ದೇವನಹಳ್ಳಿ(ಆ.12): ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಕೊರೋನಾ ಸೊಂಕಿನ ವಿರುದ್ಧ ಗೆದ್ದು ಬಂದು ಮತ್ತೆ ಲವಲವಿಕೆಯಿಂದ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಕೊರೋನಾ ಸೊಂಕಿಗೆ ಒಳಗಾದ ತಮ್ಮ ಅನುಭವನ್ನು ನ್ಯೂಸ್-18 ಕನ್ನಡದೊಂದಿಗೆ ಹಂಚಿಕೊಂಡ ಜಿಲ್ಲಾಧಿಕಾರಿಗಳು, ಕೊರೋನ ಪಾಸಿಟಿವ್ ಎಂದ ಕೂಡಲೇ 5-10 ನಿಮಿಷ ಆತಂಕ ಆಗಿತ್ತು. ಅಮೇಲೆ ಎಲ್ಲವೂ ಸರಿಹೋಯ್ತು ಎಂದರು.
ನಿನಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದರೇ ಎಂಥವರಿಗೂ ಆತಂಕ ಶುರುವಾಗುತ್ತದೆ ನಿಜ. ಆದರೆ, ನನಗೆ ಹೀಗೆಂದಾಗ ಸ್ವಲ್ಪ ಹೊತ್ತು ಯೋಚನೆ ಮಾಡಿದೆ. ಇಡೀ ಜಿಲ್ಲೆಗೆ ಧೈರ್ಯ ತುಂಬುತ್ತಿದ್ದೇವೆ, ನಾವು ಕೊರೋನಾಗೆ ಹೆದರಿಗೆ ಭಯ ಬಿದ್ದರೇ ಹೇಗೆ? ಎಂದು ಮನಸ್ಸಿನಲ್ಲಿ ಇದ್ದ ಆತಂಕ ದೂರ ಮಾಡಿದೆ ಎಂದರು. ಹಾಗೆಯೇ ಆತಂಕದಲ್ಲಿದ್ದ ನನಗೆ ಸರ್ಕಾರಿ ಅಧಿಕಾರಿಗಳು, ಮಾಧ್ಯಮ ಮಿತ್ರರು ಸೇರಿ ಎಲ್ಲರೂ ನನಗೆ ಧೈರ್ಯ ತುಂಬಿದರು ಎಂದರು.
ಇನ್ನು, ನನಗೆ ಪಾಸಿಟಿವ್ ಎಂದ ಕೂಡಲೇ ಮನೆಯಲ್ಲೇ ಕ್ವಾರಂಟೈನ್ ಆದೆ. ಮನೆಯವರು ಬಾಗಿಲ ಬಳಿ ಬಂದು ಕದ ತಟ್ಟಿ ಊಟ, ಕಾಫಿ, ತಿಂಡಿ ನೀಡುತ್ತಿದ್ದರು. ಬಾಗಿಲು ತೆರೆದು ತೆಗೆದುಕೊಂಡು ಆಹಾರ ಸೇವನೆ ಮಾಡುತ್ತಿದ್ದೆ. ಇದರ ಮಾರನೇ ದಿನ ಬೆಳಿಗ್ಗೆಯೇ ಆಸ್ಪತ್ರೆಗೆ ದಾಖಲಾದೆ ಎಂದರು.
ಸ್ವಲ್ಪ ಜ್ವರ ಇದ್ದಿದ್ದರಿಂದ ಆಸ್ಪತ್ರೆಗೆ ದಾಖಲಾಗಿ 10 ದಿನಗಳ ಕಾಲ ಚಿಕಿತ್ಸೆ ಪಡೆದೆ. ಒಂದೆರಡು ದಿನದಲ್ಲಿ ಜ್ವರದಿಂದ ಗುಣಮುಖನಾದೆ, ಆದರೆ ಕೊರೊನಾ ಲಕ್ಷಣಗಳು ಮಾತ್ರ ಆಗಿಯೇ ಇತ್ತು. ಸ್ವಲ್ಪ ಆಯಾಸ, ಆಹಾರದ ರುಚಿ ತಿಳಿಯುತ್ತಿರಲಿಲ್ಲ. ಕ್ವಾರಂಟೈನ್ನಲ್ಲಿ ಯೋಗ, ಪ್ರಾಣಯಾಮ, ಧ್ಯಾನ ಮಾಡುತ್ತಾ ಕಚೇರಿ ಕೆಲಸ ಮಾಡುತ್ತಿದ್ದೆ ಎಂದೇಳಿದರು.
ಇದನ್ನೂ ಓದಿ: HBD Siddaramaiah: 73ನೇ ವಸಂತಕ್ಕೆ ಕಾಲಿಟ್ಟ ಸಿದ್ದರಾಮಯ್ಯ: ಹೈಕಮಾಂಡ್ ಮೀರಿ ಬೆಳೆದ ಸಿದ್ದು ನಡೆದಿದ್ದೆಲ್ಲ ಇತಿಹಾಸ
ಕೊರೋನಾ ಸೊಂಕಿಗೆ ಒಳಗಾದವರು ಆತಂಕ ಭಯಪಡಬಾರದು. ಬದಲಿಗೆ ವೈದ್ಯರ ಸಲಹೆ ಅನುಸರಿಸಬೇಕು. ಬಿಸಿ ನೀರು ಕುಡಿಯಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಹಿರಿಯ ಜೀವಿಗಳು ಮನೆಯಿಂದ ಅನವಶ್ಯಕ ಓಡಾಡಬಾರದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕಿವಿಮಾತು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ