ಭಾರತದ ಕೊರೋನಾ ಲಸಿಕೆ ಕೋವ್ಯಾಕ್ಸಿನ್​ ಬೇಡ ಎಂದ ಬ್ರೆಜಿಲ್​: ಮೂರೇ ವಾರದಲ್ಲಿ ಏನೇನಾಯಿತು? ಇಲ್ಲಿದೆ ವರದಿ

ಜೂನ್ 30 ರಂದು, ಭಾರತ್ ಬಯೋಟೆಕ್ ಸಂಸ್ಥೆಯು ಬ್ರೆಜಿಲ್-ಕೊವಾಕ್ಸಿನ್ ಒಪ್ಪಂದದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಎಲ್ಲಾ ಆರೋಪಗಳನ್ನು ನಿರಾಕರಿಸಿತು ಮತ್ತು ಯಾವುದೇ ಮುಂಗಡ ಪಾವತಿಗಳನ್ನು ನಾವು ಸ್ವೀಕರಿಸಲಿಲ್ಲ ಹಾಗೂ ಬ್ರೆಜಿಲ್​ ಆರೋಗ್ಯ ಸಚಿವಾಲಯಕ್ಕೆ ಯಾವುದೇ ಲಸಿಕೆಗಳನ್ನು ನೀಡಿಲ್ಲ ಎಂದು ಕಂಪೆನಿ ಹೇಳಿತ್ತು.

ಕೋವಾಕ್ಸಿನ್ ಲಸಿಕೆ

ಕೋವಾಕ್ಸಿನ್ ಲಸಿಕೆ

 • Share this:
  ಭಾರತದ ಮೊದಲ ಸ್ವದೇಶಿ ನಿರ್ಮಿತ ಸ್ಥಳೀಯ ಲಸಿಕೆಯಾದ ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ ತುರ್ತು ಬಳಕೆಗಾಗಿ ಮಾಡಿಕೊಂಡಿದ್ದ ಒಪ್ಪಂದವನ್ನು  ಜುಲೈ 24 ರಂದು ಬ್ರೆಜಿಲ್ ಸರ್ಕಾರ ರದ್ದುಗೊಳಿಸಿದೆ. ಬ್ರೆಜಿಲ್‌ ದೇಶದೊಂದಿಗೆ ಕಂಪನಿಯ 320 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈ ಒಪ್ಪಂದದಲ್ಲಿ ಭ್ರಷ್ಟಾಚಾರ ಮತ್ತು ಅನೇಕ ವ್ಯತ್ಯಾಸಗಳ ಆರೋಪದ ನಂತರ, ಹೈದರಾಬಾದ್ ಮೂಲದ ಫಾರ್ಮಾ ಕಂಪನಿಯೊಂದಿಗಿನ ಒಪ್ಪಂದ ಕೊನೆಗೊಂಡಿದೆ.

  ಮೆಮೋರಾಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್ (ಎಂಒಯು) ಪ್ರಕಾರ, ನವೆಂಬರ್ 2020 ರಲ್ಲಿ ಬ್ರೆಜಿಲ್ ದೇಶದ ಔಷಧ ತಯಾರಕ ಮತ್ತು ಮಧ್ಯವರ್ತಿ ಕಂಪೆನಿಗಳಾದ ಪ್ರೆಸಿಸಾ ಮೆಡಿಕಮೆಂಟೋಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ ಜೊತೆ ಲಸಿಕೆ ಪೂರೈಕೆಗೆ ಸಹಿ ಹಾಕಲಾಗಿತ್ತು. ಬ್ರೆಜಿಲ್​ನಲ್ಲಿ ಕೋವಾಕ್ಸಿನ್ ಬಳಕೆಗೆ ಅಗತ್ಯವಾದ ಎಲ್ಲಾ ಅನುಮೋದನೆಗಳನ್ನು ಪಡೆಯುವ ಕೆಲಸ ಮಾಡುವುದಾಗಿ ಕಂಪನಿಯು ಆ ಸಮಯದಲ್ಲಿ ಹೇಳಿತ್ತು.

  ಭಾರತ್ ಬಯೋಟೆಕ್ ಒಪ್ಪಂದ ರದ್ದುಮಾಡಿಕೊಂಡಿರುವ ಬಗ್ಗೆ   ಸ್ಥಳೀಯ ಬ್ರೆಜಿಲಿಯನ್ ಪತ್ರಿಕೆಗಳು ವರದಿ ಮಾಡಿದ್ದು, ಆ ವರದಿಗಳ ಪ್ರಕಾರ ತುರ್ತು ಬಳಕೆಗೆ ಎಂದು ಮಾಡಿಕೊಂಡಿದ್ದ ಈ ಒಪ್ಪಂದಕ್ಕೆ ಸಂಬಂಧಿಸಿದ್ದ ಅನೇಕ ವಿಷಯಗಳು ಸಂಕೀರ್ಣವಾಗಿದ್ದವು ಹಾಗೂ ನ್ಯಾಯ ಸಮ್ಮತವಾಗಿ ಇರಲಿಲ್ಲ ಆದ ಕಾರಣ ಕೇವಲ ಮೂರು ವಾರಗಳಲ್ಲಿ ಒಪ್ಪಂದ ಬಿದ್ದು ಹೋಯಿತು ಎಂದು ಹೇಳಿವೆ.

  ಹಾಗಾದರೆ ಒಪ್ಪಂದದ ಏಕಾಏಕಿ ರದ್ದಾಗಲು ಕಾರಣವಾದ ಮೂರು ವಾರಗಳಲ್ಲಿ ಏನಾಯಿತು? 

  ಜೂನ್ ಅಂತ್ಯದ ವೇಳೆಗೆ ಏನಾಯಿತು?

  ಜೂನ್ 25 ರಂದು, ಆರೋಗ್ಯ ಸಚಿವಾಲಯದ ಆಮದು ಮುಖ್ಯಸ್ಥ ಲೂಯಿಸ್ ರಿಕಾರ್ಡೊ ಮಿರಾಂಡಾ ಮತ್ತು ಅವರ ಸಹೋದರ ಸಂಸದ ಲೂಯಿಸ್ ಮಿರಾಂಡಾ ಅವರು  ಸಂಸದೀಯ ಸಮಿತಿ ಎದುರು ಹೀಗೆ ಹೇಳಿಕೆ ಕೊಟ್ಟಿದ್ದು, ಕೊವಾಕ್ಸಿನ್ ಖರೀದಿಗೆ ಉನ್ನತ ಅಧಿಕಾರಿಗಳಿಂದ ಸಾಕಷ್ಟು ಒತ್ತಡವನ್ನು ಅನುಭವಿಸ ಬೇಕಾಯಿತು. ಮಾರ್ಚ್​ ವೇಳೆಯಲ್ಲಿ ಈ ವಿಷಯದ ಬಗ್ಗೆ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರೊಂದಿಗೆ ಈ ವಿಚಾರವಾಗಿ ಸಾಕಷ್ಟು ಒತ್ತಡದವಿದೆ ಎಂದು ಪ್ರಸ್ತಾಪ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

  ಆದರೆ ಅದೇ ದಿನ, ಕೋವಾಕ್ಸಿನ್ ಒಪ್ಪಂದದಲ್ಲಿ ಯಾವುದೇ ಅಕ್ರಮಗಳು ಅಥವಾ ಹೆಚ್ಚಿನ ಬೆಲೆಗೆ ನಾವು ಅದನ್ನು ಖರೀದಿ ಮಾಡುತ್ತಿಲ್ಲ ಎಂದು ಅಧ್ಯಕ್ಷ ಬೋಲ್ಸನಾರೊ ಬಹಿರಂಗ ಹೇಳಿಕೆ ನೀಡಿದರು, ಆದರೆ ಕೆಲವರು  ಯುಎಸ್ ತನ್ನ ಫೈಜರ್​ ಲಸಿಕೆಯನ್ನು ಕಡಿಮೆ ಬೆಲೆಗೆ ನೀಡಲು ಮುಂದಾಗಿರುವಾಗಲೂ ಭಾರತ್ ಬಯೋಟೆಕ್‌ನೊಂದಿಗೆ ಒಪ್ಪಂದಕ್ಕೆ ಮೊಹರು ಹಾಕಲು ಕಾರಣವೇನೆಂದು ಕೆಲವರು ಪ್ರಶ್ನೆ ಎತ್ತಿದರು.

  ಈ ಎಲ್ಲಾ ಬೆಳವಣಿಗೆಗಳ ತರುವಾಯ, ನಾಲ್ಕು ದಿನಗಳ ನಂತರ, ಜೂನ್ 29 ರಂದು, 321 ಮಿಲಿಯನ್ ಮೌಲ್ಯದ 20 ಮಿಲಿಯನ್​ ಕೋವ್ಯಾಕ್ಸಿನ್ ಪೂರೈಕೆಗೆ ಮಾಡಿಕೊಂಡಿದ್ದ​  ಭಾರತ್ ಬಯೋಟೆಕ್ ಜೊತೆಗಿನ ಒಪ್ಪಂದವನ್ನು ರದ್ದು ಮಾಡಲಾಯಿತು. ಆರೋಗ್ಯ ಸಚಿವಾಲಯದ ಲಾಜಿಸ್ಟಿಕ್ಸ್ ಮುಖ್ಯಸ್ಥ ರಾಬರ್ಟೊ ಫೆರೀರಾ ಡಯಾಸ್ ಅವರನ್ನು ಬೋಲ್ಸೊನಾರೊ ಈ ವಿಚಾರವಾಗಿ ವಜಾ ಮಾಡಿದರು, ಅವರು ಕರೋನ  ಲಸಿಕೆ ವ್ಯವಹಾರದಲ್ಲಿ ಲಂಚ ಕೇಳಿದ್ದಾರೆ ಎನ್ನುವ ಆರೋಪ ಹೊತ್ತಿದ್ದಾರೆ.

  ಜೂನ್ 30 ರಂದು, ಭಾರತ್ ಬಯೋಟೆಕ್ ಸಂಸ್ಥೆಯು ಬ್ರೆಜಿಲ್-ಕೊವಾಕ್ಸಿನ್ ಒಪ್ಪಂದದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಎಲ್ಲಾ ಆರೋಪಗಳನ್ನು ನಿರಾಕರಿಸಿತು ಮತ್ತು ಯಾವುದೇ ಮುಂಗಡ ಪಾವತಿಗಳನ್ನು ನಾವು ಸ್ವೀಕರಿಸಲಿಲ್ಲ ಹಾಗೂ ಬ್ರೆಜಿಲ್​ ಆರೋಗ್ಯ ಸಚಿವಾಲಯಕ್ಕೆ ಯಾವುದೇ ಲಸಿಕೆಗಳನ್ನು ನೀಡಿಲ್ಲ ಎಂದು ಕಂಪೆನಿ ಹೇಳಿತ್ತು. ಕೋವಾಕ್ಸಿನ್ ಅನ್ನು ಬ್ರೆಜಿಲ್‌ಗೆ ಪ್ರತಿ ಡೋಸ್‌ಗೆ 15 ಯುಎಸ್​ ಡಾಲರ್​ ದರದಲ್ಲಿ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಕಂಪನಿ ತಿಳಿಸಿತ್ತು.

  ಜುಲೈ ಪ್ರಾರಂಭದಲ್ಲಿ ಏನಾಯಿತು?

  ಜುಲೈ 5 ರಂದು, ಭಾರತ್ ಬಯೋಟೆಕ್ ತಾನು  ಜೂನ್​ 29 ರಂದು ಹೇಳಿದ್ದ ಹೇಳಿಕೆಯನ್ನು ಬದಲಾಯಿಸಿತು, ಅದು "ತುರ್ತು ಬಳಕೆಗೆ ಎಂದು 2021 ಜೂನ್ 4ನೇ ತಾರೀಕು ವ್ಯಾಕ್ಸಿನ್​ ನೀಡಲಾಗಿದೆ" ಎಂದು ಹೇಳಿತು. ಹಾಗೂ ಈ ಮಾತನ್ನು ದೇಶದ ಆರೋಗ್ಯ ನಿಯಂತ್ರಕ ಅನ್ವಿಸಾ (ಅಜೆನ್ಸಿಯಾ ನ್ಯಾಶನಲ್ ಡಿ ವಿಜಿಲಾನ್ಸಿಯಾ ಸ್ಯಾನಿಟೇರಿಯಾ) ಆರೋಗ್ಯ ಸಚಿವಾಲಯವು ಕೋವಾಕ್ಸಿನ್ ಅನ್ನು ಅಸಾಧಾರಣವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿತ್ತು ಹಾಗೂ ಅದರ ಬಳಕೆಯನ್ನು ಒಂದು ಮಿತಿಯಲ್ಲಿ ಮಾಡಬೇಕು ಎಂದು ಹೇಳಿರುವುದಾಗಿ ವರದಿಯಾಯಿತು.

  ಜುಲೈ ಅಂತ್ಯದ ವೇಳೆಗೆ ಏನಾಯಿತು?

  ಜುಲೈ 23 ರಂದು, ಭಾರತ್ ಬಯೋಟೆಕ್ ಪ್ರೆಸಿಸಾ ಮೆಡಿಸಿಮೆಂಟೋಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್‌ನೊಂದಿಗೆ ತನ್ನ ಒಪ್ಪಂದವನ್ನು ಕೊನೆಗೊಳಿಸಿತು. ಇದಲ್ಲದೆ, ಬ್ರೆಜಿಲ್​ ಸರ್ಕಾರಿ ಸಂಸ್ಥೆ ಅನ್ವಿಸಾ ಅದೇ ದಿನ ಕೊವಾಕ್ಸಿನ್ ನೀಡುವುದನ್ನು ನಿಲ್ಲಿಸಬೇಕು ಎಂದು ಆದೇಶ ಹೊರಡಿಸಿತು.

  ಜುಲೈ 24 ರಂದು ಬ್ರೆಜಿಲ್ ಭಾರತ್ ಬಯೋಟೆಕ್‌ ತಯಾರಿಸಿರುವ ಕೋವ್ಯಾಕ್ಸಿನ್​ ತುರ್ತು ಬಳಕೆ ವಿನಂತಿಯನ್ನು ಅಧಿಕೃತವಾಗಿ ರದ್ದುಗೊಳಿಸಿತು. ಕೊವಾಕ್ಸಿನ್‌ನ ತುರ್ತು ಬಳಕೆಗೆ ಎಂದು ಇದ್ದ ಲಸಿಕೆಯನ್ನು ಬಳಸದೆ ಇರುವ ಜೊತೆಗೆ ಎಲ್ಲಾ ರೀತಿಯ ಒಪ್ಪಂದವನ್ನು ರದ್ದು ಮಾಡಲು ನಿರ್ಧರಿಸಲಾಗಿದೆ ಎಂದು ಬ್ರೆಜಿಲ್‌ನ ರಾಷ್ಟ್ರೀಯ ಆರೋಗ್ಯ ಕಣ್ಗಾವಲು ಸಂಸ್ಥೆ ತಿಳಿಸಿದೆ. ಎರಡು ದಿನಗಳ ನಂತರ, ಈ ಲಸಿಕೆಯನ್ನು ಬ್ರೆಜಿಲ್​ನಲ್ಲಿ ಹಂಚಲು ಅನುಮತಿ ತೆಗೆದುಕೊಂಡಿದ್ದ ಮಧ್ಯವರ್ತಿ ಸಂಸ್ಥೆಗಳಲ್ಲಿ ಒಂದಾದ ಪ್ರೆಸಿಸಾ ಕೋರಿಕೆಯ ಮೇರೆಗೆ ಕೋವಕ್ಸಿನ್‌ನ ಹಂತ 3 ಕ್ಲಿನಿಕಲ್ ಪ್ರಯೋಗಗಳನ್ನು ಅನ್ವಿಸಾ ರದ್ದುಗೊಳಿಸಿತು.

  ಇದನ್ನೂ ಓದಿ: ವೈದ್ಯಕೀಯ ಕಾಲೇಜು ಪ್ರವೇಶ: ಒಬಿಸಿಗೆ ಶೇ.27, ಇಡಬ್ಲ್ಯೂಎಸ್‌ಗೆ ಶೇ.10 ಮೀಸಲಾತಿ ಘೋಷಿಸಿದ ಕೇಂದ್ರ ಸರ್ಕಾರ

  ಕೋವಕ್ಸಿನ್ ಆಮದು ಮತ್ತು ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸರ್ಕಾರಿ ಆಡಳಿತ ಮಂಡಳಿ ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಅನ್ವಿಸಾ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. 

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: