ಅರಸೀಕೆರೆಯಲ್ಲಿ ಬಡವರಿಗೆ 30 ಸಾವಿರ ಫುಡ್ ಕಿಟ್ ವಿತರಿಸಿದ ಬೆಂಗಳೂರು ಜಿಪಂ ಅಧ್ಯಕ್ಷ ಮರಿಸ್ವಾಮಿ

ಈ ಹಿಂದೆ ಅರಸೀಕೆರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮರಿಸ್ವಾಮಿ ಅವರು 30 ಸಾವಿರ ಮತಗಳನ್ನು ಪಡೆದು ಜೆಡಿಎಸ್​ಗೆ ಪ್ರಬಲ ಪೈಪೋಟಿ ನೀಡಿದ್ದರು. ಮೊದಲ ಬಾರಿಗೆ ಸ್ಪರ್ಧಿಸಿ ಎರಡನೇ ಅತೀಹೆಚ್ಚು ಮತಗಳನ್ನು ಪಡೆದಿದ್ದರು.

ಅರಸೀಕೆರೆಯಲ್ಲಿ ಫುಡ್ ಕಿಟ್ ವಿತರಿಸಿದ ಮರಿಸ್ವಾಮಿ

ಅರಸೀಕೆರೆಯಲ್ಲಿ ಫುಡ್ ಕಿಟ್ ವಿತರಿಸಿದ ಮರಿಸ್ವಾಮಿ

  • Share this:
ಹಾಸನ; ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ  ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿನ ಬಡವರು, ನಿರ್ಗತಿಕರಿಗೆ 30 ಸಾವಿರ ಆಹಾರದ ಕಿಟ್ ವಿತರಿಸುವ ಮೂಲಕ ಬೆಂಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ ಅವರು ಬಡವರಿಗೆ ಸಹಾಯಹಸ್ತ ಚಾಚಿದ್ದಾರೆ.

ಕಳೆದ ಹಲವು ವರ್ಷಗಳಿಂದಲೂ ಹಲವು ಸಾಮಾಜಿಕ ಕಾರ್ಯಕ್ರಮ ಮಾಡಿ ಸಮಾಜಸೇವೆ ಮಾಡುತ್ತಿರುವ ಮರಿಸ್ವಾಮಿ ಅವರು ಲಾಕ್ ಡೌನ್ ಆದಾಗಿನಿಂದ ಈವರೆಗೂ ಎಲ್ಲಾ ಸಮುದಾಯದ ಜನರಿಗೆ ಆಹಾರದ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇಂದು ಅರಸೀಕೆರೆಯ ಎಲ್ಲಾ 31 ವಾರ್ಡ್ ಗಳಲ್ಲಿ ಫುಡ್ ಕಿಟ್ ವಿತರಿಸಿದರು.

ಬಡವರಿಗೆ ಪ್ರತಿನಿತ್ಯ ಫುಡ್ ಕಿಟ್ ವಿತರಿಸುತ್ತಿದ್ದು, ಅರಸೀಕೆರೆ ತಾಲೂಕಿನಾದ್ಯಂತ ಎಲ್ಲಾ ಹೋಬಳಿಯಲ್ಲಿನ ಗ್ರಾಮಾಂತರ ಪ್ರದೇಶಗಳಲ್ಲಿ 15 ಸಾವಿರ ಫುಡ್ ಕಿಟ್ ವಿತರಿಸಿದ್ದಾರೆ.  ಇಂದು ಅರಸೀಕೆರೆ ಪಟ್ಟಣ ಪ್ರದೇಶದಲ್ಲಿನ ಬಡವರು, ನಿರ್ಗತಿಕರಿಗೆ 15 ಸಾವಿರ ಫುಡ್ ಕಿಟ್ ವಿತರಿಸಿದ್ದು ಒಟ್ಟು 30 ಸಾವಿರ ಫುಡ್ ಕಿಟ್ ವಿತರಿಸಿದ್ದಾರೆ.

ಈ ಹಿಂದೆ ಅರಸೀಕೆರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮರಿಸ್ವಾಮಿ ಅವರು 30 ಸಾವಿರ ಮತಗಳನ್ನು ಪಡೆದು ಜೆಡಿಎಸ್​ಗೆ ಪ್ರಬಲ ಪೈಪೋಟಿ ನೀಡಿದ್ದರು. ಮೊದಲ ಬಾರಿಗೆ ಸ್ಪರ್ಧಿಸಿ ಎರಡನೇ ಅತೀಹೆಚ್ಚು ಮತಗಳನ್ನು ಪಡೆದಿದ್ದರು.

ಫುಡ್ ಕಿಟ್ ವಿತರಿಸಿದ ಬಳಿಕ ಮಾತನಾಡಿದ ಮರಿಸ್ವಾಮಿ ಅವರು ಕೊರೋನಾವೆಂಬ ಮಹಾಮಾರಿ ಜನರನ್ನು ದೊಡ್ಡಮಟ್ಟದಲ್ಲಿ ಕಾಡುತ್ತಿದೆ. ಆದರಲ್ಲೂ ಸರ್ಕಾರದ ಸೂಚನೆಯಂತೆ ಲಾಕ್‌ಡೌನ್ ಆದ ದಿನದಿಂದಲೂ ಮೇಲಿನ ಎಲ್ಲಾ ಸಮುದಾಯಗಳು ಬಡತನದಿಂದ ನೊಂದು ಹೋಗಿವೆ. ಆದರ ಹಿನ್ನೆಲೆಯಲ್ಲಿ ಎಲ್ಲಾ ಬಡವರಿಗೆ ಕಿಟ್‌ಗಳನ್ನು ವಿತರಿಸುತ್ತಿದ್ದು, ಸಾಮಾಜಿಕ ಅಂತರದೊಂದಿಗೆ ನೊಂದ ಕುಟುಂಬಗಳಿಗೆ ವಿತರಣೆ ಮಾಡುತ್ತಿದ್ದೇವೆ ಎಂದರು.

ಇದನ್ನು ಓದಿ: ಕರ್ನಾಟಕದಲ್ಲಿ ಇಂದು 143 ಕೊರೋನಾ ಕೇಸ್ ಪತ್ತೆ; ರಾಜ್ಯಕ್ಕೆ ಸಂಕಷ್ಟ ತಂದ ಯುಎಇ, ಮುಂಬೈ ಪ್ರಯಾಣಿಕರು

ಮನೆಯಿಂದ ಆಚೆ ಬರುವ ಪ್ರತಿಯೊಬ್ಬರು ಮಾಸ್ಕ್  ಕಡ್ಡಾಯವಾಗಿ ಧರಿಸಬೇಕು. ಜನರು ತಮ್ಮ ಆರೋಗ್ಯ ದೃಷ್ಠಿಯಿಂದ ಹೊರಗಿನಿಂದ ತಮ್ಮ ಮನೆಗಳಿಗೆ ಬಂದ ನಂತರ ಶುಭ್ರವಾಗಿ ಕೈಕಾಲು ತೊಳೆದು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
First published: