HOME » NEWS » Coronavirus-latest-news » BENGALURU START UP COMPANY INTRODUCE CORONA OVEN RH

ಫ್ರಾನ್ಸ್ ಅಧ್ಯಕ್ಷನ ಮನೆಯಲ್ಲಿ ಬೆಂಗಳೂರಿನಲ್ಲಿ ತಯಾರಿಸಿದ ಕೊರೋನಾ ಓವನ್; ಇದರ ವಿಶೇಷವೇನು ಗೊತ್ತಾ?

ನೀವು ಮರುಬಳಕೆ ಮಾಡುವ ಎನ್ 95 ಮಾಸ್ಕ್, ಪಿಪಿಇ ಕಿಟ್, ದಿನಬಳಕೆಯ ವಸ್ತುಗಳಾದ ಪರ್ಸ್, ಕನ್ನಡಕ, ಲ್ಯಾಪ್‌ಟಾಪ್ ಎಲ್ಲವೂ ಇದರಲ್ಲಿಡಬಹುದು. ಇಷ್ಟು ಮಾತ್ರವಲ್ಲ ದಿನಸಿ ಸಾಮಾನು, ಹಣ್ಣು-ಹಂಪಲು, ಹಾಲು, ಆಹಾರ ಪಾಕೆಟ್ ಎಲ್ಲವನ್ನೂ ಈ ಓವನ್​ನಲ್ಲಿ ಇಡಬಹುದು. ಹತ್ತು ನಿಮಿಷ‌ ನಂತರ ಹೊರತೆಗೆದರೆ ಕೊರೋನಾ ವೈರಸ್ ಮಾತ್ರವಲ್ಲ ಬೇರೆ ವೈರಸ್, ಬ್ಯಾಕ್ಟೀರಿಯಾ ಸಹ ಬಾಧಿಸುವುದಿಲ್ಲ.

news18-kannada
Updated:June 2, 2020, 9:06 AM IST
ಫ್ರಾನ್ಸ್ ಅಧ್ಯಕ್ಷನ ಮನೆಯಲ್ಲಿ ಬೆಂಗಳೂರಿನಲ್ಲಿ ತಯಾರಿಸಿದ ಕೊರೋನಾ ಓವನ್; ಇದರ ವಿಶೇಷವೇನು ಗೊತ್ತಾ?
ಬೆಂಗಳೂರಿನಲ್ಲಿ ತಯಾರಾದ ಕೊರೋನಾ ಓವನ್​ನಲ್ಲಿ ಬಳಕೆಯ ವಸ್ತುಗಳನ್ನು ಸ್ಕ್ಯಾನ್ ಮಾಡುತ್ತಿರುವುದು.
  • Share this:
ಬೆಂಗಳೂರು; ವಿದೇಶಿ ವಸ್ತುಗಳು, ಬ್ರಾಂಡ್ ಐಟಮ್ ಮೇಲೆ ನಮಗೆ ಅಪಾರ ನಂಬಿಕೆ! ದೇಸಿ ಪ್ರಾಡೆಕ್ಟ್ ಬಗ್ಗೆ ಆಲಸ್ಯವೇ ಹೆಚ್ಚು. ಆದರೆ ಫ್ರಾನ್ಸ್ ದೇಶದ ಅಧ್ಯಕ್ಷನ ಮನೆಯಲ್ಲಿ ನಮ್ಮ ದೇಶದ, ಅದರಲ್ಲೂ ಬೆಂಗಳೂರಿನಲ್ಲಿ ತಯಾರಿಸಿದ ವಿಶೇಷ ಪೆಟ್ಟಿಗೆಯೊಂದು ಬಳಕೆಯಾಗುತ್ತಿದೆ. ಆ ಮನೆಯ ಹೊರಗಡೆಯಿಂದ ಯಾವುದೇ ವಸ್ತು ತಂದರೂ ಅದರಲ್ಲಿ ಹತ್ತು ನಿಮಿಷ ಇರಿಸಿ ಆನಂತರ ಮನೆಯ ಒಳಗಡೆ ತೆಗೆದುಕೊಂಡು ಹೋಗುತ್ತಾರೆ. ಕೊರೋನಾ ಸಂಕಷ್ಟಕರ ದಿನಗಳಲ್ಲಿ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ ತಯಾರಿಸಿದ ಈ ಪೆಟ್ಟಿಗೆ ಇದೀಗ ವಿಶ್ವಾದಾದ್ಯಂತ ಚಿರಪರಿಚಿತವಾಗುತ್ತಿದೆ.

ಅರೆ! ಇದೇನಿದು? ಫ್ರಾನ್ಸ್ ಅಧ್ಯಕ್ಷನ ಮನೆಯಲ್ಲಿ ಬೆಂಗಳೂರಿನಲ್ಲಿ‌ ತಯಾರಿಸಿದ ಮೆಷಿನ್ ಇರಿಸಿದ್ದಾರಾ? ಅದು ಕೊರೋನಾ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಎಂದು ಅಚ್ಚರಿ ಪಡಬೇಡಿ. ಹೊರಗಡೆಯಿಂದ ಮನೆಗೆ ತರುವ ವಸ್ತುಗಳಲ್ಲಿ ಅಂಟಿರುವ ಕೊರೋನಾ ವೈರಸ್ ಹೋಗಲಾಡಿಸಲು ನೂತನವಾಗಿ ತಯಾರಿಸಿರುವ 'ಕೊರೋನಾ ಓವನ್' ಸಹಕಾರಿ. ಇದಕ್ಕಾಗಿಯೇ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ‌ಮಾಕ್ರನ್ ಅರಮನೆಯಲ್ಲಿ ಕೊರೋನಾ ತಡೆಯಲು ಬೆಂಗಳೂರು ಓವನ್ ಬಳಕೆಯಾಗುತ್ತಿದೆ. ಅಂದಹಾಗೆ ಇಂಥ ವಿಶೇಷ ಓವನ್ ತಯಾರಿಸಿದ್ದು ಬೆಂಗಳೂರಿನ ಮತ್ತಿಕೇರಿ ಬಳಿ ಇರುವ ಸ್ಟಾರ್ಟ್ ಅಪ್ ಕಂಪನಿ.

ಇನ್ನು ಈ ಸಂಸ್ಥೆಯನ್ನು ಆರಂಭಿಸಿದವರು ಅಕ್ಷಯ್ ಸಿಂಘಾಲ್. ಈತನಿಗಿನ್ನೂ 30 ತುಂಬದ ತರುಣ. ಐಐಟಿ ಪದವೀಧರ ಅಕ್ಷಯ್ ನ್ಯಾನೋ ಟೆಕ್ನಾಲಜಿ ಬಗ್ಗೆ ಅಪಾರವಾದ ಆಸಕ್ತಿಯಿದೆ. ಈ ಕುರಿತ ಪಿಎಚ್ ಡಿ ಸಹ ಮಾಡುತ್ತಿದ್ದಾರೆ. ಇದರ ಹಿನ್ನೆಲೆ ಲೊಗೋ 9 ಸ್ಟಾರ್ಟ್ ಅಪ್ ಕಂಪನಿ ಕೊರೋನಾ ಓವನ್ ತಯಾರಿಸಿದೆ. ಕೊರೋನಾ ತುರ್ತು ಸ್ಥಿತಿಯಲ್ಲಿ ಕೇವಲ ಎರಡು ವಾರದಲ್ಲಿ ಈ ಕೊರೋನಾ ಓವನ್ ರೂಪುಗೊಂಡಿದೆ. ಈ ಕುರಿತು ಹೆಚ್ಚಿನ ಅಧ್ಯಯನ ಐಐಟಿಯಲ್ಲಿ ನಡೆಯುತ್ತಿದೆ.

ಏನಿದು ಕೊರೋನಾ ಓವನ್!

ಕಿಚನ್ ಓವನ್ ರೀತಿ ಕಾಣುವ ಕೊರೋನಾ ಓವನ್ ಹೊರಗಡೆಯಿಂದ‌ ಮನೆಗೆ ಬಂದ ಕೂಡಲೇ ಓವನ್​ನಲ್ಲಿ ಹತ್ತು ನಿಮಿಷ ನಿಮ್ಮ ವಸ್ತು ಇಟ್ಟರೆ ಕೊರೋನಾ ಸೋಂಕು ಮಾಯವಾಗುತ್ತದೆ. ನ್ಯಾನೋ ತಂತ್ರಜ್ಞಾನದಲ್ಲಿ ಶುದ್ದೀಕರಣ ಮಾಡುವ ಈ ಪೆಟ್ಟಿಗೆ ಅಲ್ಟ್ರಾ ವೈಲೆಟ್ ಜೆರ್ಮಿಸಿಡಾಲ್‌ ಇರಾಡಿಕೇಷನ್ ವ್ಯವಸ್ಥೆ ಮೂಲಕ ತಯಾರಿಸಲಾಗಿದೆ. ನೀವು ಮರುಬಳಕೆ ಮಾಡುವ ಎನ್ 95 ಮಾಸ್ಕ್, ಪಿಪಿಇ ಕಿಟ್, ದಿನಬಳಕೆಯ ವಸ್ತುಗಳಾದ ಪರ್ಸ್, ಕನ್ನಡಕ, ಲ್ಯಾಪ್‌ಟಾಪ್ ಎಲ್ಲವೂ ಇದರಲ್ಲಿಡಬಹುದು. ಇಷ್ಟು ಮಾತ್ರವಲ್ಲ ದಿನಸಿ ಸಾಮಾನು, ಹಣ್ಣು-ಹಂಪಲು, ಹಾಲು, ಆಹಾರ ಪಾಕೆಟ್ ಎಲ್ಲವನ್ನೂ ಈ ಓವನ್​ನಲ್ಲಿ ಇಡಬಹುದು. ಹತ್ತು ನಿಮಿಷ‌ ನಂತರ ಹೊರತೆಗೆದರೆ ಕೊರೋನಾ ವೈರಸ್ ಮಾತ್ರವಲ್ಲ ಬೇರೆ ವೈರಸ್, ಬ್ಯಾಕ್ಟೀರಿಯಾ ಸಹ ಬಾಧಿಸುವುದಿಲ್ಲ.

ಇದನ್ನು ಓದಿ: ದೆಹಲಿಯಲ್ಲಿ ಕೊರೋನಾ ಅಟ್ಟಹಾಸ, ಹಾಸಿಗೆಗೆ ಪರದಾಟ, ಶವಸಂಸ್ಕಾರದ ಜಾಗಕ್ಕೆ ಹುಡುಕಾಟ

ಕೊರೋನಾ ಓವನ್ ಎರಡು ರೀತಿಯಲ್ಲಿ ತಯಾರಿಸಿದ್ದಾರೆ. ಕಚೇರಿ ಮತ್ತು‌ ಮನೆಯಲ್ಲಿ ಬಳಕೆ ಮಾಡುವ ಬಳಕೆಯಾಗುವಂತಹ 20 ಹಾಗು 33 ಲೀಟರ್ ಕೊರೋನಾ‌ ಓವನ್ ಹಾಗೂ ಆಂಬುಲೆನ್ಸ್, ಪೊಲೀಸ್ ಹಾಗೂ ಅತ್ಯವಶ್ಯಕ ವಸ್ತು ಸಾಗಣೆ ಬೈಕ್, ವಾಹನದಲ್ಲಿ ಹೊತ್ತೊಯ್ಯಬಲ್ಲ ಓವನ್ ಮತ್ತೊಂದು ರೀತಿಯದ್ದು. 20 ಲೀಟರ್ ಗಾತ್ರದ ಪೋರ್ಟಬಲ್ ಓವನ್ ತಯಾರಿ ವಿದ್ಯುತ್ ಸಂಪರ್ಕ‌ ಹಾಗೂ ಬ್ಯಾಟರಿ ಚಾಲಿತ ಕೊರೋನಾ ಓವನ್ ನಿರ್ಮಿಸಲಾಗಿದೆ. ಈಗಾಗಲೇ ಫ್ರಾನ್ಸ್ ಅಧ್ಯಕ್ಷರ ಮನೆಯಲ್ಲಿ ಬಳಕೆಯಾಗುತ್ತಿರುವ ಕೊರೋನಾ ಓವನ್​ಗೆ ಅಮೆರಿಕಾ ಹಾಗೂ ಯುರೋಪ್ ದೇಶಗಳಲ್ಲಿ ಬೇಡಿಕೆ ಆರಂಭವಾಗಿದೆ.ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಈ ಓವನ್ ಬಳಕೆಯಾಗುತ್ತಿದ್ದು, ಬೆಂಗಳೂರು ವಿಮಾನ ನಿಲ್ದಾಣ, ನಾರಾಯಣ ಹೃದಯಾಲಯ, ಕೆಲ ಪೊಲೀಸ್ ಸ್ಟೇಷನ್ ಗಳಲ್ಲಿ ಬಳಕೆಯಾಗುತ್ತಿದೆ. ವೈದ್ಯರು, ಆಸ್ಪತ್ರೆ ಅಗತ್ಯ ಸೇವೆ ನೀಡುವವರಿಗೆ ರಿಯಾಯಿತಿ ದರದಲ್ಲಿ ಓವನ್ ನೀಡಲಾಗುತ್ತಿದೆ ಎಂದು ಲೋಗೋ 9 ಕಂಪನಿಯ  ಸ್ಥಾಪಕ ಅಕ್ಷಯ್ ಸಿಂಘಾಲ್ ಹೇಳುತ್ತಾರೆ.

 
First published: June 2, 2020, 9:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories