ಜಾಗತಿಕ ಮಟ್ಟದಲ್ಲಿ(Global) ಮತ್ತೊಮ್ಮೆ ಕೋವಿಡ್-19, (Covid-19)ಹೊಸ ರೂಪಾಂತರಿ ಓಮೈಕ್ರಾನ್(Omicron) ಪ್ರಕರಣಗಳ ಸಂಖ್ಯೆ(Number) ಏರುಗತಿಯಲ್ಲಿದೆ. ಕೊರೋನಾಗಿಂತ(Corona) 10 ಪಟ್ಟು ವೇಗವಾಗಿ ಹರಡುವ ಓಮಿಕ್ರಾನ್ ಆತಂಕ ಹೆಚ್ಚಿಸಿದೆ. ಹೀಗಾಗಿ ಮಾಸ್ಕ್ (Mask)ಅನ್ನು ಸರಿಯಾದ ವಿಧಾನದಲ್ಲಿ ಧರಿಸುವುದು, ಸಾಮಾಜಿಕ ಅಂತರ(Social Distance) ಕಾಪಾಡಿಕೊಳ್ಳುವುದು ಸೇರಿದಂತೆ ಕೈಗಳನ್ನು ಸ್ಯಾನಿಟೈಸ್(Sanitizer) ಮಾಡಿಕೊಳ್ಳುವ ಅಭ್ಯಾಸವನ್ನು ಮರೆಯುವಂತಿಲ್ಲ. ಎರಡು ಡೋಸ್ ವಾಕ್ಸಿನ್(Vaccine) ಪಡೆದರೂ ಓಮಿಕ್ರಾನ್ ಸೋಂಕು ತಗುಲುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿಕೊಂಡ ಸೋಂಕು ಒಂದಾದ ಮೇಲೆ ಒಂದು ದೇಶಕ್ಕೆ ಹರಡುತ್ತಿದೆ.
ಕೊರೋನಾ ಸೋಂಕಿನ ಲಕ್ಷಣಗಳನ್ನೇ ಹೋಲುವ ಓಮೈಕ್ರಾನ್ ಸೋಂಕಿತರ ಲಕ್ಷಣಗಳು ಜನರನ್ನು ಆತಂಕಕ್ಕೀಡು ಮಾಡಿದೆ. ಓಮೈಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತಿದೆ ಮತ್ತು ತಜ್ಞರ ಪ್ರಕಾರ, ಮಕ್ಕಳು ಕರೋನಾದ ಈ ಸೋಂಕಿಗೆ ಹೆಚ್ಚು ಒಳಗಾಗುವ ಎಲ್ಲಾ ಸಾಧ್ಯತೆಗಳಿವೆ.
ಭಯಾನಕ ಅಂಶ ಬೆಳಕಿಗೆ ಬಂದಿದ್ದು ಎಲ್ಲರನ್ನು ಆತಂಕಕ್ಕೆ ಈಡಾಗುವಂತೆ ಮಾಡಿದೆ. ಅದರಲ್ಲೂ ತಿಂಗಳ ಆರಂಭದಲ್ಲಿ ಬೆರಳಣಿಕೆಯಷ್ಟು ಇದ್ದ ಸೋಂಕಿನ ಪ್ರಕರಣಗಳು ತಿಂಗಳ ಮಧ್ಯ ಭಾಗಕ್ಕೆ ಬರುವ ವೇಳೆಗೆ ದುಪ್ಪಟ್ಟಾಗಿ ಬೆಳಕಿಗೆ ಬರುತ್ತಿವೆ.
ಹೀಗಾಗಿ ಇನ್ನೆರಡು ತಿಂಗಳಲ್ಲಿ ಸೋಂಕಿನ ಪ್ರಮಾಣ ಇನ್ನೂ ಅಧಿಕವಾಗುವ ಸಾಧ್ಯತೆ ಇದೆ.. ಹೀಗಾಗಿ ವಯಸ್ಕರು ಜೊತೆಗೆ ಮಕ್ಕಳ ಆರೋಗ್ಯದ ಬಗ್ಗೆಯೂ ಚಿಂತೆ ಮಾಡಬೇಕಾದ ಆತಂಕ ಉಂಟಾಗಿದೆ.
ಮಕ್ಕಳನ್ನು ಬಾಧಿಸಲಿದೆ ಓಮೈಕ್ರಾನ್
ಸಾಮಾನ್ಯವಾಗಿ ವಯಸ್ಕರಿಗೆ ಹೋಲಿಕೆ ಮಾಡಿದರೆ ಓಮೈಕ್ರಾನ್ ಆತಂಕ ಮಕ್ಕಳಲ್ಲಿ ಅಧಿಕವಾಗಿದೆ. ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳು ಈ ಭಯಾನಕ ರೋಗಕ್ಕೆ ತುತ್ತಾಗುವ ಆತಂಕ ಇದೆ ಎಂಬ ಅಂಕಿ ಅಂಶಗಳು ಬೆಳಕಿಗೆ ಬಂದಿದೆ.
ವಿಶ್ವದಾದ್ಯಂತ ತಜ್ಞರು ನೀಡಿರುವ ಮಾಹಿತಿ ಪ್ರಕಾರ, ಮಕ್ಕಳಲ್ಲಿ ಕೊರೋನಾದ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಂಡಿವೆ. ಅಥವಾ ಕೆಲವೊಂದಷ್ಟು ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳು ಪತ್ತೆಯಾಗಿಲ್ಲ. ಆದರೆ ಕೆಲವೊಂದಷ್ಟು ಮಕ್ಕಳಲ್ಲಿ ರೋಗಲಕ್ಷಣಗಳು ತೀವ್ರ ಭಯಾನಕವಾಗಿ ಕಾಣಿಸಿಕೊಂಡಿವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗ್ರಾಮಗಳಲ್ಲಿ ವೇಗವಾಗಿ ಹರಡ್ತಿದೆ ಕೊರೋನಾ 3ನೇ ಅಲೆ! ಟಾಪ್ 20 ಡೇಂಜರ್ ಹಳ್ಳಿಗಳ ಪಟ್ಟಿ ಇಲ್ಲಿದೆ
ಮಕ್ಕಳಲ್ಲಿ ಕೊರೋನಾ ಲಕ್ಷಣಗಳು
ವಯಸ್ಕರು ಮತ್ತು ವಯಸ್ಸಾದವರು ಹಾಗೂ ಮಕ್ಕಳಲ್ಲಿ ವಿವಿಧ ಬಗೆಯ ರೀತಿಯಲ್ಲಿ ಕೊರೋನ ಲಕ್ಷಣಗಳು ಕಂಡುಬರುತ್ತಿವೆ. ಮೂರು ವರ್ಗದ ಜನರಲ್ಲಿ ಸಾಮಾನ್ಯವಾಗಿ ಕೆಲವೊಂದಷ್ಟು ಲಕ್ಷಣಗಳು ಕಂಡುಬರುತ್ತಿವೆ. ಅದರಲ್ಲಿ ಮುಖ್ಯವಾಗಿ ಜ್ವರ, ಆಯಾಸ, ಕೆಮ್ಮು, ರುಚಿ ಮತ್ತು ವಾಸನೆ ಕಳೆದುಕೊಳ್ಳುವುದು ಸಾಮಾನ್ಯ ಲಕ್ಷಣಗಳಾಗಿವೆ.
ತೀವ್ರವಾದ ರೋಗ ಲಕ್ಷಣ ಹೇಗಿರಲಿದೆ?
ಕೊರೊನಾದ ತೀವ್ರ ರೋಗಲಕ್ಷಣಗಳು ಮಕ್ಕಳಲ್ಲಿ ಮಲ್ಟಿಸಿಸ್ಟಮ್ ಉರಿಯೂತದ ಸಿಂಡ್ರೋಮ್ ಗೆ ಕಾರಣವಾಗುತ್ತಿದೆ ಎಂದು ಹೇಳಲಾಗಿದೆ. ವೈದ್ಯರ ಪ್ರಕಾರ, ಈ ಸಮಸ್ಯೆಯನ್ನು ಹೊಂದಿರುವ ಮಕ್ಕಳು ಹೃದಯ, ಶ್ವಾಸಕೋಶಗಳು, ರಕ್ತನಾಳಗಳು, ಮೂತ್ರಪಿಂಡಗಳು, ಜೀರ್ಣಾಂಗ ವ್ಯವಸ್ಥೆ, ಮೆದುಳು, ಚರ್ಮ ಅಥವಾ ಕಣ್ಣುಗಳಂತಹ ಅನೇಕ ಅಂಗಗಳಲ್ಲಿ ತೀವ್ರವಾದ ಉರಿಯೂತದಿಂದ ನರಳುತ್ತಿದ್ದಾರೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕ್ರೂಪ್ ಸಮಸ್ಯೆ
ಇನ್ನು ಉರಿಯೂತ ಮಾತ್ರವಲ್ಲದೆ ಮತ್ತೊಂದು ಬೆಚ್ಚಿಬೀಳಿಸುವ ಮಾಹಿತಿ ತಜ್ಞರಿಂದ ಬಂದಿದ್ದು, ಓಮಿಕ್ರಾನ್ ಸೋಂಕು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕ್ರೂಪ್ ಸಮಸ್ಯೆಯನ್ನು ಉಂಟುಮಾಡುತ್ತಿದೆಯಂತೆ. ಹೀಗಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ನಾಯಿಕೆಮ್ಮಿನಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ..
ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ಕೊರೋನಾ ಇಳಿಮುಖ, ಕುಸಿಯುತ್ತಿದೆಯಾ ಕೋವಿಡ್ ಟೆಸ್ಟ್ ಪ್ರಮಾಣ?
ಮಕ್ಕಳ ಉಸಿರಾಟದ ನಾಳಗಳಲ್ಲಿ ಸೋಂಕು ಪತ್ತೆ
ಕೊರೊನಾ ರೂಪಾಂತರಿ ಓಮಿಕ್ರಾನ್ ಅನಿಸಿಕೊಂಡಿರುವ ಮಕ್ಕಳ ಶ್ವಾಸಕೋಶದ ಪ್ರದೇಶದಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದೆ. ಇದು ಕ್ರೂಪ್ ಅನ್ನು ಉಂಟುಮಾಡುತ್ತದೆ. ಮೇಲ್ಭಾಗದ ಶ್ವಾಸಕೋಶದ ಪ್ರದೇಶದಲ್ಲಿನ ಸೋಂಕು ಉಸಿರಾಟದಲ್ಲಿ ತೊಂದರೆ ಉಂಟುಮಾಡಬಹುದು. ಇದರೊಂದಿಗೆ ಜ್ವರ, ಕರ್ಕಶ ಶಬ್ದ ಮತ್ತು ಉಸಿರಾಡುವಾಗ ಶಬ್ದದ ಸಮಸ್ಯೆ ಮಕ್ಕಳನ್ನ ಕಾಡತೊಡಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ