒತ್ತಾಯಿಸಿ ದೂರು ದಾಖಲಿಸಲಾಗಿದೆ.

news18-kannada
Updated:July 24, 2020, 9:32 AM IST
ಅಯೋಧ್ಯೆಯಲ್ಲಿ ಆಗಸ್ಟ್‌ 05ಕ್ಕೆ ಪ್ರಧಾನಿ ಮೋದಿಯಿಂದ ಭೂಮಿ ಪೂಜೆ; ಕಾರ್ಯಕ್ರಮ ತಡೆ ಕೋರಿ ನ್ಯಾಯಾಲಯಕ್ಕೆ ಅರ್ಜಿ
ನರೇಂದ್ರ ಮೋದಿ
  • Share this:
ಅಲಹಾಬಾದ್‌ (ಜುಲೈ 24) ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 05 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1.10 ರ ನಡುವೆ ಅಡಿಪಾಯ ಹಾಕಲಿರುವುದು ಬಹುತೇಕ ಖಚಿತವಾಗಿದೆ. ಆದರೆ, ಇದರ ಬೆನ್ನಿಗೆ ಅಯೋಧ್ಯೆ ರಾಮಮಂದಿರದ ಶಿಲಾನ್ಯಾಸದ ವಿರುದ್ಧ ದೂರು ಅಲಹಾಬಾದ್ ಹೈಕೋರ್ಟ್‌ನಲ್ಲಿ ದೂರು ದಾಖಲಿಸಲಾಗಿದೆ.

ಆಗಸ್ಟ್ 5ರಂದು ನಡೆಯುವ ಶಿಲಾನ್ಯಾಸಕ್ಕೆ ತಡೆ ನೀಡುವಂತೆ ದೆಹಲಿ ಮೂಲದ ಸಾಕೇತ್ ಗೋಖಲೆ ಎಂಬುವರಿಂದ ದೂರು ದಾಖಲಿಸಲಾಗಿದೆ. ಶಿಲಾನ್ಯಾಸ ಕೋವಿಡ್ -19 ರ ಅನ್ಲಾಕ್ -2 ರ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಭೂಮಿ ಪೂಜೆಯಲ್ಲಿ ಮುನ್ನೂರು ಜನ ಸೇರುತ್ತಾರೆ ಇದು ಅನ್ಲಾಕ್ -2 ನಿಯಮಗಳಿಗೆ ವಿರುದ್ಧವಾಗಿದೆ.

ಅಲ್ಲದೆ ಸಾಮಾಜಿಕ ಅಂತರದ ಕುರಿತು ಸರ್ಕಾರವೇ ಜನರಲ್ಲಿ ಅರಿವು ಮೂಡಿಸಿ ಹೀಗೆ ಸರ್ಕಾರವೇ ಅದನ್ನು ಉಲ್ಲಂಘನೆ ಮಾಡುವುದು ಸರಿಯಲ್ಲ. ಶೀಲಾನ್ಯಾಸದ ಹೆಸರಲ್ಲಿ ಜನ ಒಂದುಕಡೆ ಸೇರಿದರೆ ಅದರಿಂದ ಮುಂದೆ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಭೂಮಿ ಪೂಜೆಗೆ ತಡೆ ನೀಡಿ" ಎಂದು ಒತ್ತಾಯಿಸಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ : ರಾಮ ಮಂದಿರ ನಿರ್ಮಾಣವಾದರೆ ಕೊರೋನಾದಿಂದ ದೇಶ ಮುಕ್ತವಾಗುತ್ತದೆಯೇ? ಶರದ್ ಪವಾರ್ ಪ್ರಶ್ನೆ
ಸುದೀರ್ಘ ಕಾನೂನು ಜಗಳದ ನಂತರ, ಸುಪ್ರೀಂ ಕೋರ್ಟ್ ಕಳೆದ ನವೆಂಬರ್‌ ತಿಂಗಳಿನಲ್ಲಿ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಟ್ರಸ್ಟ್‌ ವತಿಯಿಂದ ರಾಮ ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಅಲ್ಲದೆ, ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯ 5 ಎಕರೆ ಜಾಗವನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಹೀಗಾಗಿ ಇದೀಗ ಹಿಂದೂಪರ ಸಂಘಟನೆಗಳು ಒಂದಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಿವೆ.

Published by: MAshok Kumar
First published: July 24, 2020, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading