ಕೊರೋನಾ ಭೀತಿ; ವಿದೇಶದಿಂದ ಮರಳಿದವರ ಮೇಲೆ ತೀವ್ರ ನಿಗಾ; ಕಾರ್ಯಾಚರಣೆಗೆ 500 ಪೊಲೀಸರ ತಂಡ ರಚನೆ

ಶಂಕಿತರನ್ನು ಭೇಟಿ ಮಾಡಿ ಸೂಚನೆ ನೀಡಲಿರುವ ಪೊಲೀಸ್ ಸಿಬ್ಬಂದಿಗಳು ನಿಯಮಿತವಾಗಿ ಅವರ ಮೇಲ್ವಿಚಾರಣೆ ನಡೆಸಲಿದ್ದಾರೆ. ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಎಚ್ಚರಿಕೆಯಿಂದಿರುವಂತೆ ಮತ್ತು ಅವರೂ ಸಹ ತಪಾಸಣೆಗೆ ಒಳಗಾಗುವಂತೆ ಸಲಹೆ ನೀಡಿಲಿದ್ದಾರೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.

ಪೊಲೀಸರ ಪ್ರಾತಿನಿಧಿಕ ಚಿತ್ರ

ಪೊಲೀಸರ ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು : ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 8 ರಿಂದ ಮಾರ್ಚ್ 19 ರವರೆಗೆ ವಿದೇಶಗಳಿಂದ ಬೆಂಗಳೂರಿಗೆ ಮರಳಿದ 43,000 ಜನರನ್ನು ಪತ್ತೆಹಚ್ಚಲು ಮತ್ತು ಅವರ ಮೇಲೆ ತೀವ್ರ ನಿಗಾ ವಹಿಸಲು ಬೆಂಗಳೂರು ನಗರ ಪೊಲೀಸರ 500 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳ ಮೂಲಕ ವಿದೇಶದಿಂದ ಆಗಮಿಸಿರುವವರನ್ನು ಸಂಪರ್ಕಿಸಿ ಅವರನ್ನು ಮನೆಯಲ್ಲೇ ತೀವ್ರ ನಿಗಾದಲ್ಲಿ ಇರಿಸುವಂತೆ ಸೂಚಿಸಲು ಬೆಂಗಳೂರು ಪೊಲೀಸ್ ಇಲಾಖೆ ಮುಂದಾಗಿದೆ.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈ ಕುರಿತು ಮಾತನಾಡಿ, "ವಿದೇಶಗಳಿಂದ ಹಿಂದಿರುಗಿದ ಪ್ರತಿಯೊಬ್ಬ ಪ್ರಯಾಣಿಕರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿತ್ತು. ಈ ಫಾರ್ಮ್‌‌ನಲ್ಲಿ ಅವರ ವಿಳಾಸ, ಫೋನ್ ಸಂಖ್ಯೆಗಳು ಮತ್ತು ಇತರ ವಿವರಗಳನ್ನು ಒಳಗೊಂಡಿದೆ.

ನಾವು 15 ದಿನಗಳ ಕ್ವಾರಂಟೈನ್ (ಗೃಹಬಂಧನ) ದಿನದ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 8 ರಿಂದ ಆನಂತರ ಬೆಂಗಳೂರಿಗೆ ಆಗಮಿಸಿರುವ ಎಲ್ಲರ ಮಾಹಿತಿಯನ್ನೂ ಸಂಗ್ರಹಿಸಿದ್ದೇವೆ. ಮಾರ್ಚ್ 20 ರಿಂದ ಬಹುತೇಕ ಎಲ್ಲರನ್ನೂ ಸಂಪರ್ಕಿಸಿದ್ದೇವೆ. ಇವರನ್ನು ಆದಷ್ಟು ಮನೆಯಲ್ಲೇ ತೀವ್ರ ನಿಗಾದಲ್ಲಿ ಇರುವಂತೆ ಸೂಚಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ

"ಶನಿವಾರ ಸಂಜೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿ ಯುದ್ದೋಪಾದಿಯಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ. ಈ ಪ್ರಕಾರ ನಗರದ ಎಲ್ಲಾ 108 ಪೊಲೀಸ್ ಠಾಣೆಗಳನ್ನು ಪ್ರತಿನಿಧಿಸುವ ಸಿಬ್ಬಂದಿಗಳಿಗೆ ವಿದೇಶದಿಂದ ಆಗಮಿಸಿರುವವರ ಸಂಪೂರ್ಣ ಮಾಹಿತಿಯನ್ನು ರವಾನಿಸಲಾಗಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಮತ್ತು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಶಂಕಿತರನ್ನು ಭೇಟಿ ಮಾಡಿ ಅವರ ಕೈಗೆ ಮುದ್ರೆ ಹಾಕಿ 14 ದಿನಗಳ ಕಾಲ ಮನೆಯಲ್ಲಿಯೇ ಇರಲು ಸೂಚಿಸಲಿದ್ದಾರೆ.

ಶಂಕಿತರನ್ನು ಭೇಟಿ ಮಾಡಿ ಸೂಚನೆ ನೀಡಲಿರುವ ಪೊಲೀಸ್ ಸಿಬ್ಬಂದಿಗಳು ನಿಯಮಿತವಾಗಿ ಅವರ ಮೇಲ್ವಿಚಾರಣೆ ನಡೆಸಲಿದ್ದಾರೆ. ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಎಚ್ಚರಿಕೆಯಿಂದಿರುವಂತೆ ಮತ್ತು ಅವರೂ ಸಹ ತಪಾಸಣೆಗೆ ಒಳಗಾಗುವಂತೆ ಸಲಹೆ ನೀಡಿಲಿದ್ದಾರೆ" ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಕೊರೋನಾ ಭೀತಿ; ದೇಶದ 80 ಜಿಲ್ಲೆಗಳು ಶಟ್‌ಡೌನ್; ನೀವು ಏನು ಮಾಡಬಹುದು? ಏನು ಮಾಡುವಂತಿಲ್ಲ?
First published: