ವೈದ್ಯಕೀಯ ತುರ್ತು ಸೇವೆಗೆ ಬೆಂಗಳೂರು ನಗರದ ಪ್ರತಿ ಪೊಲೀಸ್ ಠಾಣೆಗೆ ತಲಾ 200 ಪಾಸ್

ಬೆಂಗಳೂರು ನಗರದಲ್ಲಿ ಡಿಸಿಪಿ ಕಚೇರಿಯಲ್ಲಿ ಮಾತ್ರ ಪಾಸ್​ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಿದ್ದವರು ದಾಖಲೆ ತೋರಿಸಿ, ಪಾಸ್​ಗಳನ್ನು ಪಡೆಯಬಹುದಾಗಿದೆ. ಆದರೆ, ಇದೀಗ ಈ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಚಿಂತನೆ ನಡೆಸಿದ್ದಾರೆ.

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

 • Share this:
  ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಇಡೀ ದೇಶವನ್ನು ಲಾಕ್​ಡೌನ್​ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅನಗತ್ಯವಾಗಿ ಯಾರೂ ಕೂಡ ಹೊರಗೆ ಅಡ್ಡಾವಂತಿಲ್ಲ ಎಂದು ಆದೇಶಿಸಲಾಗಿದೆ. ಆದರೆ, ಅಗತ್ಯ ವಸ್ತುಗಳ ಸರಬರಾಜು ಮಾಡುವವರಿಗೆ ಮತ್ತು ವೈದ್ಯಕೀಯ ತುರ್ತು ಸೇವೆ ನೀಡುವವರು ಹಾಗೂ ಪಡೆಯುವವರು ಓಡಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಪಾಸ್​ಗಳನ್ನು ವಿತರಿಸಾಗಿದೆ.

  ಬೆಂಗಳೂರು ನಗರದಲ್ಲಿ ಡಿಸಿಪಿ ಕಚೇರಿಯಲ್ಲಿ ಮಾತ್ರ ಪಾಸ್​ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಿದ್ದವರು ದಾಖಲೆ ತೋರಿಸಿ, ಪಾಸ್​ಗಳನ್ನು ಪಡೆಯಬಹುದಾಗಿದೆ. ಆದರೆ, ಇದೀಗ ಈ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಚಿಂತನೆ ನಡೆಸಿದ್ದಾರೆ.

  ಈ ಸಂಬಂಧ ಟ್ವೀಟ್ ಮಾಡಿರುವ ಕಮಿಷನರ್ ಭಾಸ್ಕರ್ ರಾವ್ ಅವರು, ಬೆಂಗಳೂರು ನಗರದ ಪ್ರತಿ ಪೊಲೀಸ್ ಠಾಣೆಗೆ ತಲಾ 200 ಪಾಸ್ ನೀಡಲು ಚಿಂತನೆ ಮಾಡಲಾಗಿದೆ.   ವೈದ್ಯಕೀಯ ತುರ್ತು ಸೇವೆ ಹಿನ್ನೆಲೆಯಲ್ಲಿ ಈ ಪಾಸ್ ನೀಡಲು ಉದ್ದೇಶಿಸಲಾಗಿದ್ದು, ಬೆಳಗ್ಗೆ ಪಾಸ್ ಪಡೆದು, ರಾತ್ರಿಯೊಳಗೆ ಪಾಸ್ ಹಿಂದಿರುಗಿಸಬೇಕು. ಉಳಿದ ವಿವರಗಳನ್ನು ಮುಂದೆ ತಿಳಿಸಲಾಗುವುದು, ಎಂದು ಹೇಳಿದ್ದಾರೆ.  ಇದನ್ನು ಓದಿ: ಸಿಬಿಎಸ್ಇಯ 1ರಿಂದ 8ನೇ ತರಗತಿವರೆಗೆ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತೆ ಎಚ್​ಆರ್​ಡಿ ಸಚಿವಾಲಯ ನಿರ್ದೇಶನ
  First published: