ಭಾರತ ಲಾಕ್​​ ಡೌನ್- ವೈದ್ಯ ವಿದ್ಯಾರ್ಥಿಗಳಿಗಾಗಿ ದೇಶದಲ್ಲಿಯೇ ಈ ವಿವಿ ಮಾಡಿದ ಮಾದರಿ ಕೆಲಸ ಏನು ಗೊತ್ತಾ?

ಮಾರ್ಚ್ 23 ರಿಂದ ಎಂಬಿಬಿಎಸ್ ಮತ್ತು ಎಲ್ಲ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆನ್​ಲೈನ್​​​ ಮೂಲಕ ತರಗತಿಗಳನ್ನು ಆರಂಭಿಸಿದ ದೇಶದ ಮೊದಲ ವೈದ್ಯಕೀಯ ಕಾಲೇಜು ಎಂಬ ಕೀರ್ತಿಗೆ ವಿಜಯಪುರದ ಬಿಎಲ್​ಡಿಇ ಕಾಲೇಜು ಕೀರ್ತಿಗೆ ಪಾತ್ರವಾಗಿದೆ.

ಆನ್​ ಲೈನ್ ತರಗತಿ

ಆನ್​ ಲೈನ್ ತರಗತಿ

  • Share this:
ವಿಜಯಪುರ(ಏ.04): ಭಾರತ ಲಾಕ್​​ ಡೌನ್ ಹಿನ್ನೆಲೆಯಲ್ಲಿ ಎಲ್ಲ ಶಾಲಾ-ಕಾಲೇಜುಗಳು ಬಾಗಿಲು ಹಾಕಿದ್ದು, ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಆದರೆ, ತಮ್ಮ ವಿದ್ಯಾರ್ಥಿಗಳಿಗೆ ಆನ್​ಲೈನ್ ಮೂಲಕ ಪಾಠ ಮಾಡುವ ಮೂಲಕ ವಿಜಯಪುರದ ವೈದ್ಯಕೀಯ ಕಾಲೇಜು ದೇಶದಲ್ಲಿಯೇ ಮೊದಲ ಪ್ರಯತ್ನ ಮಾಡಿದ್ದು ಯಶಸ್ವಿಯಾಗುತ್ತಿದೆ. 

ತಮ್ಮ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ತೊಂದರೆಯಾಗಬಾರದು ಎಂದು ಯೋಚಿಸಿದ ವಿಜಯಪುರದ ಬಿಎಲ್​ಡಿಇ ಡೀಮ್ಡ್ ವಿಶ್ವವಿದ್ಯಾಲಯ ತನ್ನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆನ್​ಲೈನ್​​ ಮೂಲಕ ಶಿಕ್ಷಣ ಒದಗಿಸುತ್ತಿದೆ. ಪಠ್ಠಕ್ರಮಕ್ಕೆ ಅನುಗುಣವಾಗಿ ವಿಜಯಪುರ ಈ ವಿಶ್ವವಿದ್ಯಾಲಯದಲ್ಲಿ ವೈದ್ಯರು ಆನ್​ಲೈನ್​ ಮೂಲಕವೇ ಶವ ಛೇಧನ ಕ್ರಿಯೆಗಳನ್ನು ತೋರಿಸುವ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

ಲಾಕ್​​ ಡೌನ್​​ ಸಮಯದಲ್ಲಿಯೂ ವೈದ್ಯಕೀಯ ವಿದ್ಯಾರ್ಥಿಗಳು ಯಾವುದೇ ತೊಂದರೆ ಅನುಭವಿಸಬಾರದು. ತಮ್ಮ ಪಾಠ ಪ್ರವಚನಗಳನ್ನು ಆನ್​ಲೈನ್​​ ಮೂಲಕವೇ ಪಡೆಯಲು ಈ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಚಾರ್ಯ ಡಾ. ಅರವಿಂದ ಪಾಟೀಲ್ ತಿಳಿಸಿದ್ದಾರೆ.

medical student
ಆನ್​ ಲೈನ್ ತರಗತಿಯಲ್ಲಿ ವೈದ್ಯಕೀಯ ವಿದ್ಯಾರ್ಥಿ ಪಾಠ ಕೇಳುತ್ತಿರುವುದು


ಮಾರ್ಚ್ 23 ರಿಂದ ಎಂಬಿಬಿಎಸ್ ಮತ್ತು ಎಲ್ಲ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆನ್​ಲೈನ್​​​ ಮೂಲಕ ತರಗತಿಗಳನ್ನು ಆರಂಭಿಸಿದ ದೇಶದ ಮೊದಲ ವೈದ್ಯಕೀಯ ಕಾಲೇಜು ಎಂಬ ಕೀರ್ತಿಗೆ ವಿಜಯಪುರದ ಬಿಎಲ್​ಡಿಇ ಬಿ.ಎಂ.ಪಾಟೀಲ್ ಕಾಲೇಜು ಕೀರ್ತಿಗೆ ಪಾತ್ರವಾಗಿದೆ.

ದೇಶದ ನಾನಾ ಭಾಗಗಳ ಒಟ್ಟು 8 ಸಾವಿರ ವಿದ್ಯಾರ್ಥಿಗಳು ಈ ಆನ್​ಲೈನ್​​ನಲ್ಲಿ ತರಗತಿಗಳ  ಪ್ರಯೋಜನ ಪಡೆದಿದ್ದಾರೆ.  ಶಿಕ್ಷಕರು ತಮ್ಮ ಮನೆಯಿಂದಲೆ ಆನ್​ಲೈನ್​​ ಮೂಲಕ ಪಾಠ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಅದನ್ನು ರೆಕಾರ್ಡ್ ಮಾಡಿಕೊಂಡು ಅಗತ್ಯವಿದ್ದಾಗ ಪುನಃ ಉಪಯೋಗಿಸ ಬಹುದಾಗಿದೆ.

ಇದನ್ನೂ ಓದಿ : LY Suhas - ಯೋಗಿ ನಾಡಲ್ಲಿ ಕನ್ನಡಿಗನ ಪ್ರತಾಪ; ಡಿಸಿಯಾಗಿಯೂ ಸೈ, ಕೊರೋನಾ ಬೇಟೆಗೂ ಜೈ

ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಶಾರೀರ ರಚನಾಶಾಸ್ತ್ರ ಅಂದರೆ ಅನಾಟಮಿ ಬಹುಮುಖ್ಯ ವಿಷಯವಾಗಿರುವುದರಿಂದ ಪ್ರಥಮ ಬಾರಿಗೆ ವರ್ಚುವಲ್ ತರಗತಿಗಳ ಮೂಲಕ ಶರೀರದಲ್ಲಿರುವ ಎಲ್ಲ ಅಂಗಾಂಗ ಅವಯುವಗಳ ಕುರಿತು ಅಭ್ಯಸಿಸಲು ಈ ರೀತಿ ಅನುಕೂಲ ಮಾಡಿಕೊಡಲಾಗಿದೆ.
First published: