• Home
 • »
 • News
 • »
 • coronavirus-latest-news
 • »
 • ಮುಸ್ಲಿಂ ಬಾಲಕ ನಾನು ಪೊಲೀಸ್ ಆಗಬೇಕು ಎಂದಾಗ ಪೊಲೀಸ್ ಅಧಿಕಾರಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಮುಸ್ಲಿಂ ಬಾಲಕ ನಾನು ಪೊಲೀಸ್ ಆಗಬೇಕು ಎಂದಾಗ ಪೊಲೀಸ್ ಅಧಿಕಾರಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಪೊಲೀಸ್​​ ಅಧಿಕಾರಿ ಮಹಾಂತೇಶ್​​ ಬನ್ನಪ್ಪಗೌಡರ್​​

ಪೊಲೀಸ್​​ ಅಧಿಕಾರಿ ಮಹಾಂತೇಶ್​​ ಬನ್ನಪ್ಪಗೌಡರ್​​

ಎರಡು ವಾರಗಳ ಹಿಂದೆ ನಡೆದ ಈ ಘಟನೆಯನ್ನು ಪೊಲೀಸ್​​ ಅಧಿಕಾರಿ ಮಹಾಂತೇಶ್​​ ಬಾನಪ್ಪಗೌಡರ್​​​ ತಮ್ಮ ಫೇಸ್ಬುಕ್ಕಿನಲ್ಲಿ ಬರೆದುಕೊಂಡಿದ್ಧಾರೆ. ಇದೀಗ ಬಾಲಕನೊಂದಿಗೆ ತನ್ನ ಫೋಟೋ ಜತೆಗೆ ಹಾಕಿದ್ದ ಪೋಸ್ಟ್​ ತುಂಬಾ ವೈರಲ್​​ ಆಗಿದೆ.

 • Share this:

  ಬೆಂಗಳೂರು(ಏ.16): ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ಮಾರ್ಚ್ 10ನೇ ತಾರೀಕಿನಂದು ನಡೆದ ನಿಜಾಮುದ್ದೀನ್ ಧಾರ್ಮಿಕ ಸಭೆ ಈಗ ದೇಶಾದ್ಯಂತ ಆತಂಕದ ಅಲೆಯನ್ನು ಸೃಷ್ಟಿಸಿದೆ. ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಮುಸ್ಲಿಂ ಸಮುದಾಯದ ತಬ್ಲಿಫಿ ಜಮಾತ್ ಧಾರ್ಮಿಕ ಸಭೆ ನಡೆದಿತ್ತು. ಈ ಸಭೆಯಲ್ಲಿ ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಅನೇಕ ದೇಶಗಳ ವಿದೇಶೀಯರು ಸೇರಿದಂತೆ ಸುಮಾರು 2,000ಕ್ಕೂ ಅಧಿಕ ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಸುಮಾರು ಜನ ಸಾವನ್ನಪ್ಪಿದ್ದರು. ಇಷ್ಟು ಮಂದಿಗೆ ಕೊರೋನಾದಿಂದಲೇ ಮೃತಪಟ್ಟರು ಎಂಬುದು ಆತಂಕದ ಸಂಗತಿ. ದಿನೇದಿನೇ ಕೊರೋನಾ ತೀವ್ರಗೊಳ್ಳುತ್ತಿದ್ದಂತೆಯೇ ಇಡೀ ದೇಶ ಲೌಕ್​​ಡೌನ್​​ ಮಾಡಿ ಆದೇಶ ಹೊರಡಿಸಿದ್ದ ಹೊತ್ತಲ್ಲೇ ಹೀಗೆ ಧಾರ್ಮಿಕ ಸಭೆಯನ್ನು ಆಯೋಜಿಸಿ ಈ ಪ್ರಮಾಣದಲ್ಲಿ ಆತಂಕ ಸೃಷ್ಟಿಸಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆಯೇ ಈ ಧಾರ್ಮಿಕ ಸಭೆ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಒಂದು ವರ್ಗವಂತೂ ದೇಶದಲ್ಲಿ ಕೊರೋನಾ ಹರಡಲು ಇಡೀ ಮುಸ್ಲಿಂ ಸಮುದಾಯವೇ ಕಾರಣ ಎಂದು ಆರೋಪಿಸುತ್ತಿದೆ. ಹೀಗಿರುವಾಗ ಬೆಂಗಳೂರು ನಗರ ಪೊಲೀಸ್​​ ಅಧಿಕಾರಿ ಮತ್ತು ಮುಸ್ಲಿಂ ಬಾಲಕನೊಬ್ಬನ ನಡುವೆ ನಡೆದ ಸೌಹಾರ್ದಯುತ ಘಟನೆಯೊಂದು ನೆಟ್ಟಿಗರ ಗಮನ ಸೆಳೆದಿದೆ.

  ಹೌದು, ಕೊರೋನಾ ಲಾಕ್​​ಡೌನ್​​ ಸಂದರ್ಭದಲ್ಲಿ ಮನೆಯಿಂದ ಯಾರೇ ಹೊರಗೆ ಬರಲೀ ಚಿಕ್ಕವರಾಗಲೀ, ದೊಡ್ಡವರಾಗಲೀ, ಹಿರಿಯರಾಗಲೀ ಪೊಲೀಸರು ಲಾಠಿ ಬೀಸುತ್ತಿದ್ದಾರೆ. ಇದೇ ಹೊತ್ತಲ್ಲೇ ಮುಸ್ಲಿಮರ ಏರಿಯಾಗಳಲ್ಲಂತೂ ಇಂತಹ ಘಟನೆಗಳು ಇತ್ತೀಚೆಗೆ ತುಸು ಹೆಚ್ಚೇ ನಡೆಯುತ್ತಿವೆ. ಈ ಮಧ್ಯೆ ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿ ಇದ್ದ ಪೊಲೀಸ್ ಅಧಿಕಾರಿ ಮಹಾಂತೇಶ್ ಬಾನಪ್ಪ ಎಂಬುವವರ ನಡೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

  ಪೊಲೀಸರು ಅಧಿಕಾರಿಯಾಗಬೇಕು ಎಂದು ಇಂಗಿತ ವ್ಯಕ್ತಪಡಿಸಿದ ಮುಸ್ಲಿಂ ಬಾಲಕನೋರ್ವನಿಗೆ ಪ್ರೀತಿಯಿಂದ ತನ್ನ ತಲೆ ಮೇಲಿದ್ದ ಟೊಪ್ಪಿ ನೀಡಿ ಹಾರೈಸಿದ ಪೊಲೀಸ್​​ ಅಧಿಕಾರಿ ಮಹಾಂತೇಶ್ ಬಾನಪ್ಪಗೌಡರ್​​ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

  ಎರಡು ವಾರಗಳ ಹಿಂದೆ ನಡೆದ ಈ ಘಟನೆಯನ್ನು ಪೊಲೀಸ್​​ ಅಧಿಕಾರಿ ಮಹಾಂತೇಶ್​​ ಬಾನಪ್ಪಗೌಡರ್​​​ ತಮ್ಮ ಫೇಸ್ಬುಕ್ಕಿನಲ್ಲಿ ಬರೆದುಕೊಂಡಿದ್ಧಾರೆ. ಇದೀಗ ಬಾಲಕನೊಂದಿಗೆ ತನ್ನ ಫೋಟೋ ಜತೆಗೆ ಹಾಕಿದ್ದ ಪೋಸ್ಟ್​ ತುಂಬಾ ವೈರಲ್​​ ಆಗಿದೆ.


  ಕೊರೊನಾ ಮರಣ ಮೃದಂಗದ ರಣಕಹಳೆಯಲ್ಲಿ ಕರ್ತವ್ಯದಲ್ಲಿದ್ದಾಗ ನಮ್ಮ ಠಾಣೆಯ ಮುಂಬಾಗದಲ್ಲಿ ಥಟ್ಟನೆ ಕಣ್ಣಿಗೆ ಬಿದ್ದದ್ದು ಈ ಪುಟ್ಟ ಮುಗ್ದ ಬಾಲಕ. ನನ್ನ ಪೋಲಿಸ್ ದಾಟಿಯಲ್ಲಿ ನಾನು ಆ ಬಾಲಕನನ್ನ ಏಯ್ ಪುಟ್ಟ ಎಲ್ಲೊ? ಎಲ್ಲಿ ಹೋಗ್ತಿದಿಯಾ ಅಂತ ಕೇಳಿದೆ..? ಈ ನನ್ನ ಖಡಕ್ ಧ್ವನಿ ಕೇಳಿ ಆತ ಥಟ್ಟನೆ ಕೈಯಲ್ಲಿದ್ದ ಪುಸ್ತಕವನ್ನು ಕೈಬಿಟ್ಟ..!! ಆತನ ಬಟ್ಟೆ ಬ್ಯಾಗ್ನಿಂದ ಹೋರಬಿದ್ದ ಪುಸ್ತಕವೇ 5ನೆಯ ತರಗತಿಯ ಸಮಾಜ ವಿಜ್ಞಾನ.

  ಇದನ್ನೂ ಓದಿ: ಕೊರೋನಾ ವೈರಸ್​​ ತಡೆಗೆ ಬಿಗಿಕ್ರಮ: ಏ.20ರಂದು ಸಂಪುಟ ಸಭೆ ಕರೆದ ಸಿಎಂ ಯಡಿಯೂರಪ್ಪ

  ಆತನ ಮುಖದಲ್ಲೂ ಭಯ, ದುಗುಡ ,ಆತಂಕ ನೋಡಿ ತಕ್ಷಣವೇ ಆತನ ಹತ್ತಿರ ಸಮಾಧಾನದಿಂದ, ಅಪ್ಪಿ ಹೆದರಬೇಡ ಎಲ್ಲಿ ಹೊರಟಿರುವೆ ಹೇಳು..? ನಾನು ಕೂಡ ನಿಮ್ಮ ಅಪ್ಪನ ಸ್ನೇಹಿತನೇ ನಿನ್ನನ್ನು ಮನೆಗೆ ಬಿಡುತ್ತೇನೆ ಅಂದಾಗ ಆತನ ಅಳುವ ಕಂಠದಲ್ಲಿ ನನಗೆ ತಂದೆ ಇಲ್ಲಾ, ಅಮ್ಮ ಮನೆ ಸ್ವಚ್ಚಗೊಳಿಸುತ್ತಿದ್ದಾಳೆ. ಅದಕ್ಕೆ ನನ್ನ ತಾಯಿ ನನಗೆ ನನ್ನ ಸ್ನೆಹಿತ ಲಿಂಗರಾಜೂ ಮನೆಗೆ ಅಭ್ಯಾಸಮಾಡಲು ಕಲುಹಿಸಿಕೊಟ್ಟಿದ್ದಾಳೆ ಎಂದ.

  ನನಗೆ ತಿಳಿಯದ ಹಾಗಯೆ ಆತನ ಮೇಲೆ ಅಪಾರ ಪ್ರೀತಿ ಬಂದೀತು. ಕೆಳಗೆ ಬಿದ್ದ ಪುಸ್ತಕ ಕೈಗೆತ್ತಿಕೊಟ್ಟು ಕೇಳಿದೆ, ಮರಿ... ಮುಂದೆ ನೀನು ಏನಾಗಬೇಕು ಎಂದುಕೊಂಡಿರುವೆ..? ಆಗ ಆತ ತಟ್ಟನೆ ಹೇಳಿದ... ಮೇರೆ ಕೊ ಪೋಲಿಸ ಬನ್ನಾ ಹೈ..! ಪ್ರೀತಿಯ ಅಪ್ಪುಗೆಯ ಮೂಲಕ, ಮಗು ಪೊಲೀಸ್ ಅಂದ್ರೆ ಭಯಪಡಬೇಡ, ಮುಂದೆ ಒಂದು ದಿನ ನೀನು ದೊಡ್ಡ ಪೋಲಿಸ್ ಅಧಿಕಾರಿಯಾಗುವೆ ಎಂದು ಹಾರೈಸಿದೆ. ಆತ ಆಶ್ಚರ್ಯದಿಂದ ನೊಡುತ್ತಿದ್ದ ನನ್ನ ಪೋಲಿಸ್ ಇಲಾಖೆಯ ಹೆಮ್ಮೆಯ ಪ್ರತೀಕವಾದ ಪೊಲೀಸ್ ಟೊಪಿಯನ್ನು ಆತನ ತಲೆಯ ಮೇಲಿರಿಸಿ ಪ್ರೀತಿಯಿಂದಾ ಫೋಟೋ ಕ್ಲಿಕ್ಕಿಸಿಕೊಂಡೆ” ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

  First published: