ಕಾರ್ಕಳದ ಜೇಸೀಸ್ ಆಂಗ್ಲ ಮಾದ್ಯಮ ಶಾಲೆ ಯ ಶಿಕ್ಷಕಿ ವಂದನಾ ರೈ ಅವರ ಪಾಠ ಹೇಳುವ ವಿಡಿಯೋಗಳು ಕೇವಲ ಆ ಶಾಲೆಯ ಮಕ್ಕಳು ಮಾತ್ರವಲ್ಲ ನಾಡಿನ ಎಲ್ಲಾ ಮಕ್ಕಳಿಗೂ ಹೊಸ ಹುರುಪು ನೀಡುತ್ತಿದೆ. ವಂದನಾ ರೈ ಅವರು ಪ್ರವೃತ್ತಿಯಲ್ಲಿ ನೃತ್ಯಪಟು, ನೃತ್ಯ ತರಗತಿಯನ್ನೂ ನಡೆಸುತ್ತಾರೆ.
ಉಡುಪಿ(ಸೆ.06): ಕೊರೋನಾ ನಮ್ಮ ಬದುಕಿಗೆ ಅನೇಕ ಪಾಠಗಳನ್ನು ಕಲಿಸಿದೆ. ಮಕ್ಕಳಿಗೆ ಪಾಠ ಕಲಿಸುವ ವಿಧಾನವೇ ಬದಲಾಗಿದೆ. ತರಗತಿಯ ನಾಲ್ಕು ಗೋಡೆಗಳ ಒಳಗೆ ನಿಂತು ಮಕ್ಕಳೊಂದಿಗೆ ಮುಖಾಮುಖಿಯಾಗಿ ಪಾಠ ಮಾಡುವ ಪದ್ಧತಿ ಮರೆಯಾಗಿದೆ. ಆನ್ಲೈನ್ ಶಿಕ್ಷಣ ಮುನ್ನೆಲೆಗೆ ಬಂದಿದೆ. ಆನ್ಲೈನ್ ಶಿಕ್ಷಣದಲ್ಲೂ ಆತ್ಮೀಯತೆ ಸಾಧ್ಯ ಅಂತ ಶಿಕ್ಷಕರೂ ಸಾಬೀತು ಮಾಡುತ್ತಿದ್ದಾರೆ. ನಲಿಯುತ್ತಾ ಪಾಠ ಮಾಡುವ ಅಪರೂಪದ ಶಿಕ್ಷಕಿಯ ಪಾಠದ ಶೈಲಿಗೆ ಮನಸೋತವರೇ ಹೆಚ್ಚು. ನೀವು ಡಾಕ್ಟರ್ ಆಗಿ, ಇಲ್ಲ ಇಂಜಿನಿಯರ್ ಆಗಿ, ದೇಶದ ಪ್ರತಿಷ್ಟಿತ ಕಂಪೆನಿಗಳ ಉನ್ನತ ಹುದ್ದೆಯನ್ನೇ ಅಲಂಕರಿಸಿ. ನೀವೆಷ್ಟೇ ಸಾಧನೆ ಮಾಡಿದರೂ ಒಂದನೇ ತರಗತಿಯಲ್ಲಿ ಪಾಠ ಮಾಡಿದ ಶಿಕ್ಷಕರನ್ನು ಮರೆಯುವುದುಂಟೇ ಹೇಳಿ? ಸಾಧ್ಯವೇ ಇಲ್ಲ ಎನ್ನಬಹುದು.
ಹೌದು, ಸ್ವಂತ ಮಕ್ಕಳಂತೆ ಮುದ್ದು ಮಾಡಿ ಅವರು ಪಾಠ ಕಲಿಸುವ ವಿಧಾನವೇ ಅದಕ್ಕೆ ಕಾರಣ. ಆದರೆ, ಕೊರೋನಾ ಕಾಲದಲ್ಲಿ ಪಠ್ಯಕ್ರಮವೇ ಬದಲಾಗಿದೆ. ಆನ್ಲೈನ್ ಶಿಕ್ಷಣಕ್ಕೆ ಆದ್ಯತೆ ಸಿಗುತ್ತಿದೆ. ಆನ್ ಲೈನ್ ಶಿಕ್ಷಣದಲ್ಲಿ ತರಗತಿಪಾಠದ ಫೀಲ್ ಕೊಡೋದು ಕಷ್ಟ. ಆದ್ರೆ ನಮ್ಮ ಶಿಕ್ಷಕರು ಅದೆಷ್ಟು ಅಪ್ಡೇಟ್ ಆಗಿದ್ದಾರೆ ಅಂದ್ರೆ, ಆನ್ ಲೈನ್ ಶಿಕ್ಷಣದಲ್ಲೂ ಶಹಬ್ಬಾಸ್ ಎನಿಸಿದ್ದಾರೆ. ಕುಣಿಯುತ್ತಾ ಪಾಠ ಮಾಡುವ ಕಾರ್ಕಳದ ಶಿಕ್ಷಕಿಯೊಬ್ಬರ ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ.
ಕಾರ್ಕಳದ ಜೇಸೀಸ್ ಆಂಗ್ಲ ಮಾದ್ಯಮ ಶಾಲೆ ಯ ಶಿಕ್ಷಕಿ ವಂದನಾ ರೈ ಅವರ ಪಾಠ ಹೇಳುವ ವಿಡಿಯೋಗಳು ಕೇವಲ ಆ ಶಾಲೆಯ ಮಕ್ಕಳು ಮಾತ್ರವಲ್ಲ ನಾಡಿನ ಎಲ್ಲಾ ಮಕ್ಕಳಿಗೂ ಹೊಸ ಹುರುಪು ನೀಡುತ್ತಿದೆ. ವಂದನಾ ರೈ ಅವರು ಪ್ರವೃತ್ತಿಯಲ್ಲಿ ನೃತ್ಯಪಟು, ನೃತ್ಯ ತರಗತಿಯನ್ನೂ ನಡೆಸುತ್ತಾರೆ. ನೃತ್ಯದ ಮೂಲಕ ಸುಲಭ ರೀತಿಯಲ್ಲಿ ಮಕ್ಕಳಿಗೆ ಪಾಠ ಮಾಡಬಹುದು ಅನ್ನೋದನ್ನು ಮನಗಂಡು ಲಾಕ್ಡೌನ್ ಸಮಯದಲ್ಲಿ ಅಭಿನಯ ಗೀತೆಗಳ ವಿಡಿಯೋ ಮಾಡಿದ್ರು.
ಇವರಿಂದ ಪ್ರೇರಿತರಾದ ಶಾಲೆಯ ಇತರ ಶಿಕ್ಷಕಿಯರೂ ಕೂಡಾ ಕೈ ಜೋಡಿಸಿ ಅನೇಕ ವಿಡಿಯೋ ಮಾಡಿ, ಆನ್ಲೈನ್ ಗೆ ಬಿಟ್ರು. ತುಂಬಾನೇ ಪರಿಣಾಮಕಾರಿಯಾಗಿ ಪಾಠ ಹೇಳುವ ಈ ವಿಧಾನ ಜನಪ್ರಿಯವಾಗ್ತಿದೆ. ಆನ್ಲೈನ್ ಶಿಕ್ಷಣ ಶುರುವಾದ ನಂತರವಂತೂ ಈ ವಿಡಿಯೋಗೆ ತುಂಬಾನೇ ಬೇಡಿಕೆ ಬರ್ತಿದೆ. ಆನ್ಲೈನ್ ಶಿಕ್ಷಣ ಶುರುವಾದಾಗ ಹೆಚ್ಚಿನ ಶಿಕ್ಷಕರು ಇದನ್ನೊಂದು ಸವಾಲಾಗಿ ಸ್ವೀಕರಿಸಿದರು. ತರಗತಿಯ ವಾತಾವರಣದಲ್ಲೇ ಪಾಠ ಮಾಡಿ ಸೈ ಎನಿಸಿದರು. ಇಂತಹಾ ಶ್ರಮಿಕ ಶಿಕ್ಷಕರಿಂದಲೇ ಆ ವೃತ್ತಿಗೊಂದು ಗೌರವ.
Published by:Ganesh Nachikethu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ